Home latest Petrol Diesel : ಪೆಟ್ರೋಲ್ ಡೀಸೆಲ್ ದರ ಏರಿಕೆ!! OPEC Plus ನಿಂದ ಮಹತ್ವ ನಿರ್ಧಾರದ...

Petrol Diesel : ಪೆಟ್ರೋಲ್ ಡೀಸೆಲ್ ದರ ಏರಿಕೆ!! OPEC Plus ನಿಂದ ಮಹತ್ವ ನಿರ್ಧಾರದ ಘೋಷಣೆ

Petrol Diesel

Hindu neighbor gifts plot of land

Hindu neighbour gifts land to Muslim journalist

Petrol Diesel : ತೈಲ ಮಾರುಕಟ್ಟೆಯಲ್ಲಿ ಸ್ಥಿರತೆ ಕಾಪಾಡುವ ಗುರಿ ಹೊಂದಿರುವ ಹಿನ್ನೆಲೆಯಲ್ಲಿ, ಸೌದಿ ಅರೇಬಿಯಾದ ರಾಜಧಾನಿ ಮತ್ತು ಮುಖ್ಯ ಹಣಕಾಸು ಕೇಂದ್ರವಾದ ರಿಯಾದ್‌ನಲ್ಲಿ ಮೇ ತಿಂಗಳಿಂದ 2023 ರ ಅಂತ್ಯದವರೆಗೆ ದಿನಕ್ಕೆ 500,000 ಬ್ಯಾರೆಲ್‌ಗಳ ಉತ್ಪಾದನೆ ಕಡಿತಗೊಳಿಸುವುದಾಗಿ ನಿರ್ಧರಿಸಿದೆ ಎಂದು ಸೌದಿ ಅಧಿಕಾರಿಗಳು ತಿಳಿಸಿದ್ದಾರೆ.

ಮುಖ್ಯವಾಗಿ ಸೌದಿ ಅರೇಬಿಯಾ ಮತ್ತು ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ (OPEC) ಸೇರಿದಂತೆ ತೈಲ ಉತ್ಪಾದಕರು ದಿನಕ್ಕೆ ಸುಮಾರು 1.16 ಮಿಲಿಯನ್ ಬ್ಯಾರೆಲ್ ಕಚ್ಚಾತೈಲ ಉತ್ಪಾದನೆಯನ್ನು ಕಡಿತಗೊಳಿಸುವುದಾಗಿ ಘೋಷಿಸಿದ್ದಾರೆ. ಜೊತೆಗೆ ಕಚ್ಚಾ ತೈಲ ಉತ್ಪಾದನೆಯ ಪ್ರಮಾಣ ಕಡಿಮೆಯಾದರೆ, ತೈಲದ ದರವು ಏರಿಕೆಯಾಗಲಿದೆ. ಇದರಿಂದ ಪೆಟ್ರೋಲ್ ಮತ್ತು ಡೀಸೆಲ್ (Petrol Diesel) ದರಗಳೂ ಹೆಚ್ಚುವ ಸಂಭವ ಇದೆ ಎನ್ನಲಾಗಿದೆ .

ಈಗಾಗಲೇ 2022ರ ಅಕ್ಟೋಬರ್ 5ರಂದು ನಡೆದ 33ನೇ OPEC ಮತ್ತು OPEC ಸಚಿವರ ಸಭೆಯ ಸಮಯದಲ್ಲಿ ಸ್ವಯಂಪ್ರೇರಿತವಾಗಿ ಉತ್ಪಾದನೆ ಕಡಿತ ಮಾಡುವುದರ ಕುರಿತು ಚರ್ಚಿಸಲಾಗಿತ್ತು. ಆ ಸಂದರ್ಭದಲ್ಲಿ ಒಪೆಕ್ ಪ್ಲಸ್ ಅವರು ತಮ್ಮ ನೀತಿಗಳಲ್ಲಿ ಯಾವುದೇ ಬದಲಾವಣೆ ಮಾಡಲು ಉದ್ದೇಶಿಸಿಲ್ಲ ಎಂದು ಹೇಳಿದ್ದರು. ಪ್ರಸ್ತುತ ಕೈಗೊಂಡ ಕ್ರಮ ಆಶ್ಚರ್ಯಕರವಾಗಿದ್ದು, ಎಲ್ಲರನ್ನೂ ಬೆಚ್ಚಿಬೀಳಿಸಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

ಇನ್ನು ಇರಾಕ್ ಕೂಡ ಮೇ ತಿಂಗಳಿನಿಂದ ಈ ವರ್ಷದ ಅಂತ್ಯದವರೆಗೆ ಸ್ವಯಂಪ್ರೇರಿತವಾಗಿ ತೈಲ ಉತ್ಪಾದನೆಯನ್ನು ದಿನಕ್ಕೆ 211,000 ಬ್ಯಾರೆಲ್‌ಗಳಷ್ಟು (ಬಿಪಿಡಿ) ಕಡಿತಗೊಳಿಸಲಿದೆ ಎಂದು ದೇಶದ ತೈಲ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಕಳೆದ ವರ್ಷ ಫೆಬ್ರವರಿಯಲ್ಲಿ ರಷ್ಯಾ-ಉಕ್ರೇನ್ ಯುದ್ಧ ಆರಂಭವಾದ ನಂತರ ತೈಲ ಬೆಲೆ ಏರಿಕೆಯಾಗಿದ್ದು, ಇರಾಕ್ ಸೇರಿದಂತೆ ತೈಲ ರಫ್ತು ಮಾಡುವ ದೇಶಗಳಿಗೆ ಲಾಭವಾಗಿದೆ. ಅದಲ್ಲದೆ ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾಗುವ ಭೀತಿಯಿಂದ ಕಳೆದ ಕೆಲವು ತಿಂಗಳುಗಳಲ್ಲಿ ತೈಲ ಬೆಲೆಗಳು ಇಳಿಕೆ ಕಂಡಿವೆ. ಒಟ್ಟಿನಲ್ಲಿ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಇರಾಕ್ 4.5 ಮಿಲಿಯನ್ ಬಿಪಿಡಿಗಿಂತ ಹೆಚ್ಚು ಉತ್ಪಾದಿಸುತ್ತಿದ್ದು, ಆರ್ಥಿಕತೆಯು ಕಚ್ಚಾ ತೈಲ ರಫ್ತುನ ಮೇಲೆ ಅವಲಂಬಿತವಾಗಿದೆ.

ಒಟ್ಟಿನಲ್ಲಿ ಜಾಗತಿಕ ತೈಲ ಮಾರುಕಟ್ಟೆಯನ್ನು ಸ್ಥಿರಗೊಳಿಸಲು ಒಪೆಕ್ ಪ್ಲಸ್ ಕೆಲವು ದೇಶಗಳು, ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ (OPEC) ಮತ್ತು ಅದರ ಮಿತ್ರರಾಷ್ಟ್ರಗಳ ಸಮನ್ವಯದಲ್ಲಿ ಈ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ.