Home latest ಉಡುಪಿ:ಕೃಷ್ಣ ಮಠದ ಹಿಂಬದಿಯ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಕಾರಿನ ಗ್ಲಾಸ್ ಒಡೆದು 80 ಸಾವಿರ ರೂ...

ಉಡುಪಿ:ಕೃಷ್ಣ ಮಠದ ಹಿಂಬದಿಯ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಕಾರಿನ ಗ್ಲಾಸ್ ಒಡೆದು 80 ಸಾವಿರ ರೂ ಮೌಲ್ಯದ ಸೊತ್ತುಗಳನ್ನು ಹೊಂದಿದ್ದ ಬ್ಯಾಗ್ ಕಳ್ಳತನ

Hindu neighbor gifts plot of land

Hindu neighbour gifts land to Muslim journalist

ಉಡುಪಿ: ಕೃಷ್ಣಮಠದ ಹಿಂಬದಿಯ
ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಕಾರಿನ ಗ್ಲಾಸ್ ಒಡೆದು ಕಳ್ಳತನ ಮಾಡಿರುವ ಘಟನೆ ನಡೆದಿದೆ.

ಗೋಕುಲಕೃಷ್ಣ ಎಸ್ ಅವರು ಕುಟುಂಬ ಸಮೇತರಾಗಿ ಉಡುಪಿಯ ಕೃಷ್ಣಮಠಕ್ಕೆ ಬಂದಿದ್ದು, ತಮ್ಮ ಕಾರನ್ನು ಕೃಷ್ಣಮಠದ ಹಿಂಬದಿಯ ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸಿ ದೇವರ ದರ್ಶನಕ್ಕೆ ಹೋಗಿದ್ದರು .
ಬಳಿಕ ವಾಪಾಸು ಬಂದು ನೋಡುವಾಗ ಕಳ್ಳರು ಇವರ ಕಾರಿನ ಡ್ರೈವರ್ ಸೈಡ್ ನ ಗ್ಲಾಸನ್ನು ಒಡೆದು ಅದರಲ್ಲಿದ್ದ 80 ಸಾವಿರ ರೂ ಮೌಲ್ಯದ ಸೊತ್ತುಗಳನ್ನು ಹೊಂದಿದ್ದ ಬ್ಯಾಗ್ ನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ .

ಈ ಬಗ್ಗೆ ತಮಿಳುನಾಡು ಮೂಲದ ಗೋಕುಲಕೃಷ್ಣ ಎಸ್ ಎಂಬವವರು ಕಳವಾದ ಬ್ಯಾಗ್ ನಲ್ಲಿ ಬೆಲೆ ಬಾಳುವ ಕ್ಯಾಮೆರಾ, ಬಟ್ಟೆ ಬರೆಗಳ ಸಹಿತ 80,000 ರೂ ಮೌಲ್ಯದ ಇತರ ಸೊತ್ತು ಇತ್ತು ಎಂಬುದಾಗಿ ಪೊಲೀಸರಿಗೆ ದೂರು ನೀಡಿದ್ದು,ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.