Home latest Weather Report: ಕರಾವಳಿಗೆ ಆರೆಂಜ್‌, ಮಲೆನಾಡಿಗೆ ಯೆಲ್ಲೋ ಅಲರ್ಟ್‌- ಮತ್ತಷ್ಟು ಅಬ್ಬರಿಸಿದ್ದಾನೆ ವರುಣ !

Weather Report: ಕರಾವಳಿಗೆ ಆರೆಂಜ್‌, ಮಲೆನಾಡಿಗೆ ಯೆಲ್ಲೋ ಅಲರ್ಟ್‌- ಮತ್ತಷ್ಟು ಅಬ್ಬರಿಸಿದ್ದಾನೆ ವರುಣ !

Hindu neighbor gifts plot of land

Hindu neighbour gifts land to Muslim journalist

Rain Alert: ಈಗಾಗಲೇ ಕರ್ನಾಟಕ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮುಂಗಾರು (ನೈಋತ್ಯ ಮುಂಗಾರು) ಚಾಲಿತವಾಗಿದ್ದು, ವಾರಂತ್ಯದಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ.

ಇಂದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಿಗೆ ಐಎಂಡಿ ಆರೆಂಜ್ ಎಚ್ಚರಿಕೆ ನೀಡಿದೆ. ಬೆಳಗಾವಿ, ಧಾರವಾಡ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಎಚ್ಚರಿಕೆ (Rain Alert) ನೀಡಲಾಗಿದೆ. ಒಳನಾಡಿನಲ್ಲಿ ಬಿರುಗಾಳಿ ವೇಗವು ಗಂಟೆಗೆ 40-55ಕಿ.ಮೀ ಇರುವ ಸಾಧ್ಯತೆಯಿದೆ. ಕರ್ನಾಟಕ ಕರಾವಳಿಯಲ್ಲಿ 65 ಕಿ.ಮೀವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.

ಇನ್ನು ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನಲ್ಲಿ ಸಾಧಾರಣ ಮಳೆಯಾಗಲಿದೆ. ಮಲೆನಾಡಿನ ಭಾಗವಾದ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ.

ಇನ್ನು ದಕ್ಷಿಣ ಒಳನಾಡಿನ ಭಾಗವಾದ ದಾವಣಗೆರೆಯಲ್ಲಿ ಭರ್ಜರಿ ಮಳೆಯಾಗುವ ಸಾಧ್ಯತೆ ಇದ್ದು, ಉಳಿದ ಜಿಲ್ಲೆಗಳಲ್ಲಿ ನಿರಂತರ ಮಳೆಯಾಗಲಿದೆ. ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿಯಲ್ಲಿ ಗುಡುಗು, ಮಿಂಚು ಸಹಿತ ಅಧಿಕ ಮಳೆಯಾಗುವ ಸಾಧ್ಯತೆ ಇದೆ. ಉಳಿದಂತೆ ಧಾರವಾಡ ಮತ್ತು ಹಾವೇರಿಯಲ್ಲಿ ಸಾಧಾರಣ ಮಳೆ ಆಗಲಿದ್ದು, ಉಳಿದ ಕಡೆ ತುಂತುರು ಮಳೆಯಾಗಲಿದೆ. ಒಟ್ಟಾರೆ ಗಾಳಿ ಸಹಿತ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ಇನ್ನು ಉಷ್ಣಾಂಶ ಪ್ರಕಾರ ಗರಿಷ್ಠ 27 ಮತ್ತು ಕನಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಪ್ರಮುಖ ನಗರಗಳಲ್ಲಿ ಇಂದಿನ ತಾಪಮಾನ ಹೀಗಿದೆ.
ನಗರದ ಹೆಸರು- ಗರಿಷ್ಠ ಉಷ್ಣಾಂಶ- ಕನಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್) ಕಲಬುರಗಿ: 34 ಡಿ.ಸೆ – 24 ಡಿ.ಸೆ ಗದಗ: 31 ಡಿ.ಸೆ – 23 ಡಿ.ಸೆ
ಚಿತ್ರದುರ್ಗ: 30 ಡಿ.ಸೆ – 21 ಡಿ.ಸೆ ಬೆಳಗಾವಿ: 27 ಡಿ. ಸೆ – 21 ಡಿ.ಸೆ ಕಾರವಾರ: 30 ಡಿ.ಸೆ – 24 ಡಿ.ಸೆ ಮಂಗಳೂರು: 28 ಡಿ.ಸೆ – 25 ಡಿ.ಸೆ ಹೊನ್ನಾವರ: 29 ಡಿ.ಸೆ- 23 ಡಿ.ಸೆ ಬೆಂಗಳೂರು ನಗರ: 28 ಡಿ.ಸೆ – 20 ಡಿ.ಸೆ ಆಗಿದೆ.