Home Karnataka State Politics Updates ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ನಿರುದ್ಯೋಗಿ ಯುವಕರಿಗೆ ಗುಡ್ ನ್ಯೂಸ್!!!

ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ನಿರುದ್ಯೋಗಿ ಯುವಕರಿಗೆ ಗುಡ್ ನ್ಯೂಸ್!!!

Hindu neighbor gifts plot of land

Hindu neighbour gifts land to Muslim journalist

ಚುನಾವಣೆ ಸಮೀಪಿಸುತ್ತಿದ್ದಂತೆ ಜನರ ಓಲೈಕೆಗೆ ಸರ್ಕಾರ ನಾನಾ ಕಸರತ್ತನ್ನು ಮಾಡೋದು ಸಹಜ. ದಿನಂಪ್ರತಿ ಪ್ರತಿ ವಸ್ತುಗಳ ಬೆಲೆ ಏರಿಕೆಯ ಬಿಸಿ ಜನರನ್ನು ಹೈರಾಣಾಗಿ ಹೋಗುವಂತೆ ಮಾಡುತ್ತಿರುವ ನಡುವೆ ಜನರಿಗೆ ಮೂಲ ಸೌಕರ್ಯಗಳ ಒದಗಿಸಿಕೊಡುವ ಕುರುತಾಗಿ ರಾಜಕೀಯ ಪಕ್ಷಗಳು ಆಶ್ವಾಸನೆಯ ವಚನ ನೀಡೋದು ಸರ್ವೇ ಸಾಮಾನ್ಯ ಸಂಗತಿ. ಇದರಲ್ಲಿ ಎಷ್ಟೋ ಬಾರಿ ಆಶ್ವಾಸನೆಗಳು ಕೇವಲ ಮತಭೇಟೆಗೆ ದಾಳವಾಗಿ ಪರಿಣಮಿಸುತ್ತಿದೆ. ಇದೀಗ ತ್ರಿಪುರಾ ವಿಧಾನಸಭಾ ಚುನಾವಣೆಗೆ ತೃಣಮೂಲ ಕಾಂಗ್ರೆಸ್  ತನ್ನ ಪ್ರಣಾಳಿಕೆಯನ್ನು ಭಾನುವಾರ ಬಿಡುಗಡೆ ಮಾಡಿದೆ.

ತ್ರಿಪುರಾ ವಿಧಾನಸಭಾ ಚುನಾವಣೆಗೆ ತೃಣಮೂಲ ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ರಾಜ್ಯ ಭೇಟಿಯ ಮೊದಲೇ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗಿದ್ದು, ಈ ವೇಳೆ  ಪಶ್ಚಿಮ ಬಂಗಾಳದ ಮಾದರಿಯಲ್ಲಿಯೆ  ಸಮಾಜ ಕಲ್ಯಾಣ ಯೋಜನೆಗಳ ಅನುಷ್ಠಾನ ಮಾಡುವ 2 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಭರವಸೆ ನೀಡಲಾಗಿದೆ. 4 ರಿಂದ 8 ನೇ ತರಗತಿಯ ಶಾಲಾ ವಿದ್ಯಾರ್ಥಿಗಳ ಜೊತೆಗೆ  ನಿರುದ್ಯೋಗಿ ಯುವಕರಿಗೆ ತಿಂಗಳಿಗೆ 1,000 ರೂ. ನೀಡುವ ಭರವಸೆ ನೀಡಲಾಗಿದೆ.
ಫೆಬ್ರವರಿ 16 ರಂದು ನಡೆಯಲಿರುವ ಚುನಾವಣೆಯಲ್ಲಿ ಟಿಎಂಸಿ 28 ವಿಧಾನಸಭಾ ಸ್ಥಾನಗಳಿಗೆ ಹಣಾಹಣಿ ನಡೆಸಲಿದೆ. ಚುನಾವಣೆಯ ಕಾವು ಏರಿದಂತೆ ಫೆ.6ರಂದು ಮಮತಾ ಬ್ಯಾನರ್ಜಿ ತ್ರಿಪುರಾಗೆ ಭೇಟಿ  ನೀಡಲಿದ್ದಾರೆ. ಈ ಹಿನ್ನೆಲೆ ಪಶ್ಚಿಮ ಬಂಗಾಳದ ಶಿಕ್ಷಣ ಸಚಿವ ಬ್ರತ್ಯಾ ಬಸು, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕೌಶಲ್ಯ ವಿಶ್ವವಿದ್ಯಾಲಯ, ವಿದ್ಯಾರ್ಥಿ ಕ್ರೆಡಿಟ್ ಕಾರ್ಡ್‌ಗಳು ಮತ್ತು ಉನ್ನತ ಶಿಕ್ಷಣವನ್ನು ಪಡೆಯಲು ಇಚ್ಛಿಸುವವರಿಗೆ ಸುಲಭವಾಗಿ ಸಾಲ ದೊರೆಯುವಂತೆ ಮಾಡಲಾಗುತ್ತದೆ. ಇದರ ಜೊತೆಗೆ 4ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ವಾರ್ಷಿಕ 1000 ರೂ. ವಿದ್ಯಾರ್ಥಿ ವೇತನ ನೀಡಲಾಗುವ ಕುರಿತು ಭರವಸೆ ನೀಡಿದ್ದಾರೆ.

ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಮೊದಲ ವರ್ಷದಲ್ಲಿಯೇ 50,000 ಹೊಸ ಉದ್ಯೋಗ ಕಲ್ಪಿಸಿಕೊಡುವ ಜೊತೆಗೆ ಐದು ವರ್ಷಗಳಲ್ಲಿ 2 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಗುರಿಹೊಂದಿರುವ ಬಗ್ಗೆ  ಹೇಳಿದ್ದಾರೆ. ಇದಲ್ಲದೆ, ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಮಿಷನ್ ಮೋಡ್‌ನಲ್ಲಿ ಭರ್ತಿ ಮಾಡುವ ಆಶ್ವಾಸನೆ ನೀಡಿದ್ದಾರೆ. “ಟಿಎಂಸಿಯು ನಿರುದ್ಯೋಗಿ ಯುವಕರಿಗೆ ತಿಂಗಳಿಗೆ 1,000 ರೂ. ಸಹಾಯಧನ ಒದಗಿಸಿ ಕೊಡುವ ಜೊತೆಗೆ  10,323 ನಿವೃತ್ತ ಶಿಕ್ಷಕರಿಗೆ ಅವರ ಕಾನೂನು ತೊಡಕು ಬಗೆಹರಿಯುವ ವರೆಗೆ ಅನುಕೂಲ ದೊರೆಯುವಂತೆ ಮಾಡಲಾಗುತ್ತದೆ ಎಂದು ಈ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ಶಿಕ್ಷಣ ಸಚಿವ ಬ್ರತ್ಯಾ ಬಸು ಭರವಸೆ ನೀಡಿದ್ದು, ಚುನಾವಣೆ ನಡೆದು ಫಲಿತಾಂಶ ಹೊರ ಬಿದ್ದ ಬಳಿಕವಷ್ಟೇ ಆಶ್ವಾಸನೆಯ ಮಾತುಗಳ ಕುರಿತು ಸ್ಪಷ್ಟ ಉತ್ತರ ದೊರೆಯಬೇಕಾಗಿದೆ.