Home latest ಸಾರ್ವಜನಿಕರ ಎದುರೇ ಯುವಕನನ್ನು ಕೊಚ್ಚಿ ಕೊಂದ ದುಷ್ಕರ್ಮಿಗಳು !!!

ಸಾರ್ವಜನಿಕರ ಎದುರೇ ಯುವಕನನ್ನು ಕೊಚ್ಚಿ ಕೊಂದ ದುಷ್ಕರ್ಮಿಗಳು !!!

Hindu neighbor gifts plot of land

Hindu neighbour gifts land to Muslim journalist

ಸಾರ್ವಜನಿಕರ ಕಣ್ಣೆದುರೇ ವಿದ್ಯಾರ್ಥಿಯೋರ್ವನನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆಯೊಂದು ದಿಲ್ಲಿಯಲ್ಲಿ ನಡೆದಿದೆ. ದಿಲ್ಲಿಯ ಜನನಿಬಿಡ ರಸ್ತೆಯಲ್ಲಿ
ಸಾರ್ವಜನಿಕರ ಕಣ್ಣೆದುರೇ ಹೋಟೆಲ್ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಯನ್ನು ಕೊಚ್ಚಿ ಕೊಲ್ಲಲಾಗಿದೆ. ಸಿಸಿಟಿವಿಯಲ್ಲಿ ಈ ಭೀಕರ ಹತ್ಯೆಯ ದೃಶ್ಯ ಸೆರೆಯಾಗಿದೆ. ದಕ್ಷಿಣ ದಿಲ್ಲಿಯ ಮಾಳವೀಯ ನಗರದ ಮಾರುಕಟ್ಟೆಯಲ್ಲಿ ಈ ಘಟನೆ ನಡೆದಿದೆ.

ಮಯಾಂಕ್ ಪವಾರ್ ( 25 ವರ್ಷ) ಎಂಬಾತನನ್ನು
ಗುರುವಾರ ಸಂಜೆ ಐವರು ಕೊಚ್ಚಿ ಕೊಂದಿದ್ದಾರೆ. ಈತ ತನ್ನ ಸ್ನೇಹಿತನ ಜತೆ ಮಾರುಕಟ್ಟೆಯಲ್ಲಿ ಇದ್ದ ಸಂದರ್ಭದಲ್ಲಿ, ಆತನ ಕಡೆ ಚಾಕು ಹಿಡಿದು ನಾಲ್ಕೈದು ಮಂದಿ ದುಷ್ಕರ್ಮಿಗಳು ಆತನ ಕಡೆ ಓಡಿ ಬಂದಿದ್ದಾರೆ.

ಇದಕ್ಕೂ ಮೊದಲು ಮಯಾಂಕ್ ಒಂದು ಗುಂಪಿನ ಜತೆ ವಾಗ್ವಾದ ನಡೆಸಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆತ ಓಡಲು ಶುರು ಮಾಡಿದಾಗ ಆತನನ್ನು ಹಿಡಿದ ಗುಂಪು, ಆತನಿಗೆ ಚಾಕು ಹಾಕಿದ್ದಾರೆ‌. ಜೀವ ಉಳಿಸಿಕೊಳ್ಳಲು ಮಯಾಂಕ್ ಪ್ರಯತ್ನ ಮಾಡಿದರೂ ದುಷ್ಕರ್ಮಿಗಳು ಚಾಕುವಿನಿಂದ ಅನೇಕ ಬಾರಿ ಚುಚ್ಚಿದ್ದಾರೆ.

“ನಾವು ಆಗಸ್ಟ್ 11ರಂದು ಸಂಜೆ 7ರ ಸುಮಾರಿಗೆ ಮಾಳವೀಯ ನಗರದ ಬೇಗುಂಪುರದ ಕಿಲಾದಲ್ಲಿ ಇಬ್ಬರೂ ಕುಳಿತುಕೊಂಡಾಗ, ಇದ್ದಕ್ಕಿದ್ದಂತೆ ಬಂದ 4-5 ಅಪರಿಚಿತ ಜನರು, ಮಯಾಂಕ್ ಜತೆ ವಾಗ್ವಾದ ಆರಂಭಿಸಿದ್ದಾರೆ” ಎಂದು ಆತನ ಸ್ನೇಹಿತ ವಿಕಾಸ್ ಪನ್ವಾರ್ ವಿಚಾರಣೆ ವೇಳೆ ತಿಳಿಸಿದ್ದಾನೆ.

ಇಬ್ಬರೂ ಅಲ್ಲಿಂದ ಎದ್ದು ಓಡಲು ಪ್ರಯತ್ನಿಸಿದಾಗ ಆರೋಪಿಗಳು ಕಲ್ಲುಗಳನ್ನು ಕೂಡ ಎಸೆದಿದ್ದಾರೆ. ಆದರೆ ಮಯಾಂಕ್‌ನನ್ನು ಬೆನ್ನಟ್ಟಿ ಹಿಡಿದ ಆರೋಪಿಗಳು, ಹಲವು ಬಾರಿ ಇರಿದು ಕೊಂದಿದ್ದಾರೆ. ಮಯಾಂಕ್‌ಗೆ ಅನೇಕ ಬಾರಿ ಇರಿದ ಬಳಿಕ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಕೆಲವರ ಸಹಾಯ ಪಡೆದು ಮಯಾಂಕ್ ಸ್ನೇಹಿತ ವಿಕಾಸ್, ಆತನನ್ನು ಏಮ್ಸ್‌ಗೆ ಸಾಗಿಸಿದ್ದಾನೆ. ಅಲ್ಲಿ ಚಿಕಿತ್ಸೆ ವೇಳೆ ಮಯಾಂಕ್ ಮೃತಪಟ್ಟಿದ್ದಾನೆ. ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಸಿಸಿಟಿವಿ ದೃಶ್ಯಗಳಲ್ಲಿ ಕಾಣಿಸಿಕೊಂಡ ಆರೋಪಿಗಳ ಗುರುತು ಪತ್ತೆ ಮಾಡಿದ್ದಾರೆ. ಅವರ ಬಂಧನಕ್ಕೆ ಹುಡುಕಾಟ ತೀವ್ರವಾಗಿದೆ.