Home latest ಮೇಕ್ ಇನ್ ಇಂಡಿಯಾದ ಮೂರು ಗೆರಿನ ರಾಂಪರ್ ಇಲೆಕ್ಟ್ರಿಕ್ ಸೈಕಲ್|ಇದರ ವಿಶಿಷ್ಟತೆ ಕುರಿತು ಇಲ್ಲಿದೆ ಮಾಹಿತಿ

ಮೇಕ್ ಇನ್ ಇಂಡಿಯಾದ ಮೂರು ಗೆರಿನ ರಾಂಪರ್ ಇಲೆಕ್ಟ್ರಿಕ್ ಸೈಕಲ್|ಇದರ ವಿಶಿಷ್ಟತೆ ಕುರಿತು ಇಲ್ಲಿದೆ ಮಾಹಿತಿ

Hindu neighbor gifts plot of land

Hindu neighbour gifts land to Muslim journalist

ನಾವೆಲ್ಲ ಸಾಮಾನ್ಯವಾಗಿ ಸೈಕಲ್ ಅನ್ನು ನೋಡಿರುತ್ತೇವೆ. ಆದ್ರೆ ಈ ಸೈಕಲನ್ನು ನೋಡಿದ್ದೀರಾ?ಒಮ್ಮೆ ಸೈಕಲ್ ನೋಡಿರುತ್ತೇವೆ ಹೇಳಿ ಇನ್ನೊಮ್ಮೆ ನೋಡಿದ್ದೀರಾ ಹೇಳುತ್ತಿದ್ದೇವೆ ಎಂದು ಕನ್ಫ್ಯೂಸ್ ಆಗ್ಬೇಡಿ.ವಿಷಯ ಬೇರೇನೇ ಇದೆ. ನೋಡಲು ಇದು ಸೈಕಲ್ ಹಾಗೆ ಕಂಡರೂ ಇದು ಮಾಮೂಲು ಸೈಕಲ್ ಅಲ್ಲ.ಮತ್ತೇನು?? ಮುಂದೆ ನೋಡಿ.

ನೆಕ್ಸ್ ಜು ಮೊಬಿಲಿಟಿ ಕಂಪನಿ ಲಾಂಚ್ ಮಾಡಿರುವ ಮೂರು ಗೇರಿನ ರಾಂಪಸ್+ ಇಲೆಕ್ಟ್ರಿಕ್ ಸೈಕಲ್. ಇದು 36 ವಿ. 250 ವ್ಯಾಟ್ ಹೆಚ್ ಯು ಬಿ ಬಿ ಎಲ್ ಡಿ ಸಿ ಮೋಟಾರ್ ಸಹಾಯದಿಂದ ಚಲಿಸುತ್ತದೆ. ಇದರ ಇನ್-ಫ್ರೇಮ್ 36 ವಿ, 5.2ಎಎಚ್ ಲಿಥಿಯಂ ಬ್ಯಾಟರಿ 750 ಸೈಕಲ್ ಬ್ಯಾಟರಿ ಲೈಫ್ ನೀಡುತ್ತದೆ ಮತ್ತು ಸುಮಾರು ಮೂರು ಗಂಟೆಗಳ ಸಮಯದಲ್ಲಿ ಬ್ಯಾಟರಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ. ವೇಗಕ್ಕೆ ಸಂಬಂಧಿಸಿದಂತೆ ಹೇಳವುದಾದರೆ ಸೈಕಲ್ ಎರಡು ಮೋಡ್ಗಳಲ್ಲಿ ಓಡುತ್ತದೆ-ಪ್ರತಿ ಗಂಟೆಗೆ 25 ಕಿಮೀ ವೇಗದ ಥ್ರಾಟ್ಲ್ ಮೋಡ್ 35 ಕಿಮೀ ಪೆಡಿಲೆಕ್ ಮೋಡ್.

ಅಂದ ಹಾಗೆ ನಿಮಗೆ ಇದರ ಬೆಲೆ ರೂ 32,403.ರಾಂಪಸ್ ಎಲೆಕ್ಟ್ರಿಕ್ ಸೈಕಲ್ ಗೆ ಫ್ರಂಟ್ ಸಸ್ಪೆನ್ಷನ್ ನೊಂದಿಗೆ 26 ಇಂಚಿನ ಟೈರ್ಗಳಿದ್ದು ಡುಯಲ್ ಡಿಸ್ಕ್ ಬ್ರೇಕ್ಗಳಿವೆ. ಸೈಕಲ್ ಗೆ ಅಳವಡಿಸಿರುವ ಮೋಟಾರು ಮತ್ತು ಬ್ಯಾಟರಿ ಎರಡೂ ಒಂದೂವರೆ ವರ್ಷ ಅವಧಿಯ ವಾರಂಟಿಯೊಂದಿಗೆ ಬರುತ್ತವೆ.ಅಂದಹಾಗೆ, ಇದು ಆಪ್ಪಟ ಮೇಕ್ ಇನ್ ಇಂಡಿಯಾ ಉತ್ತಾದನೆ. ಇದರ ವಿನ್ಯಾಸವೂ ಭಾರತದಲ್ಲಿ ರೂಪುಗೊಂಡಿದೆ. ನೆಕ್ಸ್ ಜು ಮೊಬಿಲಿಟಿ ಕಂಪನಿಯಯ ಡೀಲರ್ ಗಳಲ್ಲಿ, ಕಂಪನಿಯ ವೆಬ್ಸೈಟ್ನಲ್ಲಿ ರಾಂಪಸ್ ನಿಮಗೆ ಸಿಗುತ್ತದೆ. ನಮಗೆ ಲಭ್ಯವಿರುವ ಮಾಹಿತಿ ಪ್ರಕಾರ ಅಮೆಜಾನ್ ಮತ್ತು ಪೇಟಿಎಮ್ ಮಾಲ್ ಗಳಲ್ಲಿ ಇದು ದೊರೆಯಲಿದೆ.