Home Entertainment ಕಳ್ಳತನಕ್ಕೆ ಮನೆಗೆ ನುಗ್ಗಿದ ಕಳ್ಳರಿಂದ ಅಚ್ಚರಿಯ ನಡೆ !! | ಕಳ್ಳತನ ಮಾಡಿದ ನಂತರ ಅವರು...

ಕಳ್ಳತನಕ್ಕೆ ಮನೆಗೆ ನುಗ್ಗಿದ ಕಳ್ಳರಿಂದ ಅಚ್ಚರಿಯ ನಡೆ !! | ಕಳ್ಳತನ ಮಾಡಿದ ನಂತರ ಅವರು ಮಾಡಿದ್ದದರೂ ಏನು ಗೊತ್ತೇ?

Hindu neighbor gifts plot of land

Hindu neighbour gifts land to Muslim journalist

ಸಾಮಾನ್ಯವಾಗಿ ಕಳ್ಳರು ಯಾರ ಮನೆಗಾದರೂ ಹಣ ಮತ್ತು ಆಭರಣ ದೋಚಲು ನುಗ್ಗಿದರೆ ಎಲ್ಲಾ ವಸ್ತುಗಳನ್ನು ಚೆಲ್ಲಾ ಪಿಲ್ಲಿಯಾಗಿ ಬಿಸಾಡಿ ಅವರಿಗೆ ಬೇಕಾದ್ದನ್ನು ತೆಗೆದುಕೊಂಡು ಹೋಗಿರುವುದನ್ನು ನಾವೆಲ್ಲಾರೂ ನೋಡಿರುತ್ತೇವೆ.ಆದರೆ ಇಲ್ಲಿ ನಡೆದಿದ್ದೆ ಬೇರೆ!!!

ಹೌದು. ಇಲ್ಲಿ ನಡೆದಿರೋದು ವಿಚಿತ್ರನೇ ಸರಿ.ಅಮೆರಿಕದ ಜಾರ್ಜಿಯಾದ ಸ್ಯಾಂಡಿ ಸ್ಪ್ರಿಂಗ್ಸ್‌ನಲ್ಲಿ ಮಹಿಳೆಯೊಬ್ಬರು ತನ್ನ ಮನೆಗೆ ಬೀಗ ಹಾಕಿಕೊಂಡು ಊರಿಗೆ ಹೋದಾಗ, ಕಳ್ಳರು ಮನೆಗೆ ನುಗ್ಗಿ ಕಳ್ಳತನ ಮಾಡಿದ ನಂತರ ಮನೆಯಲ್ಲಿ ಬಿಸಾಡಿದ ವಸ್ತುಗಳನ್ನು ಮತ್ತೆ ಅಲಂಕರಿಸಿ ಮನೆಯ ಬೀಗವನ್ನು ಸಹ ಬದಲಾಯಿಸಿ ಹೋಗಿರುವ ಘಟನೆ ನಡೆದಿದೆ.

ಮನೆಗೆ ಮರಳಿ ಬಂದ ಶೈನಾ ರೈಸ್ ಬದಲಾದ ತಮ್ಮ ಮನೆಯ ಅವತಾರವನ್ನು ನೋಡಿ ಆಶ್ಚರ್ಯಚಕಿತರಾಗಿ ತಮ್ಮ ಟಿಕ್‌ಟಾಕ್‌ನಲ್ಲಿ ತನ್ನ ಬದಲಾದ ಮನೆಯ ನೋಟದ ಬಗ್ಗೆ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಮನೆಯಲ್ಲಿ ನೆಲದ ಮೇಲೆ ದೊಡ್ಡ ಕಪ್ಪು ಕಸ ತುಂಬುವ ಚೀಲಗಳು ಮತ್ತು ಕ್ರಿಸ್‌ಮಸ್ ಅಲಂಕಾರವನ್ನು ಸಹ ವಿಡಿಯೋ ತುಣುಕಿನಲ್ಲಿ ನೋಡಬಹುದು.

ಈ ಕಳ್ಳತನ ನಡೆದಾಗ ತಾನು 30 ದಿನಗಳ ಕಾಲ ಈ ಅಪಾರ್ಟ್ಮೆಂಟ್‌ನಿಂದ ದೂರವಿದ್ದೆ ಎಂದು ರೈಸ್ ಹೇಳಿದರು. ಮನೆಯಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಒಬ್ಬ ಪುರುಷ ಮತ್ತು ಮಹಿಳೆ ಅಪಾರ್ಟ್ಮೆಂಟ್ ಒಳಗೆ ಬಂದಿರುವುದನ್ನು ನಾನು ನೋಡಿದ್ದೇನೆ ಎಂದು ರೈಸ್ ಹೇಳಿದ್ದಾರೆ.
ನಾವು ಮನೆಯಿಂದ ಹೋದ ಮೇಲೆ ಯಾರೋ ನಮ್ಮ ಮನೆಗೆ ಬಂದು ನಮ್ಮ ಮನೆಯ ಬೀಗಗಳನ್ನು ಬದಲಾಯಿಸಿ, ನಮ್ಮ ಎಲ್ಲಾ ವಸ್ತುಗಳನ್ನು ಪ್ಯಾಕ್ ಮಾಡಿ,ಅದರಲ್ಲಿ ಸ್ವಲ್ಪ ವಸ್ತುಗಳನ್ನು ಮಾರಾಟ ಮಾಡಿದ್ದಾರೆ ಮತ್ತು ಮನೆಯನ್ನು ಮರು ಅಲಂಕರಿಸಲು ಪ್ರಯತ್ನಿಸಿದ್ದಾರೆ” ಎಂದು ರೈಸ್ ತಿಳಿಸಿದ್ದಾರೆ.

ಪೊಲೀಸರು ತನಿಖೆ ಮಾಡುವ ಸಮಯದಲ್ಲಿ ಅವರಿಗೆ ಮನೆಯೊಳಗೆ ಬಂದೂಕು ಮತ್ತು ಚಾಕು ಸಿಕ್ಕಿವೆ ಎಂದು ರೈಸ್ ತಿಳಿಸಿದ್ದಾರೆ.ತನ್ನ ಎರಡನೇ ಮನೆಯ ಬಾಲ್ಕನಿಯಲ್ಲಿರುವ ಸ್ಟೋರ್ ರೂಮ್ ಬಾಗಿಲು ತೆರೆದಿರುವಂತೆ ತೋರುತ್ತಿದೆ ಎಂದು ರೈಸ್ ಫಾಲೋ-ಅಪ್ ವೀಡಿಯೋದಲ್ಲಿ ತಿಳಿಸಿದ್ದಾರೆ. ತನ್ನ ಗಂಡನು ಅದರ ನಿರ್ವಹಣೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದಿದ್ದೆ. ಆದರೆ ತಾನು ಸ್ಟೋರ್ ರೂಮ್‌ನಲ್ಲಿ ಕೆಲಸ ಮಾಡುತ್ತಿಲ್ಲ ಎಂದು ತಂದೆ ಮಗನಿಗೆ ತಿಳಿಸಿದ್ದಾನೆ ಎಂದು ವರದಿಯಾಗಿದೆ.

ಈಕೆಯ ಗಂಡ ತನ್ನದೇ ಆದ ತನಿಖೆ ಮಾಡಿ ಮುಂಭಾಗದ ಬಾಗಿಲಲ್ಲಿ ಟೇಪ್ ಅನ್ನು ನೋಡಿದನು. ನಂತರ ಅವರ ನೆರೆಹೊರೆಯವರಿಗೆ ಕರೆ ಮಾಡಿ ಯಾರಾದರೂ ಮನೆಗೆ ಪ್ರವೇಶಿಸುವುದನ್ನು ನೀವು ನೋಡಿದ್ದೀರಾ ಎಂದು ಕೇಳಿದರು. ಅಪಾರ್ಟ್ಮೆಂಟ್ ನಿರ್ವಹಣಾ ಕಚೇರಿ ತಮ್ಮ ನಿರ್ವಹಣಾ ಸಿಬ್ಬಂದಿ ಅಪಾರ್ಟ್ಮೆಂಟ್ ಒಳಗೆ ಹೋಗಿಲ್ಲ ಎಂದು ಹೇಳಿದಾಗ ಈ ಘಟನೆಯು ಇನ್ನಷ್ಟು ಗೊಂದಲಮಯ ಅನ್ನಿಸಿತು.ಒಬ್ಬ ಪುರುಷ ಮತ್ತು ಮಹಿಳೆ ವಾದಿಸುವುದನ್ನು ಕೇಳಿದ್ದೇವೆ. ಆದರೆ ಅದು ರೈಸ್ ಮತ್ತು ಅವಳ ಗಂಡ ಇರಬೇಕೆಂದು ಎಂದು ಭಾವಿಸಿದ್ದೇವೆ ಎಂದು ನೆರೆಹೊರೆಯವರು ಹೇಳಿದರು. ಒಟ್ಟಿನಲ್ಲಿ ಸಾಮಾಜಿಕ ಜಾಲತಾಣ ವಿಡಿಯೋ ವೈರಲ್‌ ಆಗಿದ್ದು, ಕಳ್ಳರ ಕೈಚಳಕ ಕಂಡು ನೆಟ್ಟಿಗರು ಪಿಸುನಗೆ ಬೀರಿದ್ದಾರೆ.