Home latest ಮಂಗಳೂರು:’ಮುಲ್ಲಾ ರಹೀಮನೊಂದಿಗೆ ಹಿಂದೂ ಯುವತಿಯ ಕುಚುಕು’!! ಸುಖಾಸುಮ್ಮನೆ ಓರ್ವ ಎಂ.ಬಿ.ಬಿ.ಎಸ್ ವಿದ್ಯಾರ್ಥಿನಿ ಹಿಂದೂ ಯುವತಿಯ ಫೋಟೋ...

ಮಂಗಳೂರು:’ಮುಲ್ಲಾ ರಹೀಮನೊಂದಿಗೆ ಹಿಂದೂ ಯುವತಿಯ ಕುಚುಕು’!! ಸುಖಾಸುಮ್ಮನೆ ಓರ್ವ ಎಂ.ಬಿ.ಬಿ.ಎಸ್ ವಿದ್ಯಾರ್ಥಿನಿ ಹಿಂದೂ ಯುವತಿಯ ಫೋಟೋ ಎಡಿಟ್ ಮಾಡಿ ವೈರಲ್ ಮಾಡಿದ್ದಾದರೂ ಯಾರು!??

Hindu neighbor gifts plot of land

Hindu neighbour gifts land to Muslim journalist

ಮಂಗಳೂರು: ನಗರದ ಪ್ರತಿಷ್ಟಿತ ಕಾಲೇಜೊಂದರಲ್ಲಿ ಎಂ.ಬಿ.ಬಿ.ಎಸ್ ವ್ಯಾಸಂಗದಲ್ಲಿರುವ ಹಿಂದೂ ಯುವತಿಯೋರ್ವಳ ಫೋಟೋವನ್ನು ಮುಸ್ಲಿಂ ಯುವಕನೋರ್ವನ ಫೋಟೋದೊಂದಿಗಿರುವಂತೆ ಎಡಿಟ್ ಮಾಡಿ, ಇವರಿಬ್ಬರಿಗೂ ಸಂಬಂಧವಿದೆ-ಇದೊಂದು ಲವ್ ಜಿಹಾದ್ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಈ ಬಗ್ಗೆ ನಗರ ಕಮಿಷನರೇಟ್ ವ್ಯಾಪ್ತಿಯ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ವಿವರ:ಮಂಗಳೂರಿನ ಹೆಸರಾಂತ ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿರುವ ಹಿಂದೂ ಯುವತಿಯ ಫೋಟೋವನ್ನು ಆಕೆಯ ಇನ್ಸ್ಟಾಗ್ರಾಮ್ ಪೇಜ್ ನಿಂದ ಕದ್ದ ಕಿಡಿಗೇಡಿಗಳು, ಮುಲ್ಲಾ ರಹಿಮಾನ್ ಎಂಬ ಮುಸ್ಲಿಂ ಯುವಕನೊಂದಿಗಿರುವಂತೆ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿತ್ತು.

ಮುಲ್ಲಾ ರಹಿಮಾನ್ ನೊಂದಿಗೆ ಈ ಯುವತಿಯ ಕುಚುಕು ಎಂದು ಎಲ್ಲೆಡೆ ಹರಿದಾಡುತ್ತಿದ್ದ ವೇಳೆಗಾಗಲೇ ಹಿಂದೂ ಸಂಘಟನೆಗಳ ಕೆಂಗಣ್ಣಿಗೂ ಗುರಿಯಾಗಿತ್ತು. ಹೀಗೆ ವೈರಲ್ ಆದ ಫೋಟೋ ಫೋಟೋ ಯುವತಿಗೂ ಲಭಿಸಿದ್ದು, ಫೋಟೋ ಕಂಡ ಕೂಡಲೇ ಯುವತಿ ಗಾಬರಿಗೊಂಡು ಮನೆಯವರಲ್ಲಿ ತಿಳಿಸಿದ್ದಾಳೆ.ಈ ಬಗ್ಗೆ ಆಕೆಯ ಮನೆಯವರು-ಕುಟುಂಬಸ್ಥರು ಫೋಟೋ ಗೂ ಆಕೆಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದಲ್ಲದೇ, ಇದರ ಹಿಂದೆ ಉದ್ದೇಶಪೂರ್ವಕವಾದ ಆಲೋಚನೆಗಳಿದ್ದು, ಕೃತ್ಯ ಎಸಗಿದ ಕಿಡಿಗೇಡಿಗಳ ಬಂಧನಕ್ಕೆ ಪೊಲೀಸರ ಮೊರೆ ಹೋಗಿದ್ದಾರೆ.