Home latest Ballari Love Case: ಪ್ರೀತಿಗೆ ಪೋಷಕರಿಂದ ನಿರಾಕರಣೆ: ಸಿನಿಮೀಯ ಮಾದರಿಯಲ್ಲಿ ಕಾರಿನಲ್ಲೇ ಹಾರ ಬದಲಾಯಿಸಿದ ಪ್ರೇಮಿಗಳು:...

Ballari Love Case: ಪ್ರೀತಿಗೆ ಪೋಷಕರಿಂದ ನಿರಾಕರಣೆ: ಸಿನಿಮೀಯ ಮಾದರಿಯಲ್ಲಿ ಕಾರಿನಲ್ಲೇ ಹಾರ ಬದಲಾಯಿಸಿದ ಪ್ರೇಮಿಗಳು: ಸಾಂತ್ವನ ಕೇಂದ್ರದಲ್ಲಿ ಹೈಡ್ರಾಮಾ!!

Ballari Love Case

Hindu neighbor gifts plot of land

Hindu neighbour gifts land to Muslim journalist

Ballari Love Case: ಬಳ್ಳಾರಿಯಲ್ಲಿ ಸಿನಿಮೀಯ ಮಾದರಿಯಲ್ಲಿ ಪ್ರೇಮಿಗಳು ಕಾರಿನಲ್ಲಿ ಪರಸ್ಪರ ಹಾರ ಬದಲಾಯಿಸಿಕೊಳ್ಳುವ ಮೂಲಕ ಮದುವೆಯಾಗಿರುವ (Marraige)ಘಟನೆ ವರದಿಯಾಗಿದೆ.

ಕೊಪ್ಪಳ (Koppal) ಮೂಲದ ಯುವತಿ ಅಮೃತಾ ಪರಸ್ಪರ ಹಾಗೂ ಸಿರುಗುಪ್ಪ (Siraguppa) ತಾಲೂಕಿನ ತೆಕ್ಕಲಕೋಟೆಯ ಶಿವಪ್ರಸಾದ್ ಇಬ್ಬರು ಪ್ರೀತಿಯಲ್ಲಿ ಬಿದ್ದಿದ್ದರಂತೆ. ಆದರೆ ಯುವಕ ಕೆಳಜಾತಿಗೆ ಸೇರಿದ್ದರಿಂದ ಪೋಷಕರು ಮಗಳ ಪ್ರೇಮ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇದರಿಂದ ಸಿರುಗುಪ್ಪ ನಗರದಲ್ಲಿ ಕಾರಿನಲ್ಲಿ ಹಾರ ಬದಲಾಯಿಸಿಕೊಳ್ಳುವ ಮೂಲಕ ಪ್ರೇಮಿಗಳು (Lovers) ಮಂಗಳವಾರ (ಜ.03) ಸಂಜೆ ಓಡಿ ಹೋಗಿ ಮದುವೆಯಾಗಿರುವ ಘಟನೆ ನಡೆದಿದೆ. ಇದಾದ ಬಳಿಕ ನವ ಜೋಡಿಗಳು ಬಳ್ಳಾರಿ ಶಾಂತಿಧಾಮ ಸಾಂತ್ವನ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.

ಇದನ್ನು ಓದಿ: Animal OTT Release Date: ಅನಿಮಲ್ OTT ರಿಲೀಸ್ ಡೇಟ್ ಫಿಕ್ಸ್: ಯಾವಾಗ ಸ್ಟ್ರೀಮಿಂಗ್ ಆಗಲಿದೆ ಗೊತ್ತಾ??

ಈ ವಿಚಾರವನ್ನು ತಿಳಿದ ಅಮೃತಾ ಪೋಷಕರು ಶಾಂತಿಧಾಮ ಸಾಂತ್ವನ ಕೇಂದ್ರಕ್ಕೆ ಬಂದು ಮಗಳ ಮನವೊಲಿಸಿ ಮನೆಗೆ ಕರೆದೊಯ್ಯಲು ಮುಂದಾಗಿದ್ದು, ಪೋಷಕರ ಜೊತೆಗೆ ಹೊರಡಲು ಸನ್ನದ್ದಳಾಗಿ ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಯುವಕನ ಪೋಷಕರು ಸಾಂತ್ವನ ಕೇಂದ್ರಕ್ಕೆ ಎಂಟ್ರಿ ಕೊಟ್ಟಿದ್ದು, ಈ ಸಂದರ್ಭ ಯುವಕನನ್ನು ಬಿಟ್ಟು ಬರಲಾರೆ ಎಂದು ಯುವತಿ ಯು ಟರ್ನ್ ಹೊಡೆದು ಬಿಟ್ಟಿದ್ದಾಳೆ. ಒಟ್ಟಿನಲ್ಲಿ ಯುವತಿ ಅಮೃತಾಳ ದ್ವಂದ್ವ ಹೇಳಿಕೆಯಿಂದ ಸಾಂತ್ವನ ಕೇಂದ್ರದ ಬಳಿ ಹೈಡ್ರಾಮಾ ಸೃಷ್ಟಿಯಾಗಿದೆ. ಅಮೃತಾಳನ್ನು ಬಲವಂತವಾಗಿ ಕರೆದೊಯ್ಯಲು ಆಕೆಯ ಪೋಷಕರು ಮುಂದಾಗಿದ್ದು, ಶಿವಪ್ರಸಾದ್ ಮತ್ತು ಅಮೃತಾ ಪೋಷಕರ ನಡುವೆ ವಾಗ್ವಾದ ನಡೆದಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಪೊಲೀಸರ ಮುಂದೆ ಶಿವಪ್ರಸಾದ್ ಹಾಗೂ ಅಮೃತಾ ಇಬ್ಬರು ಜೊತೆಯಾಗಿ ಜೀವಿಸುವುದಾಗಿ ಮನವಿ ಮಾಡಿದ್ದು, ಕೊನೆಗೆ ಪ್ರಕರಣ ಸುಖಾಂತ್ಯ ಕಂಡಿದೆ.