Home latest Petrol – Diesel Price Hike: ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ – ಆಗುವ...

Petrol – Diesel Price Hike: ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ – ಆಗುವ ಪರಿಣಾಮಗಳೇನು?

Hindu neighbor gifts plot of land

Hindu neighbour gifts land to Muslim journalist

Petrol-Diesel Price Hike: ರಾಜ್ಯ ಸರ್ಕಾರದಿಂದ ಪೆಟ್ರೋಲ್, ಡೀಸೆಲ್(Petrol – Desel Price Hike) ಮೇಲಿನ ತೆರಿಗೆಯನ್ನು ಹೆಚ್ಚಳ ಮಾಡಲು ನಿರ್ಧರಿಸಿದ್ದು, ಸರ್ಕಾರದಿಂದ ಗೆಜೆಟ್ ಅಧಿಸೂಚನೆಯಲ್ಲಿ ಆದೇಶ ಹೊರಡಿಸಿಲಾಗಿದೆ. ಹೀಗಾಗಿ ಕರ್ನಾಟಕದಲ್ಲಿ(Karnataka) ಪೆಟ್ರೋಲ್, ಡೀಸೆಲ್ ದರ ಹೆಚ್ಚಾಗಲಿದೆ. ಆದರೆ ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಏನೆಲ್ಲಾ ಪರಿಣಾಮ ಉಂಟಾಗುತ್ತದೆ ಎಂದು ಗೊತ್ತಿದೆಯಾ? ಹಾಗಿದ್ರೆ ನೋಡೋಣ.

ತೈಲ ಬೇರೆ ಏರಿಕೆಯ ಪರಿಣಾಮಗಳು:
ಸ್ವಂತ ವಾಹನ ಹೊಂದಿದವರಿಗೆ ಆರ್ಥಿಕ ಹೊರೆ
• ಮಹಾನಗರಗಳಲ್ಲಿ ಕ್ಯಾಬ್ ಪ್ರಯಾಣ ದುಬಾರಿ
• ಸರಕು ಸಾಗಣೆ ವೆಚ್ಚ ಅಧಿಕ
• ಕೃಷಿಗೆ ಪೂರಕವಾದ ಟ್ರ್ಯಾಕ್ಟ‌ರ್, ಟಿಲ್ಲರ್, ಪಂಪ್‌ಸೆಟ್‌ಗಳ ಬಳಕೆ ವೆಚ್ಚ ಏರಿಕೆ
• ಸಾಗಣೆ ವೆಚ್ಚ ಹೆಚ್ಚಳದಿಂದ ದಿನಸಿ, ತರಕಾರಿ ಸೇರಿದಂತೆ ನಿತ್ಯ ಬಳಕೆಯ ವಸ್ತುಗಳ ಬೆಲೆ ಹೆಚ್ಚಳ
• ಸಾರ್ವಜನಿಕ ಬಳಕೆಯ ವಾಹನಗಳಾದ ಬಸ್, ಟೆಂಪೊ, ಜೀಪುಗಳ ಪ್ರಯಾಣ ದರ ಹೆಚ್ಚಳ
• ಶಾಲಾ-ಕಾಲೇಜುಗಳ ವಾಹನಗಳಿಗೂ ತಟ್ಟುವ ಬಿಸಿ
• ಡೀಸೆಲ್ ಆಧಾರಿತ ಮೀನುಗಾರಿಕೆ ದೋಣಿ, ಬೋಟ್‌ಗಳಿಗೆ ಹೊರೆ

ರಾಜ್ಯ ಪತ್ರದಲ್ಲಿ ಏನಿದೆ?
ಚಿಲ್ಲರೆ ಮಾರಾಟ ತೆರಿಗೆ ಶೇ 25.92 ರಷ್ಟಿತ್ತು. ಈಗ ಶೇ 3.9ರಷ್ಟು ಹೆಚ್ಚಳ ಮಾಡಲಾಗಿದ್ದು, ಶೇ 29.84 ಕ್ಕೆ ಏರಿಕೆ ಮಾಡಲಾಗಿದೆ. ಡಿಸೇಲ್ ಮೇಲಿನ ಚಿಲ್ಲರೆ ಮಾರಾಟ ತೆರಿಗೆ ಈ‌ ಹಿಂದೆ ಶೇ 14.34 ರಷ್ಟಿತ್ತು. ಈಗ ಶೇ 4.1 ರಷ್ಟು ಹೆಚ್ಚಳ ಮಾಡಲಾಗಿದ್ದು, ಶೇ 18.44 ಕ್ಕೆ ಏರಿಕೆಯಾಗಲಿದೆ ಎಂಬುದಾಗಿ ತಿಳಿಸಿದೆ.

ಎಷ್ಟು ಹೆಚ್ಚಾಗಬಹುದು ರೇಟ್?
ವಾಹನ ಸವಾರರಿಗೆ ಬಿಗ್ ಶಾಕ್ ಅನ್ನು ಕರ್ನಾಟಕ ಕಾಂಗ್ರೆಸ್ ಸರ್ಕಾರ ನೀಡಿದೆ. ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆಯನ್ನು ಹೆಚ್ಚಳ ಮಾಡಿದ ಪರಿಣಾಮವಾಗಿ ಕರ್ನಾಟಕದಲ್ಲಿ ಪೆಟ್ರೋಲ್ ದರ ರೂ.3 ಹಾಗೂ ಡಿಸೇಲ್ ದರ ರೂ.3.50 ಪೈಸೆ ಹೆಚ್ಚಾಗುವ ಸಾಧ್ಯತೆ ಇದೆ.

ಯಾಕಿರಬಹುದು ಏರಿಕೆ?
ಗ್ಯಾರಂಟಿ ಯೋಜನೆಗಳನ್ನು(Congress Guarantees) ಜಾರಿಗೆ ತಂದು ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಪಿರುವ ರಾಜ್ಯ ಸರ್ಕಾರ ಇದೀಗ ಜನರಿಗೆ ಅನಿವಾರ್ಯ ಆಗಿರುವ, ಸಿಕ್ಕ ಸಿಕ್ಕ ವಸ್ತುಗಳ ಬೆಲೆಯನ್ನು ಏರಿಕೆ ಮಾಡುತ್ತಿದೆ. ಇದುವರೆಗೂ ಮದ್ಯದ ದರ ಏರಿಸಿ ಏರಿಸಿ ಮದ್ಯ ಪ್ರಿಯರ ಶಾಪಕ್ಕೆ ಗುರಿಯಾಗಿತ್ತು. ಆದರೀಗ ಸರ್ಕಾರದ ಕಣ್ಣು ಪೆಟ್ರೋಲ್, ಡೀಸೆಲ್ ಮೇಲೆ ಬಿದ್ದಿದೆ.