Home latest Madhyapradesh :ಅಣ್ಣನ ಜೊತೆ ಜಗಳವಾಡಿ ಮೊಬೈಲನ್ನೇ ನುಂಗಿದಳು ಈ ಪುಣ್ಯಾತ್ಗಿತ್ತಿ! ನಂತರ ಆದದ್ದೇನು?

Madhyapradesh :ಅಣ್ಣನ ಜೊತೆ ಜಗಳವಾಡಿ ಮೊಬೈಲನ್ನೇ ನುಂಗಿದಳು ಈ ಪುಣ್ಯಾತ್ಗಿತ್ತಿ! ನಂತರ ಆದದ್ದೇನು?

Madhyapradesh

Hindu neighbor gifts plot of land

Hindu neighbour gifts land to Muslim journalist

MP girl swallows mobile :ಅಣ್ಣ ತಂಗಿ ಅಂದಮೇಲೆ ತರಲೆ-ತುಂಟಾಟಗಳು, ಜಗಳ-ಗಲಾಟೆಗಳು ಆಗೋದು ಸರ್ವೇ ಸಾಮಾನ್ಯ. ಆದರೆ ಇದೆಲ್ಲವೂ ಕ್ಷಣಿಕವಾಗಿರುತ್ತವೆ. ಕಿತ್ತಾಡಿ ಹೊತ್ತಾಗುವುದರೊಳಗೆ ಎಲ್ಲವೂ ಸರಿಯಾಗಿ ಪ್ರೀತಿಯ ವಿನಿಮಯವೂ ಆಗಿ ಹೋಗುತ್ತದೆ. ಅಣ್ಣ-ತಂಗಿ ಅಂದರೇನೆ ಹಾಗೆ ಅಲ್ವಾ? ಅಂತೆಯೇ ಇಲ್ಲೊಂದೆಡೆ ಇದೇ ರೀತಿ ಅಣ್ಣ ತಂಗಿಯ ಜಗಳ ಶುರುವಾಗಿದೆ. ಆದರೆ ಅದು ಅಂತ್ಯವಾಗಿದ್ದು ಮಾತ್ರ ತಂಗಿಯು ಮೊಬೈಲ್ ನುಂಗುವ ಮೂಲಕ!

ಹೌದು, ಮಧ್ಯಪ್ರದೇಶದ ಮಧ್ಯಪ್ರದೇಶ (Madhyapradesh)ದ ಭಿಂಡ್ ಪ್ರದೇಶದ ಒಂದು ಮನೆಯಲ್ಲಿ ಅಣ್ಣ ತಂಗಿಯರಿಬ್ಬರಿಗೆ ಜಗಳ ಶುರುವಾಗಿದೆ. ಅಣ್ಣನ ಜೊತೆ ಜಗಳವಾಡುತ್ತಿದ್ದ ತಂಗಿ, 18ರ ಯುವತಿ ಮೊಬೈಲ್ ಫೋನ್ ನುಂಗಿ (MP girl swallows mobile) ಎಡವಟ್ಟು ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.

ಮೊಬೈಲ್ ನುಂಗಿದ ಕೂಡಲೇ ಆಕೆಗೆ ಹೊಟ್ಟೆನೋವು ಕಾಣಿಸಿಕೊಂಡಿದೆ. ಘಟನೆಯಿಂದ ಮನೆಯವರು ಆಘಾತಕ್ಕೊಳಗಾಗಿದ್ದು, ತಕ್ಷಣವೇ ಯುವತಿಯನ್ನ ಜಿಲ್ಲಾಸ್ಪತ್ರೆ ಕರೆದುಕೊಂಡು ಹೋಗಿದ್ದಾರೆ. ಆದರೆ ವಿಷಯದ ಗಂಭೀರತೆಯನ್ನು ಕಂಡು, ಯುವತಿಯನ್ನ ತಕ್ಷಣವೇ ಗ್ವಾಲಿಯರ್‌ನ (Gwalior) ಜಯಾರೋಗ್ಯ ಆಸ್ಪತ್ರೆಗೆ (Jayarogya Hospital) ಶಿಫಾರಸು ಮಾಡಲಾಗಿದೆ. ಅಲ್ಲಿ ಯುವತಿಗೆ ಶಸ್ತ್ರಚಿಕಿತ್ಸೆಯ (Surgery) ಮೂಲಕ ಆಕೆಯ ಹೊಟ್ಟೆಯಲ್ಲಿ ಸಿಲುಕಿದ್ದ ಮೊಬೈಲ್ ಅನ್ನು ಹೊರತೆಗೆದಿದ್ದಾರೆ. ಸಕಾಲದಲ್ಲಿ ಬಾಲಕಿಯ ಆಪರೇಷನ್ ಮಾಡದಿದ್ದರೆ ಆಕೆಯ ಜೀವಕ್ಕೆ ಅಪಾಯವಾಗುತ್ತಿತ್ತು ಎಂದು ವೈದ್ಯರು ಹೇಳಿದ್ದಾರೆ.

ಅಂದಹಾಗೆ ಶಸ್ತ್ರ ಚಿಕಿತ್ಸೆ ವಿಭಾಗದಲ್ಲಿ ವೈದ್ಯರ ತಂಡ ತಪಾಸಣೆ ನಡೆಸಿದಾಗ ಬಾಲಕಿಯ ಹೊಟ್ಟೆಯಲ್ಲಿ ಮೊಬೈಲ್ ಸಿಕ್ಕಿಹಾಕಿಕೊಂಡಿತ್ತು. ಮೊಬೈಲ್ ತೆಗೆಯಲು ಓಪನ್ ಸರ್ಜರಿ ಒಂದೇ ಮಾರ್ಗವಾಗಿತ್ತು. ಕೊನೆಗೆ ಓಪನ್ ಸರ್ಜರಿ ಮಾಡಿ ಮೊಬೈಲ್ ತೆಗೆಯಲು ವೈದ್ಯರು ನಿರ್ಧರಿಸಿದ್ದಾರೆ. ಸುಮಾರು ಅರ್ಧ ಡಜನ್ ವೈದ್ಯರ ತಂಡ ಶಸ್ತ್ರಚಿಕಿತ್ಸಾ ವಿಭಾಗದಲ್ಲಿ, ಸುಮಾರು ಒಂದೂವರೆ ಗಂಟೆಗಳ ಕಾಲ ಆಪರೇಷನ್ ಮಾಡಿ ಯುವತಿಯ ಹೊಟ್ಟೆಯಲ್ಲಿದ್ದ ಮೊಬೈಲ್ ಹೊರತೆಗೆದಿದ್ದಾರೆ.

ಶಸ್ತ್ರಚಿಕಿತ್ಸಕ ತಂಡವು ಸುಮಾರು ಒಂದೂವರೆ ಗಂಟೆಗಳ ಕಾಲ ದಣಿವರಿಯಿಲ್ಲದೆ ಬಾಲಕಿಯ ಹೊಟ್ಟೆಯಿಂದ ಫೋನ್ ಅನ್ನು ಸುರಕ್ಷಿತವಾಗಿ ತೆಗೆದುಹಾಕಿದೆ. ಹಲವು ಸವಾಲುಗಳ ಹೊರತಾಗಿಯೂ, ಆಪರೇಷನ್​ ಯಶಸ್ವಿಯಾಗಿದ್ದು, ಫೋನ್ ಅನ್ನು ಹೊರ ತೆಗೆಯಲಾಗಿದೆ ಎಂದು ಡಾ ಕುಶ್ವಾಹಾ ಹೇಳಿದ್ದಾರೆ. ಯುವತಿಗೆ ಹತ್ತು ಹೊಲಿಗೆಗಳನ್ನು ಹಾಕಲಾಗಿದ್ದು, ಆಕೆ ಸ್ಥಿತಿ ಸ್ಥಿರವಾಗಿದೆ. ಆದರೆ ಗಲಾಟೆ ಯಾವಕಾರಣಕ್ಕೆ ನಡೆಯಿತು ಎಂಬುದು ಇನ್ನೂ ತಿಳಿದುಬಂದಿಲ್ಲ.