Home latest Death Case:ರಹಸ್ಯ ‘ಒಂದು ಮೊಟ್ಟೆಯ ಕಥೆ’ ಗೆ ಸಾವು ಕಂಡಳು ನವವಿವಾಹಿತೆ! ಗಂಡ ಹೇಳಿದ್ದ ಎರಡು...

Death Case:ರಹಸ್ಯ ‘ಒಂದು ಮೊಟ್ಟೆಯ ಕಥೆ’ ಗೆ ಸಾವು ಕಂಡಳು ನವವಿವಾಹಿತೆ! ಗಂಡ ಹೇಳಿದ್ದ ಎರಡು ಸುಳ್ಳಿನ ಕಂತೆ!

Newly married woman death

Hindu neighbor gifts plot of land

Hindu neighbour gifts land to Muslim journalist

Newly married woman death: ಸಾಮಾನ್ಯವಾಗಿ ಸಣ್ಣ ಪುಟ್ಟ ವಿಷಯದಲ್ಲಿ ಸುಳ್ಳು(Lie) ಹೇಳೋದು ಸಾಮಾನ್ಯ. ಆದರೆ, ಸುಳ್ಳಿನ ಕಂತೆಯಲ್ಲಿ ಹೆಚ್ಚಿನ ದಿನ ಜೀವಿಸಲು ಆಗದು. ಒಂದಲ್ಲ ಒಂದು ದಿನ ಆ ಸುಳ್ಳಿನ ಕಥೆ ಬಹಿರಂಗವಾಗಲೇ ಬೇಕು. ಇದೀಗ, ಸುಳ್ಳಿನ ಸಂತೆಯೇ ಸಾವಿನ ಮನೆಗೆ ಆಹ್ವಾನ ಮಾಡಿಕೊಟ್ಟ ಪ್ರಹಸನವೊಂದು ಮುನ್ನಲೆಗೆ ಬಂದಿದೆ.

ತಮಿಳುನಾಡಿನ(Tamilnadu)ಕಾಂಚಿಪುರಂ ಜಿಲ್ಲೆಯ ಅಮರಂಪೇಡು ಗ್ರಾಮದಲ್ಲಿ ಹೆಣ್ಣು(Women)ಮಗಳೊಬ್ಬಳು ಅನುಮಾನಾಸ್ಪದ ರೀತಿಯಲ್ಲಿ ಮಾರ್ಚ್ 2ನೇ ತಾರೀಕು ಮೃತಪಟ್ಟ ಘಟನೆ ನಡೆದಿತ್ತು.ಲೋಕಪ್ರಿಯಾ ಮೃತ ದುರ್ದೈವಿಯಾಗಿದ್ದು, ಮದುವೆಯಾಗಿ (Marraige)ಸರಿಯಾಗಿ 8 ತಿಂಗಳ ಕೂಡ ಕಳೆಯುವ ಮುನ್ನವೇ ಬಾರದ ಲೋಕಕ್ಕೆ (Newly married woman death) ಪಯಣ ಆರಂಭಿಸಿದ್ದಾಳೆ. 32 ವರ್ಷದ ಗೋಕುಲ ಕಣ್ಣನ್ ಹಾಗೂ ಲೋಕಪ್ರಿಯಾ ಕೇವಲ 8 ತಿಂಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಮುನ್ನುಡಿ ಬರೆದಿದ್ದರು. ಲೋಕಪ್ರಿಯಾ ಮೃತ ಪಟ್ಟ ಸಂದರ್ಭ ಈ ಸಾವನ್ನು ಆತ್ಮಹತ್ಯೆ(Sucide) ಎಂದು ಪರಿಗಣಿಸಲಾಗಿತ್ತು. ಆದರೆ, ಈ ಪ್ರಕರಣದ ಅಸಲಿ ಗುಟ್ಟು ಈಗ ರಟ್ಟಾಗಿದೆ.

ಗೋಕುಲ ಕಣ್ಣನ್ ಮತ್ತು ಆತನ ಕುಟುಂಬಸ್ಥರು ಲೋಕಪ್ರಿಯಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವಾದ ಮಾಡಿದ್ದರು ಎನ್ನಲಾಗಿದೆ. ಆದರೆ, ಮಗಳ ಸಾವಿನ ಬಗ್ಗೆ ಅನುಮಾನಗೊಂಡ ಲೋಕಪ್ರಿಯಾಳ ಪೋಷಕರು, ಸೋಮಂಗಲಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಲೋಕಪ್ರಿಯಾಳನ್ನು ಮದುವೆಯಾಗುವ ಮೊದಲು ಗೋಕುಲ ಕಣ್ಣನ್ ಅನೇಕ ಸುಳ್ಳಿನ ಕಂತೆಯನ್ನ ಹೇಳಿದ್ದಾನೆ.ಗೋಕುಲ ಕಣ್ಣನ್ ಐಟಿ ಉದ್ಯೋಗಿ( IT Worker) ಎಂದು ಸುಳ್ಳು ಹೇಳಿದ್ದು, ಇದನ್ನು ನಂಬಿ ಲೋಕಪ್ರಿಯಾ ಪೋಷಕರು, ಮದುವೆ ಸಮಾರಂಭಕ್ಕೆ ಲಕ್ಷಾಂತರ ರೂಪಾಯಿ ಹಣವನ್ನು (Money) ವರದಕ್ಷಿಣೆ(Dowry) ಯಾಗಿ ನೀಡಿದ್ದಾರೆ. ಲೋಕಪ್ರಿಯಾ ಮೂಲಕ 30 ಸವರನ್ ಚಿನ್ನ, ಗೋಕುಲ್​ಗೆ 6 ಸವರನ್ ಚಿನ್ನ(Gold), ಕಾರು (Car Purchase)ಖರೀದಿಸಲು 1 ಲಕ್ಷ ರೂ. ನಗದು ಹಾಗು ಮನೆಯ ಇತರೆ ಸಾಮಗ್ರಿ ವರದಕ್ಷಿಣೆ ರೂಪದಲ್ಲಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಆಸೆಗೆ ಮಿತಿಯಿಲ್ಲ ಎಂಬಂತೆ ಇಷ್ಟು ಪಡೆದರೂ ಕೂಡ ಗೋಕಲ ಕಣ್ಣನ್ ಮತ್ತಷ್ಟು ಬೇಡಿಕೆ ಇಡುತ್ತಿದ್ದ ಜೊತೆಗೆ ತವರು ಮನೆಯಿಂದ ಮತ್ತೆ 10 ಸವರನ್ ಚಿನ್ನ ತರುವಂತೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.

ಆರೋಪಿಗೆ ತಲೆ ಮೇಲೆ ಕೂದಲು ಇರಲಿಲ್ಲ ಎನ್ನಲಾಗಿದ್ದು, ಅದಕ್ಕಾಗಿ ಲಕ್ಷ ಲಕ್ಷ ರೂಪಾಯಿ ಖರ್ಚು ಮಾಡಿ, ವಿಗ್ ಒಂದನ್ನು ಮಾಡಿಸಿಕೊಂಡಿದ್ದ. ತನ್ನ ‘ಒಂದು ಮೊಟ್ಟೆಯ ಕಥೆ ‘ ಎಲ್ಲಿ ಬಯಲಾಗುವುದೋ ಎಂಬ ಭೀತಿಯಿಂದ ಲೋಕಪ್ರಿಯಾಳ ಕಣ್ಣಿಗೆ ಮಣ್ಣೆರಚಿ ಮದುವೆಯಾಗಿದ್ದಾನೆ. ಆದರೆ, ಯಾವುದೇ ಸುಳ್ಳನ್ನು ಎಷ್ಟು ದಿನ ಮುಚ್ಚಿಡಲು ಸಾಧ್ಯ? ಒಂದಲ್ಲ ಒಂದು ದಿನ ಸುಳ್ಳು ಬಯಲಾಗಬೇಕಲ್ಲವೇ? ಒಂದು ದಿನ ಗೋಕುಲ ಕಣ್ಣನ್​ಗೆ ಎಣ್ಣೆ ಸ್ನಾನ ಮಾಡಿಸಲು ಲೋಕಪ್ರಿಯಾ ಸಿದ್ಧತೆ ಮಾಡಿಕೊಂಡಿದ್ದಾಳೆ. ಲೋಕಪ್ರಿಯಾಳ ಕೈಯಲ್ಲಿ ಎಣ್ಣೆ ಡಬ್ಬ ನೋಡುತ್ತಿದ್ದ ಹಾಗೆಯೇ ಗೋಕುಲ ಕಣ್ಣನ್ ಮನೆಯಿಂದ ಪರಾರಿಯಾಗಿದ್ದಾನೆ. ಪ್ರತಿ ಬಾರಿ ಹೆಂಡತಿ ಕೈಯಲ್ಲಿ ಎಣ್ಣೆ ಡಬ್ಬ ನೋಡಿದಾಗಲೆಲ್ಲ ತನ್ನ ಕೂದಲಿನ ರಹಸ್ಯ ಬಯಲಾಗುವುದೋ ಎಂದು ಕಾಲ್ಕಿಳುತ್ತಿದ್ದ.ಈ ವಿಚಾರವನ್ನು ಗೋಕುಲ ಕಣ್ಣನ್ ಪೋಷಕರ ಬಳಿ ಲೋಕ ಪ್ರಿಯಾ ತಿಳಿಸಿದಾಗ ನಾಚಿಕೆಯಿಂದ ಎಣ್ಣೆ ಸ್ನಾನಕ್ಕೆ ಒಪ್ಪುತ್ತಿಲ್ಲ ಎಂಬ ಕಥೆಯನ್ನು ಹೇಳುತ್ತಿದ್ದರಂತೆ.

ಗೋಕುಲ ಕಣ್ಣನ್​ನ ‘ವಿಗ್ ಕಥೆ’ ಒಂದು ದಿನ ಬಯಲಾಗಿ ಬಿಟ್ಟಿದ್ದು, ಆ ದಿನ ಲೋಕಪ್ರಯಾ ಸತ್ಯವನ್ನು ಮುಚ್ಚಿಟ್ಟಿದ್ದು ಯಾಕೆ? ‘ವಿಗ್ ವಿಚಾರವನ್ನ ಯಾಕೆ ಮುಚ್ಚಿಟ್ಟೆ’ ಎಂದು ಲೋಕಪ್ರಿಯಾ ಗಲಾಟೆ ಮಾಡಿದ್ದು, ಈ ವೇಳೆ ಮಾತಿಗೆ ಮಾತು ಬೆಳೆದು, ಮಾತು ತಾರಕಕ್ಕೇರಿ ಗೋಕುಲ ಕಣ್ಣನ್ ಲೋಕಪ್ರಿಯಾಳ ಮೇಲೆ ಹಲ್ಲೆ ಮಾಡಿದ್ದು, ಹಲ್ಲೆಗೊಳಗಾದ ಲೋಕಪ್ರಿಯಾ ಸ್ಥಳದಲ್ಲೇ ಅಸುನೀಗಿದ್ದಾಳೆ ಎನ್ನಲಾಗಿದೆ. ಈ ರೀತಿ ಕೊಲೆ (Murder) ಮಾಡಿದ ಭೂಪ ಕೊಲೆಯನ್ನು ಆತ್ಮಹತ್ಯೆ ಎಂದು ಬಿಂಬಿಸಿದ್ದಾನೆ. ಸದ್ಯ, ಪೋಷಕರ ದೂರಿನ ಅನುಸಾರ ಪೋಲಿಸ್ ಪ್ರಕರಣ ದಾಖಲಿಸಿ ತನಿಖೆ ವೇಳೆ ಅಸಲಿ ಸತ್ಯ ಬಯಲಾಗಿದೆ.

ಇದನ್ನೂ ಓದಿ: KM Shivalinge gowda : ಚುನಾವಣೆ ಹೊತ್ತಲ್ಲಿ ಜೆಡಿಎಸ್‌ ಬಿಗ್ ಶಾಕ್ : ಅರಸೀಕೆರೆ ಜೆಡಿಎಸ್‌ ಶಾಸಕ ಶಿವಲಿಂಗೇಗೌಡ ರಾಜೀನಾಮೆ