Home latest Crime News: ಪ್ರಿಯಕರನನ್ನು ಭೇಟಿಯಾಗದಂತೆ ತಡೆದ ತಾಯಿ! ಸಿಟ್ಟುಗೊಂಡ 16 ವರ್ಷದ ಬಾಲಕಿ ಏನು ಮಾಡಿದಳು...

Crime News: ಪ್ರಿಯಕರನನ್ನು ಭೇಟಿಯಾಗದಂತೆ ತಡೆದ ತಾಯಿ! ಸಿಟ್ಟುಗೊಂಡ 16 ವರ್ಷದ ಬಾಲಕಿ ಏನು ಮಾಡಿದಳು ಗೊತ್ತೇ? ನೀವು ಏನು ಊಹಿಸಿದರೋ ಅದಲ್ಲ, ಆದದ್ದೇ ಬೇರೆ….

Hindu neighbor gifts plot of land

Hindu neighbour gifts land to Muslim journalist

ತನ್ನ ಬಾಯ್‌ಫ್ರೆಂಡ್‌ನೊಂದಿಗೆ ಸಂಬಂಧವನ್ನು ವಿರೋಧಿಸಿದ ತಾಯಿಯನ್ನು 16ವರ್ಷದ ಮಗಳೋರ್ವಳು ಚಹಾದಲ್ಲಿ ವಿಷ ಬೆರೆಸಿ ತನ್ನ ಹೆತ್ತಮ್ಮನಿಗೆ ನೀಡಿದ ಆಘಾತಕಾರಿ ಘಟನೆಯೊಂದು ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ ನಡೆದಿದೆ.

ತನ್ನ ಬಾಯ್‌ಫ್ರೆಂಡ್‌ನನ್ನು ಭೇಟಿಯಾಗಿ ತಾಯಿ ತಡೆದಿದ್ದೇ ಈ ಎಲ್ಲಾ ಅವಘಡಕ್ಕೆ ಕಾರಣ ಎನ್ನಲಾಗಿದೆ. ಬಾಲಕಿಯ ಗೆಳೆಯ ಪರಾರಿಯಾಗಿದ್ದಾನೆ, ಬಾಲಕಿಯ ವಿಚಾರಣೆಯನ್ನು ಪೊಲೀಸರು ಮಾಡುತ್ತಿದ್ದಾರೆ.

ಬಾಲಕಿಯ ತಂದೆ ಬೇರೆ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದು, ಹುಡುಗಿ ತಾಯಿಯೊಂದಿಗೆ ವಾಸಿಸುತ್ತಿದ್ದು, ಅದೇ ಗ್ರಾಮದ ಹುಡುಗನೊಂದಿಗೆ ಸಂಬಂಧ ಹೊಂದಿದ್ದಾಳೆ. ತಾಯಿಗೆ ಇವರಿಬ್ಬರ ಸಂಬಂಧ ಗೊತ್ತಾದಾಗ ಬಾಲಕಿಯನ್ನು ಆಕೆಯ ಗೆಳೆಯನೊಂದಿಗೆ ಭೇಟಿಯನ್ನು ತಾಯಿ ವಿರೋಧಿಸಿದ್ದಾಳೆ. ಹೀಗಾಗಿ ಇವರಿಬ್ಬರ ಮಧ್ಯೆ ಆಗಾಗ್ಗೆ ಜಗಳವಾಗುತ್ತಿತ್ತು ಎಂದು ವರದಿಯಾಗಿದೆ. ಭೇಟಿ ಮಾಡಬಾರದೆಂಬ ಬೆದರಿಕೆಗೆ ಕೋಪಗೊಂಡ ಬಾಲಕಿ ತಾಯಿಗೆ ವಿಷ ನೀಡಲು ಉತ್ತೇಜಿಸಿರಬಹುದು ಎಂದು ಎಸ್‌ಎಚ್‌ಒ ಹೇಳಿದ್ದಾರೆ.

ಚಹಾ ಸೇವಿಸಿದ ತನ್ನ ತಾಯಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಾಗ ಬಾಲಕಿ ಗಾಬರಿಗೊಂಡಿದ್ದಾಳೆ. ಕೂಡಲೇ ನೆರೆಹೊರೆಯವರ ಸಹಾಯ ಪಡೆದಿದ್ದಾಳೆ. ಮಹಿಳೆ ತಾಯಿಯ ಹೆಸರು ಸಂಗೀತಾ ಯಾದವ್‌ (48). ಇದೀಗ ಇವರು ಅಪಾಯದಿಂದ ಪಾರಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿ ವಿಷ ತರಲು ತನ್ನ ಗೆಳಯನಿಗೆ ಹೇಳಿದ್ದು, ಇದನ್ನು ಪೊಲೀಸರಿಗೆ ತಿಳಿಸಿದ್ದಾಗಿ ವರದಿಯಾಗಿದೆ. ಈ ಘಟನೆ ಕುರಿತು ಪೊಲೀಸರು ಹದಿಹರೆಯದ ಬಾಲಕಿಯ ಮೇಲೆ ಹಾಗೂ ಆಕೆಯ ಪ್ರಿಯಕರನ ಮೇಲೆ ಪ್ರಕರಣ ದಾಖಲು ಮಾಡಿದ್ದಾರೆ.