Home Entertainment ಪ್ರೆಶರ್ ಕುಕ್ಕರ್ ನಿಂದ ಹೊರಬರುವ ಸ್ಟೀಮ್ ನಿಂದ ಕೂದಲು ಒಣಗಿಸುತ್ತಿದ್ದಾನೆ ಈ ಕಿಲಾಡಿ ಯುವಕ !!|ಈತನ...

ಪ್ರೆಶರ್ ಕುಕ್ಕರ್ ನಿಂದ ಹೊರಬರುವ ಸ್ಟೀಮ್ ನಿಂದ ಕೂದಲು ಒಣಗಿಸುತ್ತಿದ್ದಾನೆ ಈ ಕಿಲಾಡಿ ಯುವಕ !!|ಈತನ ಕುಕ್ಕರ್ ಹೇರ್ ಡ್ರೈಯರ್ ವೀಡಿಯೋ ಫುಲ್ ವೈರಲ್

Hindu neighbor gifts plot of land

Hindu neighbour gifts land to Muslim journalist

ಏನಾದರು ಸಮಸ್ಯೆ ಹುಟ್ಟಿಕೊಂಡಾಗ ಅದಕ್ಕೆ ಪರಿಹಾರ ಹುಡುಕುವುದು ಸಾಮಾನ್ಯ. ಎಷ್ಟು ಪ್ರಯತ್ನಿಸಿದರೂ ಪರಿಹಾರವೇ ದೊರಕದಿದ್ದಾಗ ಅದನ್ನು ಹಾಗೆಯೇ ಕೈಬಿಡುವ ಬದಲು ಅದನ್ನು ಬಗೆಹರಿಸಲು ಅನ್ಯ ಮಾರ್ಗ ಕಂಡುಕೊಳ್ಳುವುದು ಹೇಗೆ ಎಂಬುದನ್ನು ತರ್ಕಿಸುವುದು ಮುಖ್ಯ. ಹೀಗೆ ನಮಗೆ ಬೇಕಾದದ್ದು ಸಿಗದೆ ಇರುವಾಗ ಇರುವುದರಲ್ಲಿಯೇ ಕೆಲಸ ಸಾಧಿಸುವುದು ನಮ್ಮ ಚಾಣಕ್ಷತೆಗೆ ಬಿಟ್ಟಿದ್ದು.

ಹೌದು ಇದಕ್ಕೆ ಉದಾಹರಣೆ ಎಂಬಂತಹ ಒಂದು ವೀಡಿಯೋ ವೈರಲ್ ಆಗಿದೆ. ಸಾಮಾನ್ಯವಾಗಿ ಕೂದಲು ಒಣಗಿಸಲು ಹೇರ್ ಡ್ರೈಯರ್ ಬಳಸುತ್ತಾರೆ. ಹೇರ್ ಡ್ರೈಯರ್ ಇಲ್ಲದೇ ಇರುವಾಗ ಹೇಗೆ ತಲೆ ಕೂದಲನ್ನು ಒಣಗಿಸುವುದು ಎಂಬ ಚಿಂತನೆಗೆ ಇಳಿದ ಯುವಕೊನ್ನಬ್ಬ ತನ್ನ ತಲೆ ಕೂದಲನ್ನು ಕುಕ್ಕರ್​ನಿಂದ ಡ್ರೈ ಮಾಡಿದ್ದಾನೆ. ಇನ್​ಸ್ಟಾಗ್ರಾಮ್​ನಲ್ಲಿ ಈ ವಿಡಿಯೋವನ್ನು ಹರಿಬಿಡಲಾಗಿದ್ದು, ನೆಟ್ಟಿಗರು ಈ ವೀಡಿಯೋ ಕಂಡು ಫಿದಾ ಆಗಿದ್ದಾರೆ.

ಹೇರ್ ಡ್ರೈಯರ್ ಇಲ್ಲದಿರುವಾಗ ತನ್ನ ಕೂದಲನ್ನು ಒಣಗಿಸಲು ಮನೆಯಲ್ಲಿಯೇ ಇರುವ ವಸ್ತುವಿನಿಂದ ಯುವಕನೋರ್ವ ಹೊಸ ತಂತ್ರ ರೂಪಿಸಿದ್ದಾನೆ. ಬ್ಲಾಕ್ ಲವರ್ ಒಕ್ಸ್ ಎಂಬ ಇನ್ಸ್ಟಾಗ್ರಾಮ್ ಖಾತೆಯಿಂದ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ವೀಡಿಯೋದಲ್ಲಿ ಪ್ರೆಶರ್ ಕುಕ್ಕರ್‌ನಿಂದ ಹೊರಬರುವ ಸ್ಟೀಮ್‌ನಿಂದ ಯುವಕ ತನ್ನ ತಲೆ ಕೂದಲನ್ನು ಒಣಗಿಸುತ್ತಿರುವುದನ್ನು ಕಾಣಬಹುದು. ಕುಕ್ಕರ್‌ನಿಂದ ಸ್ಟೀಮ್ ಹೊರಬರುತ್ತಿದ್ದಂತೆಯೇ ಹುಡುಗ ಅದರ ಮುಂದೆ ನಿಂತು ತನ್ನ ಕೂದಲನ್ನು ಡ್ರೈ ಮಾಡಿಕೊಂಡಿದ್ದಾನೆ.

https://www.instagram.com/reel/CVvfbmKt7QZ/?utm_source=ig_web_copy_link

ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಈಗಾಗಲೇ ಐದು ಲಕ್ಷಕ್ಕೂ ಹೆಚ್ಚು ಲೈಕ್ಸ್ ಮತ್ತು ಹಲವಾರು ಕಮೆಂಟ್‌ಗಳು ಬಂದಿವೆ. ಆ ಪ್ರಕಾರ ನೋಡುವುದಾದರೆ ಹಲವರು ನಗುವನ್ನು ವ್ಯಕ್ತಪಡಿಸುವ ಎಮೋಜಿಗಳನ್ನು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಮೂರ್ಖತನ ಎಂದು ಮೂಗು ಮುರಿದಿದ್ದಾರೆ. ಒಬ್ಬರು ಇದು ಉತ್ತಮ ಕಾನ್ಸೆಪ್ಟ್ ಮುಂದುವರಿಸು ಎಂದು ಕಮೆಂಟ್ ಮಾಡಿದರೆ, ಮತ್ತೊಬ್ಬರು ಇದು ಭಾರತ, ಇಲ್ಲಿ ಅನೇಕ ವಿಚಾರಗಳು ನಡೆಯುತ್ತದೆ ಎಂದು ಕಮೆಂಟ್ ಮಾಡಿದ್ದಾರೆ.