Home latest LPG: ಹೊಸ ವರ್ಷದಂದೇ LPG ಗ್ರಾಹಕರಿಗೆ ಬಿಗ್ ಶಾಕ್ – ಸಿಲಿಂಡರ್ ದರದಲ್ಲಿ 111 ರೂ...

LPG: ಹೊಸ ವರ್ಷದಂದೇ LPG ಗ್ರಾಹಕರಿಗೆ ಬಿಗ್ ಶಾಕ್ – ಸಿಲಿಂಡರ್ ದರದಲ್ಲಿ 111 ರೂ ಏರಿಕೆ

Hindu neighbor gifts plot of land

Hindu neighbour gifts land to Muslim journalist

LPG: ಹೊಸ ವರ್ಷದ ಮೊದಲ ದಿನವೇ ಎಲ್ಪಿಜಿ ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ಎದುರಾಗಿದ್ದು ಸಿಲಿಂಡರ್ ದರದಲ್ಲಿ ಬರೋಬ್ಬರಿ 111 ಏರಿಕೆ ಮಾಡಲಾಗಿದೆ. ಅಂದ ಹಾಗೆ ಇದು ವಾಣಿಜ್ಯ ಬಳಕೆಯ ಸಿಲಿಂಡರ್ ನಲ್ಲಿ ಮಾತ್ರ ಏರಿಕೆಯಾದ ದರ. ಗೃಹಬಳಕೆಯ ಸಿಲಿಂಡರ್ ನಲ್ಲಿ ಯಾವುದೇ ಏರಿಕೆ ಕಂಡಿಲ್ಲ.

ಹೌದು, ಹೊಸ ವರ್ಷದ ಆರಂಭದಲ್ಲೇ ಜನಸಾಮಾನ್ಯರಿಗೆ ಬಿಗ್‌ಶಾಕ್‌ ಎದುರಾಗಿದೆ. ಹೊಸ ವರ್ಷದ ಮೊದಲ ದಿನ, ಜನವರಿ 1, 2026 ರಿಂದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ಭಾರೀ ಏರಿಕೆ ಕಂಡಿದೆ. 19 ಕಿಲೋಗ್ರಾಂ ತೂಕದ ಈ ಸಿಲಿಂಡರ್ ದರವು ₹111 ರೂ. ಹೆಚ್ಚಾಗಿದ್ದು, ಇದೀಗ ಜಾರಿಗೆ ಬಂದಿದೆ. ಎಲ್‌ಪಿಜಿ ಬೆಲೆ ಏರಿಕೆಯಿಂದಾಗಿ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಇತರ ವಾಣಿಜ್ಯ ಉದ್ಯಮಿಗಳ ಮೇಲೆ ಭಾರೀ ಪರಿಣಾಮ ಬೀರಲಿದೆ.

ದೆಹಲಿಯಲ್ಲಿ ಇಂದಿನಿಂದ 19 ಕೆಜಿ ಎಲ್‌ಪಿಜಿ ಸಿಲಿಂಡರ್ 1580.50 ರೂ.ಗಳ ಬದಲಿಗೆ 1691.50 ರೂ.ಗಳಿಗೆ ಲಭ್ಯವಾಗಲಿದೆ. ಕೋಲ್ಕತ್ತಾದಲ್ಲಿ ಈಗ 1795 ರೂ.ಗಳಿಗೆ ಲಭ್ಯವಾಗಲಿದೆ. ಕೋಲ್ಕತ್ತಾದಲ್ಲಿಯೂ 111 ರೂ.ಗಳಷ್ಟು ಏರಿಕೆಯಾಗಿದೆ. ಚೆನ್ನೈನಲ್ಲಿ 1849.50 ರೂ ಮತ್ತು ಬೆಂಗಳೂರಿನಲ್ಲಿ 1700 ರೂಪಾಯಿ ಆಸುಪಾಸಿನಲ್ಲಿ ವಾಣಿಜ್ಯ ಬಳಕೆ ಸಿಲಿಂಡರ್ ಸಿಗಲಿದೆ.

ಇನ್ನೂ ಮನೆಗಳಲ್ಲಿ ಬಳಸುವ 14.2 ಕಿಲೋಗ್ರಾಂ ತೂಕದ ಎಲ್‌ಪಿಜಿ ಸಿಲಿಂಡರ್‌ಗಳ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಈ ದರಗಳು ಕೊನೆಯದಾಗಿ 2025ರ ಏಪ್ರಿಲ್ 8 ರಂದು ಪರಿಷ್ಕರಣೆಯಾಗಿತ್ತು.