Home latest ಕಾರು ಅಪಘಾತ : ಗಾಯಾಳುಗಳಿಗೆ ನೆರವಾದ ಸಂಸದ ಪ್ರತಾಪ ಸಿಂಹ

ಕಾರು ಅಪಘಾತ : ಗಾಯಾಳುಗಳಿಗೆ ನೆರವಾದ ಸಂಸದ ಪ್ರತಾಪ ಸಿಂಹ

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಅಪಘಾತ ಕಂಡ ತಕ್ಷಣ ಸಂಸದ ಪ್ರತಾಪ ಸಿಂಹ ಗಾಯಾಳುಗಳ ನೆರವಿಗೆ ಧಾವಿಸಿದ್ದಾರೆ.

ಚನ್ನಪಟ್ಟಣದ ಹೊರವಲಯದಲ್ಲಿ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಮುದುಗೆರೆ ಬಳಿ ಹೋಟೆಲ್ ವೊಂದರಲ್ಲಿ ಪ್ರತಾಪ ಸಿಂಹ ಅವರು ಊಟ ಮಾಡುತ್ತಿದ್ದ ವೇಳೆ ಅಪಘಾತದ ಸದ್ದು ಕೇಳಿಸಿದೆ.

ತಕ್ಷಣ ಹೊರ ಬಂದು ನೋಡಿದಾಗ ಕಾರೊಂದು ಪಲ್ಟಿಯಾಗಿತ್ತು. ಗಾಯಳುಗಳನ್ನ ಆಸ್ಪತ್ರೆಗೆ ಸೇರಿಸಲು ಅವರು ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ. ಕಾರಿನ ಟೈರ್ ಬ್ಲಾಸ್ಟ್ ಆಗಿ ಅಪಘಾತ ಸಂಭವಿಸಿದೆ ಎಂದು ಗೊತ್ತಾಗಿದೆ.

ಆರಂಭದಲ್ಲಿ ಇದು ಸಂಸದ ಪ್ರತಾಪ್ ಸಿಂಹ ಅವರ ಕಾರು ಅಪಘಾತವಾಗಿದೆ ಎಂದೇ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು

ಸ್ವತಃ ಪ್ರತಾಪ್ ಸಿಂಹ ಅವರು ಈ ಕುರಿತು ಸ್ಪಷ್ಟನೆ ನೀಡಿದ್ದು, ನನ್ನ ಕಾರು ಅಪಘಾತವಾಗಿಲ್ಲ. ಬೆಂಗಳೂರಿನ ವ್ಯಕ್ತಿಯೊಬ್ಬರ ಕಾರು ಅಪಘಾತವಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರತಾಪ್ ಸಿಂಹ ಅವರ ಕಾರು ಅಪಘಾತವಾಗಿದೆ. ಜೊತೆಗೆ ಅವರ ಕುಟುಂಬ ಕೂಡ ಇತ್ತು ಎಂಬ ಸುದ್ದಿ ಹಬ್ಬಿತ್ತು. ಈ ಬಗ್ಗೆ ವಿಡಿಯೋ ಮೂಲಕ ಸ್ಪಷ್ಟನೆ ನೀಡಿರುವ ಸಂಸದರು, ಬೆಂಗಳೂರಿನ ವೈಟ್ ಫೀಲ್ಡ್ ನಿವಾಸಿ ಉನ್ನಿಕೃಷ್ಣ ಎಂಬವರ ಕಾರು ಪಲ್ಟಿಯಾಗಿದೆ. ಅಪಘಾತ ನಡೆದಾಗ ನಾನು ಸಮೀಪದ ಹೊಟೇಲ್ ನಲ್ಲಿದ್ದೆ. ಅಪಘಾತದ ಶಬ್ಧ ಕೇಳಿ ಅಲ್ಲಿಗೆ ಓಡಿ ಹೋಗಿದ್ದೆವು ಎಂದು ತಿಳಿಸಿದ್ದಾರೆ.

ಅಪಘಾತವಾದಾಗ ನಾವು ಚನ್ನಪಟ್ಟಣದ ಹೊಟೇಲ್ ನಲ್ಲಿ ಊಟ ಮಾಡುತ್ತಿದ್ದೆವು. ಬೆಂಗಳೂರು-ಮೈಸೂರು ಹೆದ್ದಾರಿ ಇದಾಗಿದ್ದು, ಯಾರು ಕೂಡ ಆ ಸಮಯದಲ್ಲಿ ವಾಹನ ನಿಲ್ಲಿಸಲಿಲ್ಲ. ಊಟ ಮಾಡುತ್ತಿದ್ದ ನಾವು ಸ್ಥಳಕ್ಕೆ ಓಡಿ ಹೋದೆವು. ದೊಡ್ಡ ಮಟ್ಟದ ಅಪಘಾತವಾಗಿರಲಿಲ್ಲ. ಹಾಗಾಗಿ ಕುಟುಂಬವನ್ನು ತಕ್ಷಣವೇ ಬಾಡಿಗೆ ಕಾರಿನಲ್ಲಿ ಬೆಂಗಳೂರಿಗೆ ಕಳುಹಿಸಿದೆವು ಎಂದು ಅವರು ಹೇಳಿದರು. ಜೊತೆಗೆ ಈ ರೀತಿಯ ಅಪಘಾತವಾದಾಗ ಸಾರ್ವಜನಿಕರು ಸ್ಪಂದಿಸಬೇಕು ಎಂದರು.

ಜನರು ನನಗೆ ಕರೆ ಮಾಡ್ತಿದ್ದಾರೆ. ನನ್ನ ಕಾರು ಅಪಘಾತವಾಗಿಲ್ಲ, ನಾನು ಸುರಕ್ಷಿತವಾಗಿದ್ದೇನೆ ಎಂದು ಪ್ರತಾಪ್ ಸಿಂಹ ಅವರು ಸ್ಪಷ್ಟನೆ ನೀಡಿದ್ದಾರೆ.