Home Interesting ಪ್ಯಾರಾಸೈಲಿಂಗ್ ಮಾಡುವ ವೇಳೆ ತುಂಡಾದ ಹಗ್ಗ !! |ಬಾನೆತ್ತರದಿಂದ ಧೊಪ್ಪೆಂದು ಸಮುದ್ರಕ್ಕೆ ಬಿದ್ದ ದಂಪತಿ|ರಜೆಯ ಮಜಾ...

ಪ್ಯಾರಾಸೈಲಿಂಗ್ ಮಾಡುವ ವೇಳೆ ತುಂಡಾದ ಹಗ್ಗ !! |ಬಾನೆತ್ತರದಿಂದ ಧೊಪ್ಪೆಂದು ಸಮುದ್ರಕ್ಕೆ ಬಿದ್ದ ದಂಪತಿ|ರಜೆಯ ಮಜಾ ಅನುಭವಿಸಲು ಹೋಗಿದ್ದ ದಂಪತಿಗಳಿಗೆ ಎದುರಾಗಿತ್ತು ಶಾಕ್!!

Hindu neighbor gifts plot of land

Hindu neighbour gifts land to Muslim journalist

ಭಾನುವಾರ ಅಂದ ಕೂಡಲೇ ಎಲ್ಲರೂ ಮಜಾ ಮಾಡೋದರಲ್ಲೇ ಮುಳುಗಿ ಇರುತ್ತಾರೆ.ಪಾರ್ಕ್, ಬೀಚ್ ಅಂತ ಕಾಲ ಕಳೆಯುತ್ತಾರೆ. ಇದೇ ತರ ಇಲ್ಲೊಂದು ದಂಪತಿ ತಮ್ಮ ರಜೆಯನ್ನು ಮಜಾ ಮಾಡಲು ಹೋಗಿ ಯಾವ ಪಚೀತಿ ಅನುಭವಿಸಿದ್ದಾರೆ ನೀವೇ ನೋಡಿ.

ಹೌದು. ನಮಗೆಲ್ಲರಿಗೂ ಸಮುದ್ರದ ಮೇಲೆ ಪ್ಯಾರಾಸೈಲಿಂಗ್​ ಮಾಡುತ್ತ ಹಾರಾಟ ನಡೆಸೋದು ಎಷ್ಟು ಮಜಾ ಎಂದು ತಿಳಿದಿದೆ. ಆದರೆ ಅದು ಅಷ್ಟೇ ಅಪಾಯವೂ ಹೌದು.ಇದರಲ್ಲಿ ಕೊಂಚ ಯಾಮಾರಿದ್ರೂ ಸಹ ಜೀವಕ್ಕೆ ಅಪಾಯವಾಗುವಂತಹ ಸಂದರ್ಭ ಬಂದೆದುರಾಗಬಹುದು.ಅದೇ ರೀತಿ ಇಲ್ಲಿ ನಡೆದಿದ್ದು ಇದೇ ರೀತಿಯ ಘಟನೆ.

ಗುಜರಾತ್​ ಮೂಲದ ದಂಪತಿಗಳಾದ ಅಜಿತ್​ ಕಥಾಡ್​ ಹಾಗೂ ಸರಳ ಕಥಾಡ್​ ದಂಪತಿ ಭಾನುವಾರ ರಜೆಯನ್ನು ಎಂಜಾಯ್​ ಮಾಡೋಕೆ ದಿಯು ಸಮುದ್ರಕ್ಕೆ ಆಗಮಿಸಿದ್ದರು.ಸಮುದ್ರ ತೀರದಲ್ಲಿ ಪ್ಯಾರಾಸೈಲಿಂಗ್​ ಮಾಡುತ್ತಿದ್ದ ವೇಳೆ ಪ್ಯಾರಾಚೂಟ್​ನ ಹಗ್ಗ ತುಂಡಾದ ಪರಿಣಾಮ ದಂಪತಿ ಸಮುದ್ರಕ್ಕೆ ಬಿದ್ದಿದ್ದಾರೆ.ಹಗ್ಗ ತುಂಡಾಗುತ್ತಿದ್ದಂತೆಯೇ ಆಘಾತಕ್ಕೊಳಗಾದರು.ಅದೃಷ್ಟವಶಾತ್​​ ಸಮುದ್ರಕ್ಕೆ ಬಿದ್ದರೂ ಯಾವುದೇ ಗಾಯವೂ ಆಗದಂತೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಬೀಚ್​ನಲ್ಲಿ ಲೈಫ್​ ಗಾರ್ಡ್​ಗಳು ಕೂಡಲೇ ದಂಪತಿಯತ್ತ ಧಾವಿಸಿದ್ದಾರೆ. ಅಲ್ಲದೇ ದಂಪತಿ ಧರಿಸಿದ್ದ ಲೈಫ್​ ಜಾಕೆಟ್​ ಕೂಡ ಅವಘಡದಿಂದ ಅವರನ್ನು ಕಾಪಾಡಿದೆ.ದಿಯುವಿನ ನಾಗೋವಾ ಕಡಲಿನಲ್ಲಿ ಪ್ಯಾರಾಸೈಲಿಂಗ್​ ಮಾಡುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.

https://youtu.be/8iouczlkrg0

ಇದೀಗ ದಂಪತಿಗಳ ಪ್ಯಾರಾಸೈಲಿಂಗ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್​ ಆಗಿದ್ದು, ಒಮ್ಮೆಗೆ ಎದೆ ಝಲ್​ ಎನ್ನಿಸುವಂತಿದೆ.ಮುಗಿಲೆತ್ತರಕ್ಕೆ ಹಾರಿದ್ದ ದಂಪತಿಯ ಪ್ಯಾರಾಚೂಟ್​ ಹಗ್ಗ ಕಟ್​ ಆದ ಪರಿಣಾಮ ಅವರು ಸಮುದ್ರಕ್ಕೆ ಬೀಳುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.ಪವರ್​ ಬೋಟ್​ನಲ್ಲಿ ಅಜಿತ್​ ಸಹೋದರ ರಾಕೇಶ್​​ ಸಮುದ್ರಕ್ಕೆ ಇವರು ಬೀಳುತ್ತಿದ್ದಂತೆಯೇ ಕೂಗಲು ಆರಂಭಿಸಿದ್ದಾರೆ.

ಈ ಘಟನೆಯ ಬಗ್ಗೆ ಮಾತನಾಡಿದ ರಾಕೇಶ್​, ನಾನು ವಿಡಿಯೋ ಚಿತ್ರೀಕರಣ ಮಾಡುತ್ತಿದ್ದೆ. ಹಗ್ಗ ತುಂಡಾದ ತಕ್ಷಣ ನನಗೆ ಏನು ಮಾಡಬೇಕೆಂದು ತಿಳಿಯಲಿಲ್ಲ. ಮುಗಿಲೆತ್ತರದಿಂದ ನನ್ನ ಸಹೋದರ ಹಾಗೂ ಅತ್ತಿಗೆ ಸಮುದ್ರಕ್ಕೆ ಬಿದ್ದುದ್ದನ್ನು ಕಣ್ಣಾರೆ ಕಂಡಿದ್ದೆ. ಈ ಕ್ಷಣದಲ್ಲಿ ನನಗೆ ಅಸಹಾಯಕ ಎನಿಸಿದ ಮಟ್ಟಿಗೆ ಇನ್ಯಾವತ್ತು ಎನಿಸಿರಲಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

ಪ್ಯಾರಾಸೈಲಿಂಗ್​ ಸಿಬ್ಬಂದಿ ಅಜಾಗರೂಕತೆಯೇ ಇದಕ್ಕೆ ಕಾರಣ ಎಂದು ಇದೇ ವೇಳೆ ಕಿಡಿಕಾರಿದ್ರು.ಆದರೆ ಪಾಮ್ಸ್​ ಅಡ್ವೆಂಚರ್​ ಹಾಗೂ ಮೋಟರ್ ಸ್ಪೋರ್ಟ್ಸ್​ ಮಾಲೀಕ ಈ ಘಟನೆಗೆ ಅತಿಯಾದ ಗಾಳಿಯೇ ಕಾರಣ ಎಂದು ಹೇಳಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಎಂದಿಗೂ ಇಂತಹ ಘಟನೆ ನಡೆದಿರಲಿಲ್ಲ. ಭಾನುವಾರ ಅತಿಯಾದ ಗಾಳಿ ಬೀಸುತ್ತಿತ್ತು. ಇದೇ ಕಾರಣಕ್ಕೆ ಈ ಘಟನೆ ಸಂಭವಿಸಿದೆ ಎಂದು ಮೋಹನ್​ ಲಕ್ಷ್ಮಣ ಹೇಳಿದ್ದಾರೆ.