Home latest Karachi: ವಿಕ್ರಾಂತ್ ಯುದ್ಧ ನೌಕೆ ನುಗ್ಗಿಸಿ ಪಾಕ್ ಬಂದರು ‘ಕರಾಚಿ’ ಮೇಲೆ ಭಾರತೀಯ ಸೇನೆಯ ರಣಭೇಟೆ...

Karachi: ವಿಕ್ರಾಂತ್ ಯುದ್ಧ ನೌಕೆ ನುಗ್ಗಿಸಿ ಪಾಕ್ ಬಂದರು ‘ಕರಾಚಿ’ ಮೇಲೆ ಭಾರತೀಯ ಸೇನೆಯ ರಣಭೇಟೆ !! ಬಂದರು ಪುಡಿ ಪುಡಿ

Hindu neighbor gifts plot of land

Hindu neighbour gifts land to Muslim journalist

 

Karachi: ಆಪರೇಷನ್ ಸಿಂದೂರ ಬಳಿಕ ಪಾಕಿಸ್ತಾನವು ಭಾರತದ ಮೇಲೆ ನಡೆಸಲೆತ್ನಿಸಿದ ಪ್ರತೀಕಾರದ ದಾಳಿ ಇದೀಗ ಅದಕ್ಕೇ ತಿರುಗುಬಾಣವಾಗಿದ್ದು, ಭಾರತೀಯ ಸೇನೆಯು ಲಾಹೋರ್‌, ಕರಾಚಿ ಸೇರಿ ಹಲವು ಪ್ರಮುಖ ನಗರಗಳಲ್ಲಿ ತನ್ನ ರಣಾರ್ಭಟ ಮಾಡಿದೆ.

 

ಹೌದು, ಆಪರೇಷನ್ ಸಿಂದೂರು ಗೆ ಪ್ರತೀಕಾರವಾಗಿ ಪಾಕಿಸ್ತಾನವು ಜಮ್ಮು ಕಾಶ್ಮೀರದ ಮೇಲೆ ಡ್ರೋನ್ ನಡೆಸಿತ್ತು. ಇದಕ್ಕೆ ತಕ್ಷಣ ಪ್ರತಿಕ್ರಿಯೆ ನೀಡಿದ ಭಾರತವು ಸಿಯಾಲ್‌ಕೋಟ್ ಮತ್ತು ಲಾಹೋರ್‌ ಜೊತೆಗೆ ರಾಜಧಾನಿ ಇಸ್ಲಾಮಾಬಾದ್‌, ಕರಾವಳಿ ನಗರವಾದ ಕರಾಚಿ ಮೇಲೂ ಭಾರತ ಡ್ರೋನ್ ದಾಳಿ ಪ್ರಾರಂಭಿಸಿದೆ.

 

ಅರಬ್ಬಿ ಸಮದ್ರದಲ್ಲಿ ನೆಲೆಗೊಂಡಿರುವ ಭಾರತದ ನೌಕಾಪಡೆಯ ವಿಮಾನ ವಾಹಕ ನೌಕೆ ಐಎನ್ಎಸ್ ವಿಕ್ರಾಂತ್, ಮೊದಲ ಬಾರಿ ಪಾಕಿಸ್ತಾನದ ಪ್ರಮುಖ ನೌಕಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದು, ಪಾಕಿಸ್ತಾನದ ಪ್ರಮುಖ ಕರಾಚಿ ಬಂದರು ಬೆಂಕಿಗೆ ಆಹುತಿಯಾಗಿದೆ ಎಂದು ವರದಿಯಾಗಿದೆ.

 

ರಕ್ಷಣಾ ಮೂಲಗಳ ಪ್ರಕಾರ, ಐಎನ್‌ಎಸ್ ವಿಕ್ರಾಂತ್ ಪಾಕಿಸ್ತಾನದ ಕರಾಚಿ ಮತ್ತು ಒರ್ಮಾರಾ ಬಂದರುಗಳ ಮೇಲೆ ಹಲವು ಕ್ಷಿಪಣಿಗಳನ್ನು ಹಾರಿಸಿದೆ. ಈ ದಾಳಿಯಿಂದಾಗಿ ಎರಡೂ ಸ್ಥಳಗಳಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ನಗರದಾದ್ಯಂತ ಹೊಗೆ ಆವರಿಸಿ ಕೊಂಡಿದೆ. ಹಾನಿ ಪ್ರಮಾಣ ಎಷ್ಟೆಂದು ದೃಢಪಟ್ಟಿಲ್ಲ.