Home latest ಮುಸ್ಲಿಂ ಯುವಕನನ್ನು ಮದುವೆಯಾಗಬಯಸಿದ್ದ ಹಿಂದೂ ಯುವತಿ!!|ವಿಷಯ ತಿಳಿದು ಯುವತಿಯ ಮನೆಗೆ ಮನವೊಲಿಕೆಗೆ ತೆರಳಿದ್ದ ಗುರುಪುರ ಶ್ರೀ

ಮುಸ್ಲಿಂ ಯುವಕನನ್ನು ಮದುವೆಯಾಗಬಯಸಿದ್ದ ಹಿಂದೂ ಯುವತಿ!!|ವಿಷಯ ತಿಳಿದು ಯುವತಿಯ ಮನೆಗೆ ಮನವೊಲಿಕೆಗೆ ತೆರಳಿದ್ದ ಗುರುಪುರ ಶ್ರೀ

Hindu neighbor gifts plot of land

Hindu neighbour gifts land to Muslim journalist

ಮಂಗಳೂರಿನ ಹಿಂದೂ ಯುವತಿಯೊಬ್ಬಳು ಮುಸ್ಲಿಂ ಯುವಕನೊಬ್ಬನನ್ನು ಮದುವೆಯಾಗಲು ನಿಶ್ಚಯಿಸಿರುವ ಸುದ್ದಿ ತಿಳಿದು ಇಂದು ಜಿಲ್ಲೆಯ ಹಿಂದೂ ಸಂಘಟನೆಗಳ ಮುಖಂಡರ ಜೊತೆಗೆ ಯುವತಿಯ ಮನೆಗೆ ತೆರಳಿದ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಯುವತಿಯ ಹಾಗೂ ಮನೆಯವರ ಮನವೊಲಿಸುವಲ್ಲಿ ಸಫಲರಾಗಿದ್ದಾರೆ.

ಮಂಗಳೂರಿನ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ ಕಾಲೇಜಿನಲ್ಲಿ ಕೇರಳ ಮೂಲದ ಮುಸ್ಲಿಮ್ ಯುವಕನನ್ನು ಪ್ರೀತಿಸುತ್ತಿದ್ದು, ಆತನನ್ನು ಮದುವೆಯಾಗುವ ಸಂಬಂಧ ಮನೆಯವರಿಂದ ಒಪ್ಪಿಗೆ ಪಡೆದು, ಎಲ್ಲವೂ ನಿಗದಿಯಾಗಿ ಆಹ್ವಾನ ಪತ್ರಿಕೆ ಕೂಡ ಮುದ್ರಣಗೊಂಡಿತ್ತು. ಈ ಕರೆಯೋಲೆ ವೈರಲ್ ಆಗಿದ್ದರಿಂದ ಮದುವೆ ವಿಚಾರ ವಿವಾದಾತ್ಮಕವಾಗಿ ಪರಿಣಮಿಸಿತ್ತು.

ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಮಂಗಳೂರಿನ ಹಿಂದೂ ಯುವತಿ ಹಾಗೂ ಮುಸ್ಲಿಂ ಯುವಕನ ಮದುವೆಯ ಆಮಂತ್ರಣ ಪತ್ರ ಸಹಿತ ಅವರಿಬ್ಬರ ಫೋಟೋ ಹಾಗೂ ಮನೆಯವರ ಬಗೆಗೆ ಸುದ್ದಿಯಾಗಿತ್ತು. ಈ ಬಗ್ಗೆ ಹಿಂದೂ ಮುಖಂಡರು ಮೌನಡಿಂದ ಇರೋದು ಸರಿಯಲ್ಲ ಎಂಬ ನಿರ್ಧಾರ ಮಾಡಿ, ಇಂದು ಯುವತಿಯ ಮನೆಗೆ ಸ್ವಾಮೀಜಿಯ ನೇತೃತ್ವದಲ್ಲಿ ತೆರಳಿದ್ದು ಯುವತಿ, ಯುವತಿಯರು ಪೋಷಕರೊಂದಿಗೆ ಮಾತುಕತೆ ನಡೆಸಿದ್ದಾರೆ. ಹಿಂದೂ ಯುವತಿಯಾಗಿ ಇನ್ನೊಂದು ಧರ್ಮಕ್ಕೆ ಮತಾಂತರ ಆದರೆ ಮುಂದಾಗುವ ಕಷ್ಟಗಳ ಬಗೆಗೆ ಹಾಗೂ ಈವರೆಗೆ ಮತಾಂತರ ಆದವರಿಗೆ ಆದ ಗತಿಯ ಬಗೆಗೆ ಸವಿವರವಾಗಿ ತಿಳಿಸಿದ್ದರ ಪರಿಣಾಮ ಯುವತಿ ಸಹಿತ ಮನೆಯವರು ಮನವೊಲಿಕೆಗೆ ಒಪ್ಪಿದರು ಎನ್ನಲಾಗಿದೆ.

ಈ ಬಗ್ಗೆ ಗುರುಪುರ ಶ್ರೀ ಮಾತನಾಡಿ ನಮ್ಮ ಮನವೊಲಿಕೆಗೆ ಯುವತಿ ಸಮ್ಮತಿಸಿದ್ದಾಳೆ. ಆಕೆಯ ಗುಣ, ನಡತೆ ಉತ್ತಮವಾಗಿದ್ದು ಒಳ್ಳೆಯ ಮನೆತನ ಕೂಡಾ ಇದೆ. ದೇವರ ಅನುಗ್ರಹದಿಂದಾಗಿ ಮನವೊಲಿಕೆಯ ಮಾತುಕತೆ ಸಫಲವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಈ ಸಂದರ್ಭದಲ್ಲಿ ವಿಶ್ವಹಿಂದೂ ಪರಿಷತ್ ಭಜರಂಗದಳ ಮುಖಂಡರುಗಳಾದ ಶರಣ್ ಪಂಪ್ ವೆಲ್, ಶಿವಾನಂದ್ ಮೆಂಡನ್, ಭುಜಂಗ ಕುಲಾಲ್, ಹಾಗೂ ಕಾರ್ಪೊರೇಟರ್ ದಿವಾಕರ್ ಪಾಂಡೇಶ್ವರ್ ಮತ್ತಿತರರು ಉಪಸ್ಥಿತರಿದ್ದರು.