Home latest ತಾಯಿಯ ಬಗ್ಗೆ ವ್ಯಂಗ್ಯವಾಗಿ ಮಾತಾಡಿದ ವ್ಯಕ್ತಿಯನ್ನು ಮಚ್ಚಿನಿಂದ ಕೊಂದ ಮಗ!!

ತಾಯಿಯ ಬಗ್ಗೆ ವ್ಯಂಗ್ಯವಾಗಿ ಮಾತಾಡಿದ ವ್ಯಕ್ತಿಯನ್ನು ಮಚ್ಚಿನಿಂದ ಕೊಂದ ಮಗ!!

Hindu neighbor gifts plot of land

Hindu neighbour gifts land to Muslim journalist

ಯಾರೇ ಆಗಲಿ ತನಗೆ ಏನು ಹೇಳಿದರು ಸ್ವಲ್ಪ ಮಟ್ಟಿಗೆ ಸಹಿಸಿಕೊಳ್ಳರು. ಆದರೆ ಹೆತ್ತ ತಾಯಿ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದರೆ ಯಾರೂ ಸಹಿಸಲ್ಲ.ತಾಯಿಯ ಮೇಲೆ ಎಷ್ಟು ಕೋಪ ಇದ್ದರೂ ಮನಸ್ಸಲ್ಲಿ ಮಾತ್ರ ಆಕೆಗೆ ದೇವತೆಯ ಸ್ಥಾನ ಕೊಟ್ಟು ಪೂಜಿಸುತ್ತಾರೆ.ಇನ್ನು ಅಂತಹ ಮಹಾತಾಯಿಯೊಂದಿಗೆ ಅಕ್ರಮ ಸಂಬಂಧಕ್ಕೆ ಸಹಕರಿಸಿ ಎಂದು ಮಗನನ್ನು ಕೇಳಿದರೆ ಆತ ಸುಮ್ಮನಿರತ್ತಾನೆಯೇ ?

ಹೌದು. ಇಲ್ಲಾಗಿದ್ದೂ ಅದೇ. ಕುಟುಂಬ ತೊರೆದಿದ್ದ ವ್ಯಕ್ತಿಯೊಬ್ಬ ನಿನ್ನ ತಾಯಿಯೊಂದಿಗೆ ಅಕ್ರಮ ಸಂಬಂಧ ಇರಿಸಿಕೊಳ್ಳಲು ಸಹಕರಿಸು ಎಂದವನನ್ನು ಮಗ ಮಚ್ಚಿನಿಂದ ಕೊಚ್ಚಿ ಕೊಂದು ಹಾಕಿರುವ ಘಟನೆ ಗುಬ್ಬಿ ಪೊಲೀಸ್ ಠಾಣೆ ವ್ಯಾಪ್ತಿಯ ಮುದಿಗೆರೆಯಲ್ಲಿ ನಡೆದಿದೆ.

ಕೊಲೆಯಾದ ವ್ಯಕ್ತಿಯನ್ನು ಕಸಬಾ ಹೋಬಳಿ ಮುದಿಗೆರೆ ಗ್ರಾಮದ ನಿವಾಸಿ ರಾಜಣ್ಣ (55) ಎಂದು ಗುರುತಿಸಲಾಗಿದೆ. ಅದೇ ಗ್ರಾಮದ ಮಹೇಶ (23)ಕೊಲೆ ಮಾಡಿದ ಯುವಕ.

ರಾಜಣ್ಣ ಎರಡು ವರ್ಷಗಳಿಂದ ಕುಟುಂಬದೊಂದಿಗೆ ಜಗಳ ಮಾಡಿಕೊಂಡು ಒಬ್ಬಂಟಿಯಾಗಿದ್ದ. ತಂದೆಯ ಖಾಲಿ ನಿವೇಶನದಲ್ಲಿ ಗುಡಿಸಲು ನಿರ್ಮಿಸಿಕೊಂಡು ಕೂಲಿನಾಲಿ ಮಾಡಿ ಜೀವನ ಸಾಗಿಸುತ್ತಿದ್ದ.ನಿನ್ನೆ ಮಧ್ಯಾಹ್ನ ಮಹೇಶನ ಮನೆಗೆ ಹೋಗಿ ಕಾಫಿ ಕುಡಿದು ಬಂದಿದ್ದ ರಾಜಣ್ಣ ರಾತ್ರಿ ನನ್ನ ಮನೆಗೆ ಬಾ, ಎಣ್ಣೆ ಹೊಡೆಯೋಣ ಎಂದು ಪುಸಲಾಯಿಸಿ ಬಂದಿದ್ದ. ರಾತ್ರಿ ಮನೆಗೆ ಬಂದ ಮಹೇಶನೊಂದಿಗೆ ರಾಜಣ್ಣ ಕಂಠಪೂರ್ತಿ ಕುಡಿದಿದ್ದ. ಕುಡಿದ ಮತ್ತಿನಲ್ಲಿ ನಾನು ಒಬ್ಬಂಟಿಯಾಗಿದ್ದೇನೆ. ನಿಮ್ಮ ತಾಯಿಯೊಂದಿಗೆ ಅಕ್ರಮ ಸಂಬಂಧವಿರಿಸಿಕೊಳ್ಳುತ್ತೇನೆ. ನೀನು ಸಹಕರಿಸು ಎಂದು ಕೇಳಿಕೊಂಡ.

ಇದರಿಂದ ಮಹೇಶ ರೊಚ್ಚಿಗೆದ್ದು ರಾಜಣ್ಣನ ಮೇಲೆ ಮುಗಿಬಿದ್ದು ಪಕ್ಕದಲ್ಲೇ ಇದ್ದ ಮರ ಕಡಿಯುವ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.ಘಟನಾ
ಸ್ಥಳಕ್ಕೆ ಭೇಟಿ ನೀಡಿರುವ ಗುಬ್ಬಿ ಠಾಣೆ ಎಸ್‍ಐ ನಟರಾಜು ಪ್ರಕರಣ ದಾಖಲಿಸಿಕೊಂಡಿದ್ದಾರೆ.