Home latest Mysore: ಮೈಸೂರಿನಲ್ಲಿ ಘೋರ ದುರಂತ : ಈಜಲು ತೆರಳಿದ ಇಬ್ಬರು ಬಾಲಕರು ನೀರುಪಾಲು

Mysore: ಮೈಸೂರಿನಲ್ಲಿ ಘೋರ ದುರಂತ : ಈಜಲು ತೆರಳಿದ ಇಬ್ಬರು ಬಾಲಕರು ನೀರುಪಾಲು

Mysore

Hindu neighbor gifts plot of land

Hindu neighbour gifts land to Muslim journalist

Mysore : ತಲಕಾಡಿನ ಕಾವೇರಿ ನಿಸರ್ಗಧಾಮದಲ್ಲಿ ಕಾವೇರಿ ನದಿ ನೀರಿನಲ್ಲಿ ಮುಳುಗಿ ಇಬ್ಬರು ಬಾಲಕರು ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ.

ಬೆಂಗಳೂರಿನ ನಂದಿನಿ ಲೇಔಟ್ ನಿವಾಸಿ ರವಿಗೌಡರ ಪುತ್ರರಾದ ಲೋಹಿತ್(15), ಯತೀಶ್(13) ಮೃತ ಯುವಕರು ಎಂದು ಗುರುತಿಸಲಾಗಿದೆ. ಮೈಸೂರು (Mysore) ಜಿಲ್ಲೆಯ ಟಿ.ನರಸೀಪುರ ತಾಲೂಕಿನ ತಲಕಾಡಿಗೆ ಈಜಲುತೆರಳಿದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ಸ್ನೇಹಿತರ ಜೊತೆ ಬೆಂಗಳೂರಿನಿಂದ ತಲಕಾಡಿಗೆ ತೆರಳಿದಾಗ ನೀರಿನಲ್ಲಿ ಆಟವಾಡುತ್ತಿದ್ದಂತೆ ಈಜಲು ಬಾರದೆ ಇಬ್ಬರು ಬಾಲಕರು ನೀರುಪಾಲಾಗಿದ್ದಾರೆ. ನೀರು ಪಾಲಾಗುತ್ತಿದ್ದಂತೆ ಸ್ಥಳೀಯ ಅಂಬಿಗರು ಸಹಾಯಕ್ಕೆ ಬಂದಿದ್ದು, 6 ಜನರನ್ನು ರಕ್ಷಣೆ ಮಾಡಿದ್ದಾರೆ. ಇನ್ನೂಳಿದ ಯುವಕರು ಮೃತಪಟ್ಟಿದ್ದಾರೆ. ಮೃತ ಕಂಡ ಕುಟುಂಬಸ್ಥರಲ್ಲಿ ಅಕ್ರಂಧನ ಮುಗಿಲುಮುಟ್ಟಿದೆ. ತಲಕಾಡು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ:Uttar pradesh: ಚುನಾವಣೆಯಲ್ಲಿ ಸೋತ ಸೊಸೆ; ಥಳಿಸಿ, ಮನೆಯಿಂದ ಹೊರ ಹಾಕಿದ ಪಾಪಿಗಳು!