Home latest Jamakandi: ದೇಶದಲ್ಲಿ 30 ಕೋಟಿ ಮುಸ್ಲಿಮ್ಸ್, ಕರ್ನಾಟಕದಲ್ಲಿ 30 ಮುಸ್ಲಿಂ ಶಾಸಕರು ಇರಬೇಕು – ಹಿಂದೂ...

Jamakandi: ದೇಶದಲ್ಲಿ 30 ಕೋಟಿ ಮುಸ್ಲಿಮ್ಸ್, ಕರ್ನಾಟಕದಲ್ಲಿ 30 ಮುಸ್ಲಿಂ ಶಾಸಕರು ಇರಬೇಕು – ಹಿಂದೂ ಸ್ವಾಮೀಜಿ ಕರೆ

Hindu neighbor gifts plot of land

Hindu neighbour gifts land to Muslim journalist

Jamakandi: ದೇಶಾದ್ಯಂತ ಕನಿಷ್ಠವಾದರ 30 ಕೋಟಿ ಮುಸ್ಲಿಮರು ಇರಬೇಕು ಅಲ್ಲದೆ ಕರ್ನಾಟಕದಲ್ಲಿ ಕನಿಷ್ಠವಾದರೂ ಮುಸ್ಲಿಂ ಶಾಸಕರು ಬೇಕೇ ಬೇಕು ಎಂದು ಸ್ವಾಮೀಜಿ ಒಬ್ಬರು ಕರೆ ನೀಡುವುದರ ಮುಖಾಂತರ ಅಚ್ಚರಿ ಮೂಡಿಸಿದ್ದಾರೆ.

ಜಮಖಂಡಿಯ ಕಾರ್ಯಕ್ರಮ ಒಂದರಲ್ಲಿ ಮಾತನಾಡಿರುವ ಮಹೇಶ್ವರಾನಂದ ಸ್ವಾಮೀಜಿ (Maheshwarananda Swamiji) ಅವರು ರಾಜ್ಯದ ವಿವಿಧ ಸಮುದಾಯಗಳ ಜನಸಂಖ್ಯೆ ಮತ್ತು ರಾಜಕೀಯ ಪ್ರಾತಿನಿಧ್ಯದ ಕುರಿತು ಅಂಕಿ-ಅಂಶಗಳನ್ನು ನೀಡಿದರು. ರಾಜ್ಯದಲ್ಲಿ ಒಂದು ಕೋಟಿ ಮುಸ್ಲಿಂ ಜನಸಂಖ್ಯೆ ಇದ್ದರೂ ಕೇವಲ 10 ಜನ ಶಾಸಕರಿದ್ದಾರೆ. ಇದಕ್ಕೆ ವಿರುದ್ಧವಾಗಿ 66 ಲಕ್ಷ ಜನಸಂಖ್ಯೆ ಇರುವ ಲಿಂಗಾಯತ ಸಮುದಾಯದ 59 ಶಾಸಕರು, 60 ಲಕ್ಷ ಇರುವ ಒಕ್ಕಲಿಗರ 46 ಶಾಸಕರು ಹಾಗೂ 15 ಲಕ್ಷ ಇರುವ ಬ್ರಾಹ್ಮಣ ಸಮುದಾಯದ 10 ಶಾಸಕರಿದ್ದಾರೆ. ಇದು ಸಲ್ಲದು ರಾಜ್ಯದಲ್ಲಿ ಕನಿಷ್ಠವಾದರ 30 ಮುಸ್ಲಿಂ ಶಾಸಕರು ಬೇಕೇ ಬೇಕು ಎಂದು ಅವರು ಕರೆಕೊಟ್ಟಿದ್ದಾರೆ.

ಅಲ್ಲದೆ ‘ದೇಶದ 30 ಕೋಟಿ ಮುಸ್ಲಿಮರನ್ನು ಹೊರತುಪಡಿಸಿ ಭವಿಷ್ಯದ ಭಾರತದ ನಿರ್ಮಾಣ ಸಾಧ್ಯವಿಲ್ಲ. ಮುಸಲ್ಮಾನರು ಚುನಾವಣೆಯಲ್ಲಿ (Muslim MLA’s) ಸೋಲುವುದಿಲ್ಲ, ಬದಲಾಗಿ ಅವರನ್ನು ಸೋಲಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.