Home latest Thieves stole 200 shoes with one foot: ಕೇವಲ ಬಲಗಾಲಿಗೆ ಧರಿಸೋ 10 ಲಕ್ಷ...

Thieves stole 200 shoes with one foot: ಕೇವಲ ಬಲಗಾಲಿಗೆ ಧರಿಸೋ 10 ಲಕ್ಷ ಮೌಲ್ಯದ 200 ಶೂ ಕದ್ದ ಕಳ್ಳರು! ಕತ್ತಲಲ್ಲಿ ಯಾಮಾರಿಬಿಟ್ಟರು!

Shoes were stolen
Image source- iStock

Hindu neighbor gifts plot of land

Hindu neighbour gifts land to Muslim journalist

Shoes were stolen: ಕಳ್ಳಕಾಕರು-ಖದೀಮರು ಅಂಗಡಿಗಳಿಗೆ ಕನ್ನ ಹಾಕಿ ಎಲ್ಲರಿಗೂ ಯಾಮಾರಿಸೋದು ಸಾಮಾನ್ಯ. ಆದರೆ ಇಲ್ಲೊಂದೆಡೆ ಕಳ್ಳೇ ಯಾಮಾರಿರುವಂತಹ ಮಜವಾದ ಒಂದು ಘಟನೆ ನಡೆದಿದೆ.

ಸಾಮಾನ್ಯವಾಗಿ ಎಲ್ಲೆಂದರಲ್ಲಿ ಚಪ್ಪಲಿ(Sandals) ಕಳ್ಳರು ಇದ್ದೇ ಇರುತ್ತಾರೆ. ಕೇವಲ ಒಂದು ಕಾಲಿನ ಚಪ್ಪಲಿಯನ್ನು ಯಾರೂ ಕದಿಯುವುದಿಲ್ಲ. ಕದ್ದರೆ ಎರಡೂ ಕಾಲಿಗೂ ಹೊಂದಿಕೆಯಾಗುವಂತೆ ಚಪ್ಪಲಿಯನ್ನು ಕದಿಯುತ್ತಾರೆ. ಆದರೆ ಇಲ್ಲೊಂದು ಕಡೆ ಕಳ್ಳರು ಬರೋಬ್ಬರಿ 200 ಒಂದೇ ಕಾಲಿನ ಶೂಗಳನ್ನು ಕದ್ದು ಅಚ್ಚರಿ ಮೂಡಿಸಿದ್ದಾರೆ.

ಹೌದು, ಪೆರು(Peru) ದೇಶದ ಹುವಾನ್ಕಾಯೊ(Huvankayo) ಎಂಬಲ್ಲಿ ಮೂವರು ಖದೀಮರ ತಂಡವೊಂದು ಒಂದೇ ಅಂಗಡಿಯಲ್ಲಿ ಡಿಸ್‌ಪ್ಲೇ ಇರಿಸಿದ್ದ 200 ಶೂಗಳನ್ನು ಕದ್ದಿದ್ದಾರೆ. ಆದರೆ ಈ ಕಳ್ಳರ ನಡೆ ಸ್ವತಃ ಅಂಗಡಿ ಮಾಲೀಕನೇ ತಲೆ ಚಚ್ಚಿಕೊಳ್ಳುವಂತೆ ಮಾಡಿದೆ. ಯಾಕೆಂದ್ರೆ ಆ ಕಳ್ಳರು ಕದ್ದ ಆ 200ಶೂಗಳು ಕೂಡ ಒಂದೇ ಕಾಲಿನದ್ದಾಗಿದೆ! ಅಲ್ಲದೆ ಇವುಗಳ ಮೌಲ್ಯ 13 ಸಾವಿರ ಡಾಲರ್ ಅಂದರೆ ಬರೋಬ್ಬರಿ 10 ಲಕ್ಷ ಎಂದು ಅಂದಾಜಿಸಲಾಗಿದೆ.

ಇನ್ನು ಈ ಕಳ್ಳತನ ಕೃತ್ಯ ಸಿಸಿ ಕ್ಯಾಮರಾದಲ್ಲಿ (CCTV camera) ಸೆರೆಯಾಗಿದೆ ಎಂದು ಬಿಬಿಸಿ ವರದಿ ಮಾಡಿದೆ. ಕಳ್ಳರು ಮಧ್ಯರಾತ್ರಿ ಶೂ ಶಾಪ್‌ ಗೆ ನುಗ್ಗಿದ್ದು, ಕಳ್ಳರಿಗೆ ತಾವು ಏನು ಕದ್ದೆವು ಎಂಬುದರ ಅರಿವಿಲ್ಲದೆಯೇ ಈ ಕೃತ್ಯವೆಸಗಿದ್ದಾರೋ ಎಂಬ ಶಂಕೆ ಮೂಡಿದೆ. ಅಲ್ಲಿರುವುದು ಕೇವಲ ಬಲಗಾಲಿನ ಶೂ ಎಂಬುದರ ಅರಿವಿಲ್ಲದೆಯೇ ಕದ್ದರೋ (Shoes were stolen) ಎಂದು ಶಾಪ್ ಮಾಲೀಕರು ಶಂಕೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ದೂರು ದಾಖಲಿಸಿಕೊಂಡಿರುವ ಪೊಲೀಸ್(Police) ಮುಖ್ಯಸ್ಥ ಇಡುನ್ ಡಿಯಾಜ್(Idun Diyaz) ಮಾತನಾಡಿ “ನಾವು ಘಟನೆಗೆ ಸಂಬಂಧಿಸಿದಂತೆ ಸ್ಥಳದಿಂದ ಸಾಕ್ಷ್ಯ (evidence) ಸಂಗ್ರಹಿಸಿದ್ದೇವೆ. ಆದರೆ ವಿಚಿತ್ರ ಎಂದರೆ ಕೇವಲ ಒಂದು ಕಾಲಿನ ಅದರಲ್ಲೂ ಬಲ ಕಾಲಿನ ಶೂ ಮಾತ್ರ ಕದಿಯಲಾಗಿದೆ. ಘಟನೆಯ ದೃಶ್ಯಾವಳಿ ಹಾಗೂ ಬೆರಳಚ್ಚುಗಳನ್ನು (fingerprints) ಆಧರಿಸಿ ನಾವು ಕಳ್ಳರನ್ನು ಪತ್ತೆ ಮಾಡಲಿದ್ದೇವೆ” ಎಂದು ಹೇಳಿದ್ದಾರೆ.

 

ಇದನ್ನು ಓದಿ: Healthy Liver: ನಿಮ್ಮ ಯಕೃತ್ತಿನ ಆರೋಗ್ಯವನ್ನು ಕಾಪಾಡಲು ಹೀಗಿದೆ ಸಲಹೆ!