Home Entertainment ಮದುವೆ ಆಗಲು ಹುಡುಗಿ ಬೇಕೆಂದು ಜನ ಸಂಚಾರ ದಟ್ಟನೆ ಇರೋ ಕಡೆ ಭಿತ್ತಿ ಚಿತ್ರ ಹಾಕಿದ...

ಮದುವೆ ಆಗಲು ಹುಡುಗಿ ಬೇಕೆಂದು ಜನ ಸಂಚಾರ ದಟ್ಟನೆ ಇರೋ ಕಡೆ ಭಿತ್ತಿ ಚಿತ್ರ ಹಾಕಿದ ಹುಡುಗ |’ಸೇವ್ ಮೀ ಫ್ರಮ್ ಅರೇಂಜ್ ಮ್ಯಾರೇಜ್ ‘ ಎಂದು ಜಾಹಿರಾತು

Hindu neighbor gifts plot of land

Hindu neighbour gifts land to Muslim journalist

ಮನೆಯಲ್ಲಿ ಒಂದು ಮದುವೆಮಾಡಲು ಕೆಲವೊಮ್ಮೆ ಇಡೀ ಕುಟುಂಬವೇ ತುಂಬಾ ಕಷ್ಟ ಪಡುತ್ತದೆ. ಒಂದಾ ಹೆಣ್ಣು ಸಿಗೋದಿಲ್ಲ, ಇಲ್ಲವೇ ಸೂಕ್ತ ಗಂಡು ಸಿಗುವುದಿಲ್ಲ. ಅದಲ್ಲದೆ ಮದುವೆಯಾಗಲು ವಧು, ವರರು ಕೂಡ ಸಾಕಷ್ಟು ಕಷ್ಟ ಪಟ್ಟಿರುವ ಎಷ್ಟೋ ಉದಾಹರಣೆಗಳು ಇವೆ. ಅದರೆ ಇಲ್ಲೊಬ್ಬ ಯುವಕ, ವಧು ಹುಡುಕಾಟಕ್ಕೆ ಮಾಸ್ಟರ್ ಪ್ಲ್ಯಾನ್ ಮಾಡಿ ಅಚ್ಚರಿ ಮೂಡಿಸಿದ್ದಾನೆ.

ಮುಹಮ್ಮದ್ ಮಲಿಕ್ ಎಂಬಾತ ಲಕ್ಷಾಂತರ ರೂಪಾಯಿ ಹಣವನ್ನು ಖರ್ಚು ಮಾಡಿ ಜಾಹೀರಾತು ನೀಡಿದ್ದಾನೆ. ಅಷ್ಟೇ ಅಲ್ಲದೇ ಆ ಜಾಹೀರಾತಿನಲ್ಲಿ ಅವನೇ ಕಾಣಿಸಿಕೊಂಡಿದ್ದು, ಅರೆಂಜ್ಡ್ ಮ್ಯಾರೇಜ್ ನಿಂದ ನನ್ನನ್ನು ಕಾಪಾಡಿ ಎಂದು ಬರೆಯಲಾಗಿದೆ. 29ರ ಹರೆಯದ ಬರ್ಮಿಂಗ್‍ ಹ್ಯಾಮ್ ಮೂಲದ ಈ ಯುವಕ ಸದ್ಯ ಮದುವೆಯಾಗಲು ತನ್ನ ಸಂಗಾತಿಯ ಹುಡುಕಾಟದಲ್ಲಿ ಸಾಹಸ ಮಾಡುತ್ತಿದ್ದಾನೆ.

ಜನಸಂಚಾರ ದಟ್ಟಣೆ ಇರೋ ಪ್ರದೇಶಗಳಲ್ಲಿ ಭಿತ್ತಿ ಚಿತ್ರ ಮೂಲಕ ನನಗೆ ಮದುವೆಯಾಗಲು ಕನ್ಯೆ ಬೇಕೆಂದು ವಿನಂತಿಸುತ್ತಿದ್ದಾನೆ. ಜೊತೆಗೆ ಈ ಕುರಿತು ಅಗತ್ಯ ಮಾಹಿತಿ ಬೇಕಿದ್ದರೆ ನನ್ನ ಸಂಪರ್ಕಿಸಿ ಎಂದು ತನ್ನ ವೆಬ್‍ಸೈಟ್‍ನ್ನು ಕೂಡಾ ನಮೂದಿಸಿದ್ದಾನೆ.