Home latest PM Awas yojana; ಎಲ್ಲರಿಗೂ ಮನೆ ಭಾಗ್ಯ- ಆವಾಸ್ ಯೋಜನೆ-ನೀವು ಪಟ್ಟಿಯಲ್ಲಿದ್ದೀರಾ ಪರಿಶೀಲಿಸುವುದು ಹೇಗೆ?

PM Awas yojana; ಎಲ್ಲರಿಗೂ ಮನೆ ಭಾಗ್ಯ- ಆವಾಸ್ ಯೋಜನೆ-ನೀವು ಪಟ್ಟಿಯಲ್ಲಿದ್ದೀರಾ ಪರಿಶೀಲಿಸುವುದು ಹೇಗೆ?

Hindu neighbor gifts plot of land

Hindu neighbour gifts land to Muslim journalist

ತನ್ನದೇ ಒಂದು ಮನೆ ಹೊಂದಬೇಕೆನ್ನುವುದು ಎಲ್ಲರಿಗೂ ಒಂದೇ ಆಸೆ ಇದ್ದೇ ಇರುತ್ತದೆ. ಇಂತಹ ಒಂದು ಆಸೆಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆ ಆಸರೆಯಾಗಿರುತ್ತದೆ. ಪ್ರತಿಯೊಬ್ಬರಿಗೂ ಇರಲು ಮನೆ ಒದಗಿಸುವ ಮಹತ್ವಕಾಂಕ್ಷಿ ಯೋಜನೆ ಎನಿಸಿದ ಪ್ರಧಾನಮಂತ್ರಿ ಅವಾಸ್ ಯೋಜನೆ ಬಹಳ ಜನಪ್ರಿಯವಾಗಿದೆ ಈ ಯೋಜನೆಯಲ್ಲಿ ಫಲಾನುಭವಿಗಳಿಗೆ ಬಹಳ ಕಡಿಮೆ ಬಡ್ಡಿ ದರದಲ್ಲಿ ಅಥವಾ ರಿಯಾಯಿತಿ ಬಡ್ಡಿ ದರದಲ್ಲಿ ಗೃಹ ಸಾಲ ಒದಗಿಸಲಾಗುತ್ತದೆ.

ಮನೆ ಕಟ್ಟಿಸಿಕೊಳ್ಳಲು ಪ್ರಧಾನಮಂತ್ರಿಯ ಆವಾಸ್ ಯೋಜನೆ ಅಡಿಯಲ್ಲಿ ನಿಮ್ಮ ಬಳಿ ಖಾಲಿ ಜಾಗವೇನಾದರೂ ಇದ್ದರೆ ಸರ್ಕಾರವು ಜನರಿಗೆ 6,88,000 ಕೊಡುತ್ತದೆ. ಈ ಹಣದಲ್ಲಿ ನಿಮಗೆ ಸಾಲ ಮತ್ತು ಸಬ್ಸಿಡಿ ಎರಡೂ ಕೂಡ ಸೇರಿಕೊಂಡಿರುತ್ತದೆ.

ಈ ವರ್ಷದ ಮಾರ್ಚ್ 31ಕ್ಕೆ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿತ್ತು. ಅದೀಗ ಮುಗಿದು ಹೋಗಿದೆ. ಇನ್ನೀಗ ಅರ್ಜಿ ಸಲ್ಲಿಸಲು ಆಗುವುದಿಲ್ಲ. ಮುಂಬರುವ ವರ್ಷಗಳಲ್ಲಿ ಸರ್ಕಾರ ಮತ್ತೊಮ್ಮೆ ಅವಾಸ್ ಯೋಜನೆಗೆ ಅರ್ಜಿ ಆಹ್ವಾನಿಸುವವರಿಗೂ ಕಾಯಬೇಕಾಗುತ್ತದೆ.

ಪಿಎಂ ಎ ವೈ ಯೋಜನೆಗೆ ಅರ್ಜಿ ಸಲ್ಲಿಸಲು ಸಮಯಕಾಂಶ ಮುಗಿದಿರುವುದರಿಂದ, ಈಗಾಗಲೇ ನೀವು ಅರ್ಜಿ ಸಲ್ಲಿಸಿದ್ದರೆ ಅದರ ಸ್ಥಿತಿಗತಿ ಪರೀಕ್ಷಿಸಲು ಅವಕಾಶವಿದೆ. ಮೊದಲಿಗೆ ಪಿಎಂ ಎ ವೈ ಎಂ ಐ ಎಸ್ ವೆಬ್ ಸೈಟ್ ಗೆ ಭೇಟಿ ಕೊಟ್ಟು ಲಾಗಿನ್ ಆಗಬೇಕು. ಆಗ ನಿಮಗೆ ಟ್ರ್ಯಾಕಿಂಗ್ ಮಾಡುವ ಅವಕಾಶ ಸಿಗುತ್ತದೆ. ಪರದೆ ಮೇಲೆಯೇ ಎಲ್ಲಾ ಸೂಚನೆಗಳು ನಿಮಗೆ ಸಿಗುತ್ತವೆ. ಅದರಂತೆ ಕ್ಲಿಕ್ ಮಾಡುತ್ತಾ ಹೋದರೆ ನೀವು ಈ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿದ್ದೀರಾ ಇಲ್ವಾ ತಿಳಿಯುತ್ತದೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅತಿ ಹೆಚ್ಚು ಮುಂಜೂರಾದ ಮನೆಗಳ ಪಟ್ಟಿಯಲ್ಲಿ ಆಂದ್ರವೇ ನಂಬರ್ ಒನ್. ಇಲ್ಲಿ 20 ಲಕ್ಷಕ್ಕೂ ಹೆಚ್ಚು ಮನೆಗಳು ಮಂಜೂರಾಗಿದೆ. ಕರ್ನಾಟಕದಲ್ಲಿ 6.51 ಲಕ್ಷ ಮನೆಗಳು ಮಾತ್ರ ಮಂಜೂರಾಗಿರುವುದು ಕರ್ನಾಟಕದಲ್ಲಿ ಶೇಕಡ 25 ರಷ್ಟು ಪೂರ್ಣಗೊಂಡಿದೆ.

ಎಷ್ಟು ಅನುದಾನವು ಬರುತ್ತದೆ??
ಎಸ್.ಸಿ / ಎಸ್.ಟಿ ಫಲಾನುಭವಿಗಳಿಗೆಷ್ಟು ?

ಪ್ರತಿ ಮನೆಗೆ ತಗಲುವ ವೆಚ್ಚರೂ : 6,88,000
ಕೇಂದ್ರ ಸರ್ಕಾರದ ಅನುದಾನ : 150,000
ರಾಜ್ಯ ಸರ್ಕಾರದ ಅನುದಾನ : 200,000
ಎಸ್.ಸಿ.ಪಿ/ಟಿ.ಎಸ್.ಪಿ ಅನುದಾನ : 75,000
ಫಲಾನಾಭಿಗಳ ಪಾವತಿಸಬೇಕಾದ ಹಣ ಈ ಹಣವನ್ನು ನೀವು ಡಿಡಿ ಮೂಲಕ ಕಟ್ಟಬೇಕು 68,800
ಬ್ಯಾಂಕ್ ಸಾಲ 1,94,200 (ಈ ಹಣವನ್ನು ನೀವು ಮರುಪಾವತಿ ಮಾಡಬೇಕು )

ಒಟ್ಟು 6,88,000 ರೂಪಾಯಿ.

ಅಲ್ಪಸಂಖ್ಯಾತರು ಹಾಗೂ ಇತರೆ ವರ್ಗದ ಫಲಾನುಭವಿಗಳು ಗಳಿಗೆಷ್ಟು ?
ಪ್ರತಿ ಮನೆಗೆ ತಗಲುವ ವೆಚ್ಚರೂ: 6,88,000
ಕೇಂದ್ರ ಸರ್ಕಾರದ ಅನುದಾನ : 1,50,000
ರಾಜ್ಯ ಸರ್ಕಾರದ ಅನುದಾನ : 1,20,000
ಫಲಾನಾಭಿಗಳ ಪಾವತಿಸಬೇಕಾದ ಹಣ, ಈ ಹಣವನ್ನು ನೀವು ಡಿಡಿ ಮೂಲಕ ಕಟ್ಟಬೇಕು (15%) -103,200
ಬ್ಯಾಂಕ್ ಸಾಲ 314,800 ( ಈ ಹಣವನ್ನು ನೀವು ಮರುಪಾವತಿ ಮಾಡಬೇಕು)

ಒಟ್ಟು ಹಣ 6,88,000 ರೂಪಾಯಿ.

ಡಿಡಿಯ ಹಣವನ್ನು ಯಾರಿಗೆ ಪಾವತಿಸಬೇಕು?

The Commissioner, Karnataka Slum Development Board, Bengaluru, ಇವರ ಹೆಸರಿಗೆ D.D ಯನ್ನು ಪಡೆದು ಈ ಕಛೇರಿಗೆ ಸಲ್ಲಿಸತಕ್ಕದ್ದು.

ಪಿಎಂಎಐ ಯೋಜನೆ ಏನು?

ಗ್ರಾಮೀಣ ಹಾಗೂ ನಗರ ಎರಡು ಪ್ರದೇಶಗಳಿಗೆ ಪ್ರತ್ಯೇಕವಾಗಿ ಪಿಎಂಎಐ ಯೋಜನೆಗಳಿವೆ. ಸರ್ಕಾರವೇ ಈ ಯೋಜನೆಯ ಅಡಿ ಮನೆಗಳನ್ನು ನಿರ್ಮಿಸಿ ಕೊಡುತ್ತದೆ. ಪರಿಸರ ಪೂರಕ ವಸ್ತುಗಳನ್ನು ಬಳಸಿ ಮನೆ ನಿರ್ಮಿಸಲಾಗುವುದು ವಿಶೇಷ.

ನಿರ್ದಿಷ್ಟ ಆದಾಯ ಗುಂಪಿನ ಜನರು ಈ ಯೋಜನೆಯ ಲಾಭ ಪಡೆಯಲು ಅರ್ಹರಾಗಿರುತ್ತಾರೆ. ಮೂರರಿಂದ ಆರು ಲಕ್ಷದವರೆಗೆ ವಾರ್ಷಿಕ ಆದಾಯ ಇರುವ ಜನರಿಗೆ 6 ಲಕ್ಷ ರೂ ವರೆಗೆ ಸಬ್ಸಿಡಿ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಇರುತ್ತದೆ. ಹಾಗೆಯೇ ಮಧ್ಯಮ ಮಟ್ಟದ ಆದಾಯ ಇರುವ ವರ್ಗದ ಜನರಿಗೆ 12 ಲಕ್ಷ ರೂ ವರೆಗೆ ಸಬ್ಸಿಡಿ ಬಡ್ಡಿ ದರದಲ್ಲಿ ಸಾಲ ಸಿಗುತ್ತದೆ. ಈ ಎರಡನೆ ವರ್ಗದ ಜನರಿಗೆ ಬಡ್ಡಿದರ ಬಹಳ ಕಡಿಮೆ ಇರುತ್ತದೆ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಈ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ಉಚಿತವಾಗಿ ಮನೆಗಳನ್ನು ಕೊಡಲಾಗುವುದಿಲ್ಲ. ಮನೆ ಕೊಳ್ಳಲು ಕಡಿಮೆ ಬಡ್ಡಿ ದರದ ಸಾಲದ ಸೌಲಭ್ಯವನ್ನು ಮಾತ್ರ ಒದಗಿಸಲಾಗುತ್ತದೆ.

ಫಲಾನುಭವಿಗಳ ಮಾನದಂಡ ಹೇಗೆ? ದುರ್ಬಲ ವರ್ಗ ಮತ್ತು ಬಡವರಿಗೆ ಸ್ವಂತ ಮನೆ ಸಂಪಾದಿಸಲು ನೆರವಾಗುವ ಉದ್ದೇಶ ಪ್ರಧಾನ ಮಂತ್ರಿ ಆವಾಸ್ ಯೋಜನೆ ಯಾಗಿದೆ. ಈ ಯೋಜನೆಯಡಿ ಮನೆ ಹೊಂದುವ ಉದ್ದೇಶ ಇರುವವರು ಸ್ವಂತ ಸೂರು ಹೊಂದಿರಬಾರದು ಎಂಬುದು ಪ್ರಮುಖ ನಿಯಮ.

ಅರ್ಜಿ ಸಲ್ಲಿಸುವಾಗ ಆಧಾರ್ ಕಾರ್ಡ್ ನೀಡುವುದು ಕಡ್ಡಾಯ. ಇದರಿಂದ ನಕಲಿ ಅರ್ಜಿಗಳನ್ನು ತಡೆಯಬಹುದು.