Home latest KSRTC ಬಸ್ ಗಳಲ್ಲಿ ಹೊಸ ವ್ಯವಸ್ಥೆ ಜಾರಿ – ಪ್ರಯಾಣಿಕರು, ಕಂಡಕ್ಟರ್ ಗೆ ಖುಷಿಯೋ ಖುಷಿ

KSRTC ಬಸ್ ಗಳಲ್ಲಿ ಹೊಸ ವ್ಯವಸ್ಥೆ ಜಾರಿ – ಪ್ರಯಾಣಿಕರು, ಕಂಡಕ್ಟರ್ ಗೆ ಖುಷಿಯೋ ಖುಷಿ

Hindu neighbor gifts plot of land

Hindu neighbour gifts land to Muslim journalist

 

KSRTC:  ಬಸ್ ಗಳು ರಶ್ ಆದ ಸಂದರ್ಭದಲ್ಲಿ ಕಂಡಕ್ಟರ್ ಹಾಗೂ ಪ್ರಯಾಣಿಕರು ಇಬ್ಬರಿಗೂ ಕೂಡ ದೊಡ್ಡ ಪಜೀತಿ ಎದುರಾಗುತ್ತದೆ. ಕಂಡಕ್ಟರ್ ಗೆ ಟಿಕೆಟ್ ಮಾಡುವುದು ಸಮಸ್ಯೆ ಆದರೆ, ಪ್ರಯಾಣಿಕರಿಗೆ ತಮ್ಮ ಊರು ಬಂತೋ, ಇಲ್ಲವೋ ಅಥವಾ ಈಗ ನಾವು ಯಾವ ಊರಲ್ಲಿದ್ದೇವೆ ಎಂಬುದು ತಿಳಿಯುವುದೇ ಇಲ್ಲ. ಆದರೆ ಇದೀಗ ಸಾರಿಗೆ ಇಲಾಖೆಯು ಬಸ್ಗಳಲ್ಲಿ ಹೊಸ ವ್ಯವಸ್ಥೆಯೊಂದನ್ನು ಜಾರಿಗೊಳಿಸಿದ್ದು, ಕಂಡಕ್ಟರ್ ಹಾಗೂ ಪ್ರಯಾಣಿಕರು ಎಲ್ಲರಿಗೂ ಖುಷಿಯೋ ಖುಷಿ ಎನ್ನುವಂತಾಗಿದೆ. 

 

 ಆ ಖುಷಿಯ ಸುದ್ದಿ ಏನೆಂದರೆ ಬಸ್ಸುಗಳಲ್ಲಿ ಇನ್ನು ಮುಂದೆ ಮೈಕ್ ವ್ಯವಸ್ಥೆಯನ್ನು ಮಾಡಲಾಗಿದೆ. ಹೌದು, ಅಶ್ವಮೇಧ (Ashwamedha) ಬಸ್‌ಗಳಿಗೆ ಮೈಕ್ ವ್ಯವಸ್ಥೆ ಮಾಡಲಾಗಿದೆ. ಈ ಮೈಕ್‌ ಮೂಲಕ ಇನ್ಮುಂದೆ ಪ್ರಯಾಣಿಕರು, ಕಂಡಕ್ಟರ್‌, ಡ್ರೈವರ್‌ ಎಲ್ಲರೂ ಸುಲಭ ಸಂವಹನ ನಡೆಸಬಹುದಾಗಿದೆ. ಈ ವ್ಯವಸ್ಥೆ ಈಗ ಎಲ್ಲರ ಗಮನ ಸೆಳೆದಿದೆ. ಸಾಮಾನ್ಯವಾಗಿ ಬಸ್‌ಗಳಲ್ಲಿ ಅಧಿಕ ಜನರು ಇದ್ದಾಗ ಕಂಡಕ್ಟರ್‌ಗೆ ಟಿಕೆಟ್‌ ನೀಡುವುದೇ ಒಂದು ದೊಡ್ಡ ಸಮಸ್ಯೆ. ಇದರ ಜೊತೆಗೆ ನಿಲ್ದಾಣಗಳು ಬಂದಾಗ ಅದನ್ನು ಸಹ ಕೂಗಿ ಹೇಳಬೇಕು. ಆದರೆ ಇನ್ಮುಂದೆ ಇದೆಲ್ಲವನ್ನೂ ಪುಟ್ಟ ಮೈಕ್‌ ಮಾಡಲಿದೆ. ಈ ಮೈಕ್‌ ನಿಂದಾಗಿ ಕಂಡಕ್ಟರ್‌ಗಳ ಗಂಟಲು ನೋವು ಕಡಿಮೆ ಆಗಲಿದೆ.

 

ಇಷ್ಟೇ ಅಲ್ಲದೆ ಪ್ರಯಾಣಿಕರು ಸಹ ಸರಿಯಾದ ನಿಲ್ದಾಣದಲ್ಲಿ ಇಳಿಯಲು ಅನುಕೂಲ ಆಗುತ್ತದೆ. ಇದರೊಂದಿಗೆ ಡ್ರೈವರ್‌ ಸಹ ತಾವಿರುವ ಸ್ಥಳದಿಂದಲೇ ಪ್ರಯಾಣಿಕರನ್ನು ಅಲರ್ಟ್‌ ಆಡಬಹಹುದಾಗಿದೆ. ಆದರೆ ಸಾರಿಗೆ ಬಸ್‌ಗಳಲ್ಲಿ ಕೆಲವರು ತಲೆ ಹೊರಗಡೆ ಹಾಕುವುದು, ಕೈ ಹೊರಗೆ ಹಾಕುವುದು ಮಾಡುತ್ತಾರೆ. ಅಂತವರಿಗೆ ಈಗ ಮೈಕ್‌ನಲ್ಲಿ ಎಚ್ಚರಿಸಬಹುದಾಗಿದೆ.