Home latest ಮಂಗಳೂರು: ಅಪಾರ್ಟ್ ಮೆಂಟ್ ಒಂದರಲ್ಲಿ ವೇಶ್ಯಾವಾಟಿಕೆ ದಂಧೆ!! ಅಪ್ರಾಪ್ತ ಬಾಲಕಿಯರು-ಕಾಲೇಜು ವಿದ್ಯಾರ್ಥಿನಿಯರೇ ಟಾರ್ಗೆಟ್

ಮಂಗಳೂರು: ಅಪಾರ್ಟ್ ಮೆಂಟ್ ಒಂದರಲ್ಲಿ ವೇಶ್ಯಾವಾಟಿಕೆ ದಂಧೆ!! ಅಪ್ರಾಪ್ತ ಬಾಲಕಿಯರು-ಕಾಲೇಜು ವಿದ್ಯಾರ್ಥಿನಿಯರೇ ಟಾರ್ಗೆಟ್

Hindu neighbor gifts plot of land

Hindu neighbour gifts land to Muslim journalist

ಮಂಗಳೂರು: ಅಪ್ರಾಪ್ತ ಬಾಲಕಿಯರನ್ನು, ಕಾಲೇಜು ವಿದ್ಯಾರ್ಥಿನಿಯರನ್ನು ವಿವಿಧ ಆಮಿಷವೊಡ್ಡಿ ವೇಶ್ಯಾವಾಟಿಕೆ ದಂಧೆಗೆ ತಳ್ಳುತ್ತಿದ್ದ ಖತರ್ನಾಕ್ ದಂಪತಿಗಳ ಸಹಿತ ಐವರನ್ನು ಬಂಧಿಸಲಾಗಿದೆ.

ನಗರದ ನಂದಿಗುಡ್ಡೆ ಬಳಿಯಿರುವ ಅಪಾರ್ಟ್ ಮೆಂಟ್ ಒಂದರಲ್ಲಿ ಪ್ರಕರಣದ ರುವಾರಿ, ಅಪಾರ್ಟ್ ಮೆಂಟ್ ಮಾಲಕಿ ಮಹಿಳೆ ಶಮೀನ ತನ್ನ ಗಂಡ ಸಿರಿಕ್ ಹಾಗೂ ಇತರರ ಸಹಾಯದಿಂದ ಅಪ್ರಾಪ್ತ ಬಾಲಕಿಯರು, ಕಾಲೇಜು ವಿದ್ಯಾರ್ಥಿನಿಯರನ್ನು ಮಾಂಸ ದಂಧೆಗೆ ಬಳಸುತ್ತಿದ್ದ ಖಚಿತ ಮಾಹಿತಿ ಹಾಗೂ ಸಂತ್ರಸ್ತ ಬಾಲಕಿಯೋರ್ವಳ ದೂರಿನ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದ್ದು, ದಾಳಿಯ ವೇಳೆ ಮಾಲಕಿ ಶಮೀನ,ಆಕೆಯ ಗಂಡ ಸಿರಿಕ್ ಹಾಗೂ ಐವರನ್ನು ಬಂಧಿಸಲಾಗಿದೆ.

ಘಟನೆ ವಿವರ: ನಂದಿಗುಡ್ಡೆಯಲ್ಲಿರುವ ಅಪಾರ್ಟ್ ಮೆಂಟ್ ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸಲಾಗುತ್ತಿದ್ದೂ, ಅಪ್ರಾಪ್ತ ಬಾಲಕಿಯರು, ಕಾಲೇಜು ವಿದ್ಯಾರ್ಥಿನಿಯರನ್ನು ಬೆದರಿಸಿ, ವಿವಿಧ ಆಮಿಷ ಒಡ್ಡಿ ಬ್ಲಾಕ್ ಮೇಲ್ ಮಾಡಿ ದಂಧೆಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಸಂತ್ರಸ್ತ ಬಾಲಕಿಯೊಬ್ಬಳು ಮಹಿಳಾ ಠಾಣೆಗೆ ದೂರನ್ನು ಸಲ್ಲಿಸಿದ್ದಳು.

ದೂರನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಅಪಾರ್ಟ್ ಮೆಂಟ್ ಗೆ ದಾಳಿ ನಡೆಸಿ ದಂಧೆಯಲ್ಲಿ ಭಾಗಿಯಾಗುತ್ತಿರುವ ಮಾಲಕಿ ಶಮೀನ ಹಾಗೂ ಆಕೆಯ ಮಾನಕೆಟ್ಟ ಕೆಲಸಕ್ಕೆ ಬೆನ್ನೆಲುಬಾಗಿ ನಿಂತ ಆಕೆಯ ಪತಿ ಸಿರಿಕ್,ಆಯಿಶಮ್ಮ ಸಹಿತ ಇತರ ಐವರನ್ನು ಬಂಧಿಸಿದ್ದಾರೆ.