Home latest Former CM SM Krishna: ಎಸ್‌ಎಂ ಕೃಷ್ಣ ಸಹೋದರಿ ಮನೆ ಮೇಲೆ ಐಟಿ ದಾಳಿ!

Former CM SM Krishna: ಎಸ್‌ಎಂ ಕೃಷ್ಣ ಸಹೋದರಿ ಮನೆ ಮೇಲೆ ಐಟಿ ದಾಳಿ!

I-T Raid
Image source: Hindustan

Hindu neighbor gifts plot of land

Hindu neighbour gifts land to Muslim journalist

Former CM SM Krishna: ಕರ್ನಾಟಕದಲ್ಲಿ ಚುನಾವಣೆಗೆ ದಿನಗಣನೆ ಶುರುವಾಗಿದೆ. ಈ ಕ್ಷಣದಲ್ಲಿ ಕಾಂಗ್ರೆಸ್‌ ನಾಯಕರ ಮೇಲೆ ಐಟಿ ದಾಳಿ ಮುಂದುವರೆದಿದೆ. ಹೌದು, ಎಸ್‌ಎಂ ಕೃಷ್ಣ (Former CM SM Krishna) ಅವರ ಸಹೋದರಿ ನಿವಾಸದ ಮೇಲೆ ಐಟಿ ದಾಳಿ ನಡೆದಿದೆ. ಎಸ್‌ಎಂ ಕೃಷ್ಣ ಅವರ ಸಹೋದರಿ ಸುನೀತಾ ಅವರ ಮನೆ ಮೇಲೆ ಐಟಿ ದಾಳಿಯಾಗಿದೆ. ಬೆಂಗಳೂರಿನ ಕೋರಮಂಗಲದ ಒಂದನೇ ಬ್ಲಾಕ್‌ನಲ್ಲಿರುವ ಮನೆಗೆ ಐಟಿ ರೈಡ್‌ ಆಗಿದೆ. ಕಳೆದ ಎರಡು ದಿನಗಳಿಂದ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಬಾಗ್ಮನೆ ಹೆಸರಿನಲ್ಲಿರುವ ನಿವಾಸ ಹಾಗೂ ಬಾಗ್ಮನೆ ಬಿಲ್ಡರ್‌ ಕಚೇರಿಗಳ ಮೇಲೆ ದಾಳಿ ನಡೆದಿದೆ. ಟ್ರಾನ್‌ ಇನ್ಸೈನಿಯಾ ಅಪಾರ್ಟ್ಮೆಂಟ್‌ ಮೇಲೆಯೂ ಐಟಿ ದಾಳಿ ನಡೆದಿದ್ದು, ಅಧಿಕಾರಿಗಳು ಸತತವಾಗಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಯಾಕಾಗಿ, ಯಾವ ಕಾರಣಕ್ಕೆ ಈ ದಾಳಿ ನಡೆದಿದೆ ಎಂದು ಇನ್ನೂ ಕೂಡಾ ತಿಳಿದು ಬಂದಿಲ್ಲ. ಇದಕ್ಕೂ ಚುನಾವಣೆಗೂ ಸಂಬಂಧವಿದೆಯೇ ಎಂಬವುದು ಸ್ಪಷ್ಟವಾಗಿಲ್ಲ.

KPSC SDA Result 2023: SDA ಹುದ್ದೆಗಳಿಗೆ ಹೆಚ್ಚುವರಿ ಪಟ್ಟಿ ಪ್ರಕಟ!