Home latest SBI ಬ್ಯಾಂಕಿಗೆ ನುಗ್ಗಿ ಬ್ಯಾಂಕ್ ಉದ್ಯೋಗಿಯನ್ನು ಹತ್ಯೆ ಮಾಡಿ ಹಣ ದೋಚಿದ ದುಷ್ಕರ್ಮಿಗಳು !!

SBI ಬ್ಯಾಂಕಿಗೆ ನುಗ್ಗಿ ಬ್ಯಾಂಕ್ ಉದ್ಯೋಗಿಯನ್ನು ಹತ್ಯೆ ಮಾಡಿ ಹಣ ದೋಚಿದ ದುಷ್ಕರ್ಮಿಗಳು !!

Hindu neighbor gifts plot of land

Hindu neighbour gifts land to Muslim journalist

ಮುಂಬೈ : ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಮುಂಬೈ ಶಾಖೆ ಕ್ಲೋಸಿಂಗ್ ವೇಳೆ ಇಬ್ಬರು ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿದ್ದು, ಓರ್ವ ಉದ್ಯೋಗಿಯನ್ನು ಹತ್ಯೆ ಮಾಡಿ ಹಣ ದೋಚಿರುವ ಪ್ರಕರಣ ವರದಿಯಾಗಿದೆ.

ಮುಂಬೈನ ಎಂಹೆಚ್‌‌ಬಿ ಕಾಲೋನಿಯ ಜಯವಂತ್‌ ಸಾವಂತ್‌ ರಸ್ತೆಯಲ್ಲಿರುವ ಶಾಖೆಯಲ್ಲಿ ಈ ಘಟನೆ ನಡೆದಿದ್ದು, ಹಗಲು ಹೊತ್ತಿನಲ್ಲಿಯೇ ಭಾರಿ ದರೋಡೆ ನಡೆಸಿದ್ದಾರೆ.ಬ್ಯಾಂಕ್ ನ ಸಿಸಿಟಿವಿಯಲ್ಲಿ ಭಯಾನಕ ದೃಶ್ಯಗಳು ದಾಖಲಾಗಿವೆ.ಬ್ಯಾಂಕ್‌ನಲ್ಲಿ ಭದ್ರತಾ ಸಿಬ್ಬಂದಿ ಇಲ್ಲದಿರುವುದನ್ನು ನೋಡಿಕೊಂಡಿದ್ದ ಯುವಕರ ಗುಂಪೊಂದು ಸಂಚುಹೂಡಿ ಈ ಕೃತ್ಯ ಎಸಗಿದೆ ಎನ್ನಲಾಗಿದೆ.

ಬ್ಯಾಂಕ್‌ ಕಾರ್ಯನಿರ್ವಹಿಸುತ್ತಿದ್ದಂತೆಯೇ ಇಬ್ಬರು ಮುಸುಕುಧಾರಿಗಳು ಬ್ಯಾಂಕ್‌ ಒಳಗೆ ನುಗ್ಗಿ ಮನಬಂದಂತೆ ಗುಂಡು ಹಾರಿಸಿದ್ದು,ಬ್ಯಾಂಕ್ ಕೆಲಸದ ಅವಧಿ ಕ್ಲೋಸ್ ಮಾಡಲು ಇನ್ನು ಕೆಲವೇ ನಿಮಿಷ ಬಾಕಿ ಇತ್ತು. ಬ್ಯಾಂಕ್ ನ ಸಹಾಯಕ ಸಂದೇಶ್ ಗೋಮಾನೆ ಎನ್ನುವರ ಮೇಲೆ ಗುಂಡಿನ ದಾಳಿ ಮಾಡಿದ್ದು,ಎದೆಗೆ ಅತಿ ಹತ್ತಿರದಿಂದ ಗುಂಡು ಹಾರಿಸಿದ್ದರಿಂದ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಗನ್ ತೋರಿಸಿ ಉಳಿದ ಸಿಬ್ಬಂದಿಗೆ ಭಯ ಬೀಳಿಸಿ,ಇಬ್ಬರು ಮುಸುಕುಧಾರಿಗಳು ಕ್ಯಾಷಿಯರ್‌ನಿಂದ ಸುಮಾರು 2.5 ಲಕ್ಷ ರೂ. ದೋಚಿ ಪರಾರಿಯಾಗಿದ್ಧಾರೆ.

ಈ ಬಗ್ಗೆ ಮಾಹಿತಿ ನೀಡಿದ ಪ್ರತ್ಯಕ್ಷದರ್ಶಿಗಳು, “ಬಂದೂಕು ಹಿಡಿದುಕೊಂಡು ಬಂದಿದ್ದ ದರೋಡೆಕೋರರು ನಮ್ಮನ್ನು ಬೆದರಿಸಿದ್ದು, ಕೂಡಲೇ ಗುಂಡು ಹಾರಿಸಿದ್ದಾರೆ. ಗುಂಡು ತಗುಲಿ ಒಬ್ಬ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಬಳಿಕ ಹಣ ದೋಚಿ ಪರಾರಿಯಾಗಿದ್ದಾರೆ” ಎಂದಿದ್ದಾರೆ.”ದರೋಡೆಕೋರರು ಸ್ಕಾರ್ಫ್ ಹಾಗೂ ಕ್ಯಾಪ್‌ನಿಂದ ಮುಖವನ್ನು ಮುಚ್ಚಿಕೊಂಡಿದ್ದರು. ಹಾಗಾಗಿ ಅವರ ಮುಖವನ್ನು ಗುರುತಿಸಲು ಸಾಧ್ಯವಾಗಿಲ್ಲ. ಇವರೆಲ್ಲಾ ಸುಮಾರು 20-25 ವರ್ಷದ ವಯಸ್ಸಿನವರಿರಬಹುದು. ಅವರು ದಹಿಸರ್‌ ರೈಲ್ವೆ ನಿಲ್ದಾಣದ ಕಡೆಗೆ ಪರಾರಿಯಾಗಿದ್ದಾರೆ” ಎಂದು ಸಿಬ್ಬಂದಿ ತಿಳಿಸಿದ್ಧಾರೆ.

ದರೋಡೆಕೋರರ ಚಲನವಲನ ಗಮನಿಸಿದರೆ ಅವರು ಸ್ಥಳೀಯರಂತೆ ಕಂಡಿದ್ದು ಪಕ್ಕಾ ಮಾಹಿತಿ ಪಡೆದುಕೊಂಡೆ ಕಳ್ಳತನಕ್ಕೆ ಬಂದಿದ್ದಾರೆ. ರೈಲ್ವೆ ನಿಲ್ದಾಣದ ಬಳಿಯ ದಹಿಸರ್ ವೆಸ್ಟ್‌ನಲ್ಲಿರುವ ಗುರುಕುಲ ಸೊಸೈಟಿ ಪ್ರದೇಶದ ಬ್ಯಾಂಕ್ ಕೇವಲ 8 ರಿಂದ 10 ಸಿಬ್ಬಂದಿ ಇದ್ದು,ಮೂವರು ಮಹಿಳೆಯರು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.”ಆರೋಪಿಗಳ ಬಂಧನಕ್ಕೆ ತುರ್ತು ಕ್ರಮ ತೆಗೆದುಕೊಳ್ಳಲಾಗುತ್ತಿದ್ದು, ಆರೋಪಿಗಳ ಪತ್ತೆಗೆ ಎಂಟು ತಂಡಗಳನ್ನು ರಚಿಸಲಾಗಿದೆ” ಎಂದು ಉತ್ತರ ವಲಯದ ಹೆಚ್ಚುವರಿ ಸಿಪಿ ಪ್ರವಿಂದ್ ಪಡವಾಲ್ ಮಾಹಿತಿ ನೀಡಿದ್ದಾರೆ.