

ಬೆಳಂದೂರು ಸಮೀಪ ಗುಂಡಿನಾರು ಎಂಬಲ್ಲಿ ಹನೀಫ್ ಎಂಬವರ ಪುತ್ರಿ ಅಯಿಷತ್ ಹನ್ನತ್ ಮನೆಯಿಂದ ಕಳ್ಳತನ ನಡೆದಿದೆ.
ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಬೆಳಂದೂರು ಗ್ರಾಮದ ಗುಂಡಿನಾರು ನಿವಾಸಿಯಾಗಿರುವ ಹನೀಫ್ ಎಂಬವರ ಪುತ್ರಿ ಅಯಿಷತ್ ಹನ್ನತ್ ಮನೆಯಲ್ಲಿ ಓರ್ವಳೆ ಇರುವ ಸಂದರ್ಭದಲ್ಲಿ ಮಧ್ಯಾಹ್ನ ಸುಮಾರು 12.30 ಗಂಟೆಗೆ ಹೆಲ್ಮೆಟ್ ಧರಿಸಿದ್ದ ಅಪರಿಚಿತ ವ್ಯಕ್ತಿ ಬಂದು ಕುಡಿಯಲು ನೀರು ಕೇಳಿದ್ದು, ನೀರು ಕುಡಿದು ಅಲ್ಲಿಂದ ಅಪರಿಚಿತ ವ್ಯಕ್ತಿಯು ತೆರಳಿದ್ದ .
ಬಳಿಕ ಅಯಿಷತ್ ಹನ್ನತ್ ಪಕ್ಕದ ತನ್ನ ಅಜ್ಜಿ ಮನೆಗೆ ಹೋದ ಸಂದರ್ಭದಲ್ಲಿ
ಅಪರಿಚಿತ ವ್ಯಕ್ತಿಯು ಮನೆಯ ಒಳಗೆ ಹೋಗಿ ರೂಮ್ ನಲ್ಲಿದ್ದ ವಸ್ತುಗಳನ್ನು ಚೆಲ್ಲ ಪಿಲ್ಲಿ ಮಾಡಿ ಮಂಚದ ಹಾಸಿಗೆಯ ಅಡಿಯಲ್ಲಿ ಇರಿಸಿದ್ದ ರೂ 22, 000 ಹಣವನ್ನು ಕಳವು ಮಾಡಿ ಪರಾರಿಯಾಗಿದ್ದಾನೆ ಎಂದು ಹನೀಫ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಪಳ್ಳತ್ತಾರು ಬೆಳಂದೂರು ಪರಿಸರದಲ್ಲಿ ನಿರಂತರ ಕಳ್ಳತನವಾಗುತ್ತಿದ್ದರೂ ಈ ತನಕ ಕಳ್ಳರ ಪತ್ತೆ ಆಗದಿರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.












