Home Interesting ಡಿ.4 : ಸವಣೂರಿನಲ್ಲಿ ಜಿಲ್ಲಾ ಮಟ್ಟದ ಯುವಜನೋತ್ಸವ

ಡಿ.4 : ಸವಣೂರಿನಲ್ಲಿ ಜಿಲ್ಲಾ ಮಟ್ಟದ ಯುವಜನೋತ್ಸವ

Hindu neighbor gifts plot of land

Hindu neighbour gifts land to Muslim journalist

ಮಂಗಳೂರು : ಸರಕಾರದ ನಿರ್ದೇಶನದಂತೆ, 2021-22ನೇ ಸಾಲಿನ ದ.ಕ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ, ದ.ಕ. ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ,ಜಿಲ್ಲಾ ಯುವಜನ ಒಕ್ಕೂಟ, ಕಡಬ ತಾಲೂಕು ಯುವಜನ ಒಕ್ಕೂಟ,ರಾಜ್ಯಪ್ರಶಸ್ತಿ ಪುರಸ್ಕೃತ ಸವಣೂರು ಯುವಕ ಮಂಡಲ ಇವರುಗಳ ಸಂಯುಕ್ತ ಆಶ್ರಯದಲ್ಲಿ ಡಿ.4ರಂದು ಕಡಬ ತಾಲೂಕಿನ ವಿದ್ಯಾರಶ್ಮಿ, ವಿದ್ಯಾಲಯ ಸವಣೂರಿನಲ್ಲಿ ನಡೆಯಲಿದೆ‌.

ಕಾರ್ಯಕ್ರಮದಲ್ಲಿ ಜಾನಪದ ನೃತ್ಯ (ಗುಂಪು ಸ್ಪರ್ಧೆ), ಜಾನಪದ ಹಾಡು (ಗುಂಪು ಸ್ಪರ್ಧೆ), ಏಕಾಂಕ ನಾಟಕ (ಹಿಂದಿ, ಇಂಗ್ಲೀಷ್, ಕನ್ನಡ- ಗುಂಪು ಸ್ಫರ್ಧೆ), ಶಾಸ್ತ್ರೀಯ ಗಾಯನಗಳಾದ ಹಿಂದೂಸ್ಥಾನಿ ಸಂಗೀತ ಹಾಗೂ ಕರ್ನಾಟಕ ಸಂಗೀತ (ವೈಯಕ್ತಿಕ ಸ್ಪರ್ಧೆ), ಶಾಸ್ತ್ರೀಯ ವಾದ್ಯಗಳಾದ ತಬಲಾ, ಸಿತಾರ್, ಕೊಳಲು, ವೀಣೆ, ಮೃದಂಗ (ವೈಯಕ್ತಿಕ), ಹಾರ್ಮೋನಿಯಂ ಹಾಗೂ ಗಿಟಾರ್ (ವೈಯಕ್ತಿಕ), ಶಾಸ್ತ್ರೀಯ ನೃತ್ಯಗಳಾದ ಭರತನಾಟ್ಯ, ಒಡಿಸ್ಸಿ, ಮಣಿಪುರಿ, ಕಥಕ್ ಮತ್ತು ಕೂಚುಪುಡಿ (ವೈಯಕ್ತಿಕ) ಮತ್ತು ಆಶುಭಾಷಣ (ಹಿಂದಿ/ಇಂಗ್ಲೀಷ್/ಕನ್ನಡ-ವೈಯಕ್ತಿಕ) ಸ್ಪರ್ಧೆಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

15 ರಿಂದ 29 ವರ್ಷದೊಳಗಿನ ಯುವಕ/ಯುವತಿಯರು ಮತ್ತು ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು ಸ್ಫರ್ಧೆಯಲ್ಲಿ ಭಾಗವಹಿಸಬಹುದು. ಸ್ಪರ್ಧಿಗಳು ತಮ್ಮ ನೋಂದಾವಣಿಯನ್ನು ಸ್ಪರ್ಧೆ ನಡೆಯುವ ಸ್ಥಳದಲ್ಲಿ ಬೆಳಗ್ಗೆ 9 ಗಂಟೆಯೊಳಗೆ ಸಂಘಟಕರಲ್ಲಿ ವರದಿ ಮಾಡಿಕೊಳ್ಳಬೇಕು.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.