Home latest Udupi: ಕಾರ್ಕಳ: ಧನುಷ್ ಆಚಾರ್ಯ ಕಲಾ ವಿಭೂಷಣ ಪ್ರಶಸ್ತಿಗೆ ಆಯ್ಕೆ

Udupi: ಕಾರ್ಕಳ: ಧನುಷ್ ಆಚಾರ್ಯ ಕಲಾ ವಿಭೂಷಣ ಪ್ರಶಸ್ತಿಗೆ ಆಯ್ಕೆ

Hindu neighbor gifts plot of land

Hindu neighbour gifts land to Muslim journalist

Udupi: ಕಾರ್ಕಳ ತಾಲೂಕು ನೀರೆ ಬಾದಾಮಿಕಟ್ಟೆ ನಿವಾಸಿ ಖ್ಯಾತ ಶಿಲ್ಪ ಕಲಾವಿದರಾದ ಧನುಷ್ ಆಚಾರ್ಯ ಅವರಿಗೆ ಕಲಾ ವಿಭೂಷಣ ಪ್ರಶಸ್ತಿ 2026 ನೀಡಿ ಗೌರವಿಸಲು ಆಯ್ಕೆ ಮಾಡಲಾಗಿದೆ.

ಶಿಲ್ಪಕಲಾ ಕ್ಷೇತ್ರದಲ್ಲಿ ತಮ್ಮದೇ ಆದ ವೈಶಿಷ್ಟ್ಯಪೂರ್ಣ ಶೈಲಿ, ಸೂಕ್ಷ್ಮತೆ ಹಾಗೂ ಪರಂಪರೆಯೊಡನೆ ಆಧುನಿಕತೆಯನ್ನು ಸಂಯೋಜಿಸಿದ ಕಲಾಕೃತಿಗಳ ಮೂಲಕ ಧನುಷ್ ಆಚಾರ್ಯ ಅವರು ಅಪಾರ ಮೆಚ್ಚುಗೆ ಗಳಿಸಿದ್ದಾರೆ. ದೇವಸ್ಥಾನ ಶಿಲ್ಪಗಳು, ದೇವತಾ ಮೂರ್ತಿಗಳು ಹಾಗೂ ಸಾಂಸ್ಕೃತಿಕ ಶಿಲ್ಪ ರಚನೆಯಲ್ಲಿ ಅವರ ಕೊಡುಗೆ ಗಣನೀಯವಾಗಿದ್ದು, ಹಲವಾರು ಪ್ರತಿಷ್ಠಿತ ಕಲಾವಿದರ ಸಾಲಿನಲ್ಲಿ ತಮ್ಮ ಸ್ಥಾನವನ್ನು ಸ್ಥಿರಪಡಿಸಿದ್ದಾರೆ.

ಧನುಷ್ ಆಚಾರ್ಯ ಅವರು ಯುವ ಶಿಲ್ಪಿಗಳಿಗೆ ಪ್ರೇರಣೆಯಾಗಿದ್ದು, ಕಲಾಸಂಸ್ಕೃತಿಯ ಉಳಿವಿಗೆ ತಮ್ಮ ಸೇವೆಯನ್ನು ಸಮರ್ಪಿಸಿದ್ದಾರೆ.