Home latest ಆಪಲ್ ಕಂಪನಿಯ ಈ ಡಿವೈಸ್ ಬೆಲೆ ಭರ್ಜರಿ ಏರಿಕೆ | OMG ಎಂದ ಗ್ರಾಹಕರು!

ಆಪಲ್ ಕಂಪನಿಯ ಈ ಡಿವೈಸ್ ಬೆಲೆ ಭರ್ಜರಿ ಏರಿಕೆ | OMG ಎಂದ ಗ್ರಾಹಕರು!

Hindu neighbor gifts plot of land

Hindu neighbour gifts land to Muslim journalist

ಜನರ ಬೇಡಿಕೆಗಳು ಸಹ ಬದಲಾಗುತ್ತಲೇ ಇದೆ ಮತ್ತು ಹೆಚ್ಚುತ್ತಲೇ ಇರುತ್ತವೆ. ಈ ನಡುವೆ ಕಂಪನಿಗಳು ತಾನು ಹೆಚ್ಚು ನಾನು ಹೆಚ್ಚು ಎಂದು ಬೀಗುತ್ತಿದೆ. ಪ್ರಸ್ತುತ ಈಗಿನ ಟ್ರೆಂಡಿ ಆಗಿರುವ ಹೋಮ್ ಪಾಡ್ ಮತ್ತು ಐಮ್ಯಾಕ್ ಬಗ್ಗೆ ಮಾಹಿತಿ ಇಲ್ಲಿದೆ.

ಆಪಲ್‌ ಸಂಸ್ಥೆಯ ಇದೀಗ ತನ್ನ ಹೋಮ್‌ಪಾಡ್‌ ಮಿನಿ ಮತ್ತು ಐಮ್ಯಾಕ್‌ ಡಿವೈಸ್‌ಗಳ ಬೆಲೆಯಲ್ಲಿ ಭರ್ಜರಿ ಏರಿಕೆ ಮಾಡಿದೆ. ಗ್ಲೋಬಲ್‌ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಳ ಮಾಡಿದ್ದು, ಭಾರತದಲ್ಲಿಯೂ ಇದು ಅನ್ವಯವಾಗಲಿದೆ.

ಹೋಮ್‌ಪಾಡ್‌ ಮಿನಿ ಫೀಚರ್ಸ್‌:

  • ಆಪಲ್‌ ಸಂಸ್ಥೆ ಹೋಮ್‌ಪಾಡ್‌ ಮಿನಿ ಡಿವೈಸ್‌ ಅನ್ನು 2020 ರಲ್ಲಿ ಭಾರತದಲ್ಲಿ ಪರಿಚಯಿಸಿಲಾಗಿದ್ದು ಇದು ಮೆಶ್ ಫ್ಯಾಬ್ರಿಕ್ ವಿನ್ಯಾಸ ಅನ್ನು ಪಡೆದಿದೆ.
  • ಇದು S5 ಚಿಪ್ ಮತ್ತು U1 ಚಿಪ್‌ಗೆ ಸಹ ಬೆಂಬಲವಿದೆ. ಇದು ಸಿರಿಗೆ ನಾಲ್ಕು ಮೈಕ್ರೊಫೋನ್ ಮತ್ತು ಬೆಂಬಲವನ್ನು ಪಡೆದಿದೆ.
  • ಹೊಸ ಹೋಮ್‌ಪಾಡ್‌ನಂತೆಯೇ, ವಾಯಿಸ್‌ ಗುರುತಿಸುವಿಕೆ, ತಾಪಮಾನ ಮತ್ತು ತೇವಾಂಶ ಸಂವೇದಕಗಳು ಮತ್ತು ಸ್ಟಿರಿಯೊ ಆಯ್ಕೆಗಳನ್ನು ಬೆಂಬಲವಿದೆ.
  • ಹೋಮ್‌ಪಾಡ್ ಮಿನಿ ನೀಲಿ, ಸ್ಪೇಸ್ ಗ್ರೇ, ಬಿಳಿ, ಹಳದಿ ಮತ್ತು ಕಿತ್ತಳೆ ಬಣ್ಣಗಳಲ್ಲಿ ಖರೀದಿಸಬಹುದಾಗಿದೆ.

ಆಪಲ್‌ ಐಮ್ಯಾಕ್ (24 ಇಂಚು) ಫೀಚರ್ಸ್‌:

  • ಆಪಲ್‌ ಐಮ್ಯಾಕ್‌ 24 ಡಿವೈಸ್‌ 4480 x 2520 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 24 ಇಂಚಿನ 4.5K ರೆಟಿನಾ ಡಿಸ್‌ಪ್ಲೇ ಹೊಂದಿದೆ.
  • M1 ಆಧಾರಿತ ಐಮ್ಯಾಕ್ ಹೊಚ್ಚ ಹೊಸ ವಿನ್ಯಾಸವನ್ನು ಹೊಂದಿದೆ. ಮುಂಭಾಗದಲ್ಲಿ ಡಿಸ್ಟ್ರಕ್ಷನ್‌-ಫ್ರೀ-ಮ್ಯೂಟೆಡ್‌ ಕಲರ್‌ ಮತ್ತು ಹಿಂಭಾಗದಲ್ಲಿ ಬ್ರೈಟ್‌ನೆಸ್‌ ಕಲರ್‌ ಅನ್ನು ಒಳಗೊಂಡಿದೆ.
  • ಐಮ್ಯಾಕ್ ಆಪಲ್‌ನ ಟ್ರೂ ಟೋನ್ ಟೆಕ್ ಫಾರ್ ಕಲರ್ ಬ್ಯಾಲೆನ್ಸ್, P3 ವೈಡ್ ಕಲರ್ ಗ್ಯಾಮಟ್, 500 ನಿಟ್ಸ್ ಪೀಕ್ ಬ್ರೈಟ್‌ನೆಸ್ ಮತ್ತು ಲೋ ರಿಫ್ಲೆಕ್ಟಿವಿಟಿ ಲೇಪನ ಹೊಂದಿದೆ.
  • ಅಲ್ಲದೆ 24 ಇಂಚಿನ ಈ ಡಿಸ್‌ಪ್ಲೇ ಹಿಂದಿನ 21.5 ಮಾದರಿಗಿಂತ ಸ್ವಲ್ಪ ದೊಡ್ಡದಾದ ಚೌಕಟ್ಟಿನಲ್ಲಿ ಹೊಂದಿಕೊಳ್ಳುತ್ತದೆ. ಆಲ್-ಇನ್-ಒನ್ ಪಿಸಿ ಸಹ ಹೆಚ್ಚು ಸಾಂದ್ರವಾಗಿರುತ್ತದೆ, ಕೇವಲ 11.5 ಎಂಎಂ ತೆಳ್ಳಗಿರುತ್ತದೆ.
  • ಇದರ ಮೂಲ ಮಾದರಿ ನೀಲಿ, ಹಸಿರು, ಕೆಂಪು, ಬೆಳ್ಳಿ ಎಂಬ ನಾಲ್ಕು ಬಣ್ಣಗಳಲ್ಲಿ ಮಾತ್ರ ಲಭ್ಯವಿದೆ.
  • ಐಮ್ಯಾಕ್‌ನಲ್ಲಿ 1080p ವೆಬ್‌ಕ್ಯಾಮ್ ಅನ್ನು ಒದಗಿಸಲಾಗಿದ್ದು, ಇದು ಫೇಸ್‌ ಡಿಟೆಕ್ಷನ್‌ ಮತ್ತು ಬೆಟರ್‌ ಎಕ್ಸಪೋಸರ್‌ ಮತ್ತು ಕಲರ್‌ ಬ್ಯಾಲೆನ್ಸ್‌ಗಾಗಿ M1 ನ್ಯೂರಲ್‌ ಇಂಜಿನ್‌ ಸಹಾಯ ಮಾಡಲಿದೆ.
  • ಆಪಲ್‌ ಕಂಪನಿಯು ಬೀಮ್‌ಫಾರ್ಮಿಂಗ್ ತಂತ್ರಜ್ಞಾನದೊಂದಿಗೆ ಸ್ಟುಡಿಯೋ ಗುಣಮಟ್ಟದ 3-ಮೈಕ್ ಅರೇ ಮತ್ತು ಡಾಲ್ಬಿ ಅಟ್ಮೋಸ್-ಪ್ರಮಾಣೀಕೃತ 6-ಸ್ಪೀಕರ್ ವ್ಯವಸ್ಥೆಯನ್ನು ಸಹ ಒಳಗೊಂಡಿದೆ.
  • ಇದರಲ್ಲಿ ಹೆಚ್ಚಿನ ಕಾರ್ಯಕ್ಷಮತೆಯ ಟ್ವೀಟರ್‌ಗಳ ಜೊತೆಗೆ ಫೋರ್ಸ್‌-ಕ್ಯಾನ್ಸಲ್‌ ವೂಫರ್‌ಗಳು ಕೂಡ ಸೇರಿವೆ.

ಸದ್ಯ ಹೋಮ್‌ಪಾಡ್‌ ಮಿನಿ ಬೆಲೆಯಲ್ಲಿ 1,000ರೂ. ಏರಿಕೆ ಆಗಿದ್ದು, ಬೆಲೆಯು ಈಗ 10,900ರೂ. ಆಗಿದೆ. ಅದೇ ರೀತಿ ಐಮ್ಯಾಕ್‌ ಬೆಲೆಯಲ್ಲಿ 10,000ರೂ, ಹೆಚ್ಚಳ ಆಗಿದ್ದು, ದರವು ಈಗ 1,29,900ರೂ. ಆಗಿದೆ. ನೀವು ಆಪಲ್‌ ಸಂಸ್ಥೆಯ ಹೋಮ್‌ಪಾಡ್‌ ಮಿನಿ ಮತ್ತು ಐಮ್ಯಾಕ್‌ ಡಿವೈಸ್‌ಗಳನ್ನು ಕೊಂಡು ಕೊಳ್ಳಲು ಬಯಸಿದ್ದರೆ ಎರಡು ಉನ್ನತ ಮಾದರಿಗಳು ಹಳದಿ, ಕಿತ್ತಳೆ ಮತ್ತು ನೇರಳೆ ಬಣ್ಣಗಳಲ್ಲಿ ಲಭ್ಯವಿದೆ.