Home latest ಹೋಟೆಲ್ ನಲ್ಲಿ ಊಟ ಮಾಡೋ ಹೆಂಡತಿಯ ಬಯಕೆಯನ್ನು ತೀರಿಸದ ಹಳ್ಳಿ ಸೊಗಡಲ್ಲಿ ಬೆಳೆದ ಗಂಡ |ಬೇಸರದಿಂದ...

ಹೋಟೆಲ್ ನಲ್ಲಿ ಊಟ ಮಾಡೋ ಹೆಂಡತಿಯ ಬಯಕೆಯನ್ನು ತೀರಿಸದ ಹಳ್ಳಿ ಸೊಗಡಲ್ಲಿ ಬೆಳೆದ ಗಂಡ |ಬೇಸರದಿಂದ ಇಬ್ಬರು ಮಕ್ಕಳ ಜೊತೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ

Hindu neighbor gifts plot of land

Hindu neighbour gifts land to Muslim journalist

ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಮಾತಿದೆ. ಆದರೆ ಇಲ್ಲಿ ಊಟದ ವಿಚಾರಕ್ಕೇ ಮೂವರ ಹೆಣ ಬಿದ್ದಿರುವ ಘಟನೆ ದೊಡ್ಡಬಳ್ಳಾಪುರದ ಎಸ್.ಎಂ.ಗೊಲ್ಲಹಳ್ಳಿಯಲ್ಲಿ ನಡೆದುಹೋಗಿದೆ.

ದೊಡ್ಡಬಳ್ಳಾಪುರ ಪಟ್ಟಣದಲ್ಲಿ ಬೆಳೆದಿದ್ದ ಮೃತ ಮಹಿಳೆಗೆ ವಾರಕ್ಕೆ ಒಮ್ಮೆ ಹೋಟೆಲ್ ನಲ್ಲಿ ಊಟಕ್ಕೆ ಹೋಗುವ ಆಸೆ ಇತ್ತಂತೆ. ಆದರೆ ಹಳ್ಳಿಯಲ್ಲಿ ಹುಟ್ಟಿ ಬೆಳೆದಿದ್ದ ಪತಿ ತನ್ನ ಆಸೆ ಈಡೇರಿಸುತ್ತಿಲ್ಲ ಎಂದು ಜಿಗುಪ್ಸೆಗೊಂಡು 2 ಮಕ್ಕಳ ಜೊತೆ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿದೆ.

ಆದರೆ ಮಹಿಳೆಗೆ ಆರೋಗ್ಯ ಸಮಸ್ಯೆ ಇದ್ದಿದ್ದರಿಂದ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪೆಟ್ರೋಲ್ ಸುರಿದುಕೊಂಡು ಮಕ್ಕಳ ಜೊತೆಗೆ ತನಗೂ ಬೆಂಕಿ ಇಟ್ಟುಕೊಂಡು ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಳು.

ಅತ್ತೆ, ಮಾವ ದೇವಾಲಯಕ್ಕೆ ಹೋದ ಸಂದರ್ಭದಲ್ಲಿ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಳು. ಮನೆಯಿಂದ ಹೊಗೆ ಬರುತ್ತಿದ್ದದ್ದನ್ನು ಗಮನಿಸಿದ ಗ್ರಾಮಸ್ಥರು ಬೆಂಕಿ ನಂದಿಸಿದ್ದರು. ಆದರೆ ಅಷ್ಟೊತ್ತಿಗಾಗಲೇ ಪರಿಸ್ಥಿತಿ ಕೈಮೀರಿತ್ತು. ಇದೀಗ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಮೃತ ಮಹಿಳೆಯ ಪೋಷಕರು ದೂರು ನೀಡಿದ್ದು, ತನಿಖೆ ಆರಂಭವಾಗಿದೆ.