Home Entertainment ಮದುವೆ ಮಂಟಪದಲ್ಲೇ ನಿದ್ದೆ ತೂಕಡಿಸಿದ ವಧು | ಇಲ್ಲಿ ವಧು ನಿದ್ರಿಸುತ್ತಿದ್ದಾಳೆ, ಇನ್ನೂ ಮದುವೆ ಮುಗಿದಿಲ್ಲ...

ಮದುವೆ ಮಂಟಪದಲ್ಲೇ ನಿದ್ದೆ ತೂಕಡಿಸಿದ ವಧು | ಇಲ್ಲಿ ವಧು ನಿದ್ರಿಸುತ್ತಿದ್ದಾಳೆ, ಇನ್ನೂ ಮದುವೆ ಮುಗಿದಿಲ್ಲ ಎಂಬ ವೀಡಿಯೋ ಪೋಸ್ಟ್ ವೈರಲ್

Hindu neighbor gifts plot of land

Hindu neighbour gifts land to Muslim journalist

ಮದುವೆ ಎಂದರೇನು ಹಾಗೆ ಶಾಸ್ತ್ರಗಳು ತುಂಬಾ ಇರುತ್ತದೆ. ಅದರಲ್ಲೂ ಭಾರತೀಯ ಮದುವೆಗಳಲ್ಲಿ ಶಾಸ್ತ್ರಗಳದ್ದೇ ಕಾರುಬಾರು. ಹಾಗೆಯೇ ಇಲ್ಲೊಂದು ಮದುವೆಯಲ್ಲಿ ಬೆಳಗ್ಗಿನವರೆಗೂ ಮದುವೆ ಸಂಪ್ರದಾಯ ನಡೆದಿರುವ ಹಿನ್ನೆಲೆಯಲ್ಲಿ ಮಂಟಪದಲ್ಲೇ ವಧು ನಿದ್ದೆಗೆ ಜಾರಿದ ವೀಡಿಯೋವೊಂದು ವೈರಲ್ ಆಗಿದೆ.

Battered Suitcase ಹೆಸರಿನ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ವಧು ನಿದ್ರಿಸುತ್ತಿರುವ ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಇಲ್ಲಿ ನೋಡಿ ವಧು ನಿದ್ರಿಸುತ್ತಿದ್ದಾಳೆ. ಈಗಾಗಲೇ ಸಮಯ ಬೆಳಗ್ಗೆ 6.30 ಆಗಿದೆ ಆದರೂ ಮದುವೆಯ ಸಂಪ್ರದಾಯ ಇನ್ನು ಮುಗಿದಿಲ್ಲ ಎಂದು ಬರೆದು ಈ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ. ತನ್ನ ಮದುವೆಯ ಮಂಟಪದಲ್ಲೇ ವಧು ನಿದ್ದೆಯಿಂದ ತೂಕಾಡಿಸುತ್ತಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವೀಕ್ಷಕರು ತಮಾಷೆಯಾಗಿ ಕಾಮೆಂಟ್ ಮಾಡುತ್ತಿದ್ದಾರೆ.

ಈ ವೀಡಿಯೋದಲ್ಲಿ ವಧು ಸುಂದರವಾದ ಕೆಂಪು ಹಾಗೂ ಕೇಸರಿ ಮಿಶ್ರಿತ ಬಣ್ಣದ ಲೆಹೆಂಗಾ ಧರಿಸಿ ಸೋಫಾದಲ್ಲಿ ಕುಳಿತಿದ್ದಾರೆ. ಆಕೆಯ ಪಕ್ಕದಲ್ಲೇ ವರ ಕೂಡ ಇದ್ದಾನೆ. ಈ ವೇಳೆ ವಧು ಕುಳಿತಲ್ಲಿಯೇ ನಿದ್ದೆಯನ್ನು ತಡೆದುಕೊಳ್ಳಲಾಗದೇ ತೂಕಾಡಿಸುತ್ತಿದ್ದಾಳೆ. ನಿದ್ದೆಗೆ ಜಾರಿದ ಈ ವೇಳೆ ಆಕೆಯ ಸ್ನೇಹಿತರು ಈ ದೃಶ್ಯವನ್ನು ಚಿತ್ರೀಕರಿಸಿದ್ದಾರೆ. ಇದೀಗ ಈ ವೀಡಿಯೋ ವೈರಲ್ ಆಗಿದೆ.