Home latest Liquor sale ban: ಮದ್ಯಪ್ರಿಯರಿಗೆ ಶಾಕಿಂಗ್‌ ನ್ಯೂಸ್‌; ಇಂದಿನಿಂದ ಮೂರು ದಿನ ಮದ್ಯ ಮಾರಾಟಕ್ಕೆ ನಿಷೇಧ!!!

Liquor sale ban: ಮದ್ಯಪ್ರಿಯರಿಗೆ ಶಾಕಿಂಗ್‌ ನ್ಯೂಸ್‌; ಇಂದಿನಿಂದ ಮೂರು ದಿನ ಮದ್ಯ ಮಾರಾಟಕ್ಕೆ ನಿಷೇಧ!!!

Liquor sale ban
Image source: News 18 Kannada

Hindu neighbor gifts plot of land

Hindu neighbour gifts land to Muslim journalist

Liquor sale ban: ಇಂದು ಚುನಾವಣಾ ಪ್ರಚಾರಕ್ಕೆ ಸಂಜೆಯಿಂದ ತೆರೆ ಬೀಳಲಿದೆ. ಅಂದರೆ ಇಂದು ಸಂಜೆ (ಮೇ.08) ಆರು ಗಂಟೆಯಿಂದ ಚುನವಣೆಯ ಅಬ್ಬರದ ಪ್ರಚಾರಕ್ಕೆ ತೆರೆ ಬೀಳಲಿದೆ. ಇದರ ಜೊತೆಗೆ ಎಣ್ಣೆ ಪ್ರಿಯರಿಗೆ ಒಂದು ಶಾಕಿಂಗ್‌ ನ್ಯೂಸ್‌ ಇದೆ. ಅದ್ಯಾವುದೆಂದರೆ ಇಂದು ಸಂಜೆ ಆರು ಗಂಟೆಯಿಂದ ಇನ್ನು ಮೂರು ದಿನ ರಾಜ್ಯದಲ್ಲಿ ಮದ್ಯ ಸಿಗುವುದಿಲ್ಲ. ಇಂದು ಮೇ.08 ಸಂಜೆ 6ಗಂಟೆಯಿಂದ ಮೇ 11ರ ಬೆಳಗ್ಗೆ 6ಗಂಟೆಯವರೆಗೂ ಮದ್ಯ ಮಾರಾಟಕ್ಕೆ ನಿಷೇಧ (Liquor sale ban) ಹೇರಲಾಗಿದೆ. ಮೇ.8,9,10 ರಂದು ಈ ಮೂರು ದಿನವನ್ನು ಡ್ರೈ ಡೇ ಆಚರಿಸುವಂತೆ ಮದ್ಯ ಮಾರಾಟದ ಅಂಗಡಿ ಮಾಲೀಕರಿಗೆ ಚುನಾವಣಾ ಆಯೋಗ ಸೂಚನೆ ನೀಡಿದೆ.

ಇಷ್ಟು ಮಾತ್ರವಲ್ಲದೇ ಮತ ಎಣಿಕೆ ದಿನದಂದು ಅಂದರೆ ಮೇ.13ರ ಬೆಳಗ್ಗೆ 6ಗಂಟೆಯಿಂದ ಮೇ.14ರ ಬೆಳಗ್ಗೆ 6ಗಂಟೆವರೆಗೂ ಮದ್ಯ ನಿರ್ಬಂಧಿಸಲಾಗಿದೆ.

ಹಾಗಾಗಿ ಮದ್ಯಪ್ರಿಯರು ಇಂದು ಮದ್ಯ ಖರೀದಿಯಲ್ಲಿ ತೊಡಗಿಕೊಳ್ಳಬಹುದು. ಹಾಗಾಗಿ ಮದ್ಯದಂಗಡಿಯಲ್ಲಿ ಇವತ್ತು ಮದ್ಯ ವ್ಯಾಪಾರ ಜೋರಾಗಿ, ಬಿರುಸಾಗಿ ನಡೆಯಲಿದೆ. ಅಷ್ಟು ಮಾತ್ರವಲ್ಲ ಬೆಲೆ ಕೂಡಾ ಹೆಚ್ಚಳವಾಗಿದ್ದು, ಇವೆಲ್ಲವದರ ನಡುವೆಯೂ ಎಣ್ಣೆ ಪ್ರಿಯರು ತಮ್ಮ ಮದ್ಯ ಖರೀದಿಯಲ್ಲಿ ಕಡಿಮೆ ಮಾಡಲ್ಲ ಎಂದು ಹೇಳಬಹುದು. ಏಕೆಂದರೆ ಮತ್ತೆ ಇವತ್ತು ಸೇರಿ ಮೂರು ಮದ್ಯ ಯಾರ ಕೈ ಗೂ ಸಿಗಲ್ಲ.

ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತನ ಮೇಲೆ ಕಾಂಗ್ರೆಸ್‌ ಮುಖಂಡರ ಹಲ್ಲೆ ಆರೋಪ! ತೀವ್ರ ಗಾಯಗೊಂಡ ವ್ಯಕ್ತಿ ಆಸ್ಪತ್ರೆಗೆ ದಾಖಲು