Home Entertainment ಕಿರಿಕ್ ಪಾರ್ಟಿ ಸುಂದರಿಯ ಹಾಟ್ ಫೋಟೋ…ಬೆಡಗಿಯ ಮೈಮಾಟಕ್ಕೆ ಬೆಸ್ತು ಬಿದ್ದ ನೆಟ್ಟಿಗರು!!!

ಕಿರಿಕ್ ಪಾರ್ಟಿ ಸುಂದರಿಯ ಹಾಟ್ ಫೋಟೋ…ಬೆಡಗಿಯ ಮೈಮಾಟಕ್ಕೆ ಬೆಸ್ತು ಬಿದ್ದ ನೆಟ್ಟಿಗರು!!!

Hindu neighbor gifts plot of land

Hindu neighbour gifts land to Muslim journalist

ರಕ್ಷಿತ್ ಶೆಟ್ಟಿ ಅಭಿನಯದ “ಕಿರಿಕ್ ಪಾರ್ಟಿ” ಚಿತ್ರದ ಮೂಲಕ ಕನ್ನಡಿಗರಿಗೆ ಪರಿಚಯವಾದ ನಟಿ ಸಂಯುಕ್ತಾ ಹೆಗ್ಡೆ. ಕನ್ನಡ ಚಿತ್ರರಂಗದಲ್ಲಿ ಅವಕಾಶಗಳು ಕಡಿಮೆಯಾದರೂ ತಮಿಳು ಚಿತ್ರರಂಗದಲ್ಲಿ ಬೀಡು ಬಿಟ್ಟಿರುವ ಸಂಯುಕ್ತಾ, ಸಖತ್ ಬೋಲ್ಡ್ ಮತ್ತು ಗ್ಲಾಮರಸ್ ನಟಿ.

ಸಂಯುಕ್ತ ಮುಲಾಜಿಲ್ಲದೇ ಮಾತನಾಡುವ ನಟಿ. ಏನು ಸರಿ ಅನಿಸುತ್ತದೆಯೋ ಅದನ್ನು ಇದ್ದ ಹಾಗೇ ಹೇಳೋ ನಟಿ. ಯಾರು ಏನೇ ಅಂದರೂ ಕ್ಯಾರೇ ಮಾಡದ ಸ್ವಚ್ಛಂದ ನಟಿ ಈಕೆ. ಎಷ್ಟೇ ಕ್ವಾಂಟ್ರವರ್ಸಿಗಳನ್ನು ಮೈ ಮೇಲೆ ಎಳೆದುಕೊಂಡರೂ ಡೋಂಟ್ ಕ್ಯಾರ್ ಎನ್ನುವ ನಟಿ ಸಂಯುಕ್ತಾ ಹೆಗ್ಡೆ.

ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ ಸಂಯುಕ್ತಾ. ಆಗಾಗಾ ತನ್ನ ಹಾಟ್ ಫೋಟೋಗಳನ್ನು ಹರಿಬಿಡುವ ಮೂಲಕ ಪಡ್ಡೆ ಹುಡುಗರ ಮೈ ಬಿಸಿಯೇರಿಸುತ್ತಿರುತ್ತಾರೆ. ಸದ್ಯ ಸಂಯುಕ್ತಾ ದುಬೈ ಪ್ರವಾಸದಲ್ಲಿದ್ದಾರೆ. ನೀಲಿ ಬಣ್ಣದ ಮೈಕ್ರೋ ಬಿಕಿನಿ ಉಡುಗೆಯಲ್ಲಿ ಸ್ವಿಮ್ಮಿಂಗ್ ಪೂಲ್ ಒಂದರ ಮುಂದೆ ತೆಗೆಸಿರುವ ಫೋಟೋ ಮತ್ತು ವೀಡಿಯೋವನ್ನು ಸಂಯುಕ್ತಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸಖತ್ ಆಗಿ ಮೈಮಾಟವನ್ನು ಮೇಂಟೇನ್ ಮಾಡಿಕೊಂಡಿರುವ ಸಂಯುಕ್ತರನ್ನು ನೋಡಿ ಪಡ್ಡೆ ಹುಡುಗರ ಹೃದಯ ಬಾಯಿಗೆ ಬಂದಿರದಿದ್ದರೆ…ಸಾಕು…ಇದಕ್ಕೆ ತಕ್ಕ ಹಾಗೇ…”ನಾನು ತಾಪಮಾನವನ್ನು ತಗ್ಗಿಸುತ್ತಿದ್ದೀನಾ ಅಥವಾ ಹೆಚ್ಚಿಸುತ್ತಿದ್ದೀನಾ ನನಗೆ ಗೊತ್ತಿಲ್ಲ” ಎಂದು ಅಡಿಬರಹ ನೀಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಬೆಸ್ತುಬಿದ್ದಿದ್ದಾರೆ.

ಸಂಯುಕ್ತಾ ಹಾಟ್ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರು ಕಮೆಂಟ್‌ಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.