Home latest ಮಂಗಳೂರು :ಎಂಟು ವರ್ಷದ ಬಾಲಕಿಯ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆಗೈದ ಕಾಮುಕರು ಅರೆಸ್ಟ್!!|ನಾವೇ ಕೃತ್ಯ ಎಸಗಿ...

ಮಂಗಳೂರು :ಎಂಟು ವರ್ಷದ ಬಾಲಕಿಯ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆಗೈದ ಕಾಮುಕರು ಅರೆಸ್ಟ್!!|ನಾವೇ ಕೃತ್ಯ ಎಸಗಿ ಬಾಲಕಿಯನ್ನು ಹುಡುಕಾಡುವಾಗ ಸೊಬಗರಂತೆ ನಟಿಸಿದ ನಾಲ್ವರ ಹೆಡೆಮುರಿಕಟ್ಟಿದ ಮಂಗಳೂರು ಪೊಲೀಸ್

Hindu neighbor gifts plot of land

Hindu neighbour gifts land to Muslim journalist

ಎಂಟು ವರ್ಷದ ಬಾಲಕಿಯನ್ನು ಅತ್ಯಾಚಾರಗೈದು, ಕತ್ತು ಹಿಸುಕಿ ಕೊಲೆ ನಡೆಸಿ ಮೋರಿಯೊಂದರಲ್ಲಿ ಮೃತದೇಹವನ್ನು ಮುಚ್ಚಿಟ್ಟು ಆ ಬಳಿಕ ಬಾಲಕಿಯನ್ನು ಹುಡುಕಾಡಲು ಸಹಕರಿಸಿ ತಮಗೇನೂ ಅರಿವಿಲ್ಲದಂತೆ ಇದ್ದ ನಾಲ್ವರು ಅತ್ಯಾಚಾರಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ವಿವರ:ಮಂಗಳೂರು ಹೊರವಲಯದ ಉಳಾಯಿಬೆಟ್ಟು ಸಮೀಪದ ಕಾರ್ಖಾನೆಯೊಂದರಲ್ಲಿ ಕೆಲಸಕ್ಕಿರುವ ಕುಟುಂಬವೊಂದರ ಎಂಟು ವರ್ಷದ ಹೆಣ್ಣುಮಗು ರವಿವಾರ ಸಂಜೆ ನಾಪತ್ತೆಯಾಗಿತ್ತು.ಮನೆಯವರು ಹುಡುಕಾಡಿದಾಗ ಸಂಜೆ ಸುಮಾರು 6.00 ಗಂಟೆಯ ಹೊತ್ತಿಗೆ ಪಕ್ಕದಲ್ಲೇ ಇರುವ ಮೋರಿಯೊಂದರಲ್ಲಿ ಹೆಣ್ಣುಮಗುವಿನ ಮೃತದೇಹ ಪತ್ತೆಯಾಗಿತ್ತು.

ಇದಾದ ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ ಕಾರ್ಖಾನೆಯಲ್ಲಿ ಕೆಲಸಕ್ಕಿರುವ ಇತರ ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಈ ಸಂದರ್ಭದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ಮಧ್ಯಪ್ರದೇಶ ಮೂಲದ ಜಯಸಿಂಗ್, ಮುನೀಮ್ ಸಿಂಗ್, ಮನೀಶ್ ತಿರ್ಕಿ, ಹಾಗೂ ಜಾರ್ಖಾಂಡ್ ಮೂಲದ ಮುಕೇಶ್ ಸಿಂಗ್ ಎಂದು ಗುರುತಿಸಲಾಗಿದೆ.

ತಾವೇ ಕೃತ್ಯ ಎಸಗಿ ಸುಬಗರಂತೆ ನಟಿಸಿದ ಕಾಮುಕರು
ಆಟವಾಡುತ್ತಿದ್ದ ಬಾಲಕಿಯನ್ನು ಈ ನಾಲ್ವರು ಸೇರಿ ತಮ್ಮ ಕೋಣೆಯೊಳಕ್ಕೆ ಕರೆದುಕೊಂಡುಹೋಗಿ ಅತ್ಯಾಚಾರ ನಡೆಸಿದ್ದು, ತೀವ್ರ ರಕ್ತಸ್ರಾವವಾದಾಗ ಬಾಲಕಿಯ ಕತ್ತುಹಿಸುಕಿ ಕೊಲೆ ನಡೆಸಿ ಮೋರಿಯೊಂದರ ಒಳಗೆ ಮೃತದೇಹವನ್ನು ಬಚ್ಚಿಟ್ಟಿದ್ದಾರೆ.

ಇದಾದ ಬಳಿಕ ಇಬ್ಬರು ಆರೋಪಿಗಳು ಪುತ್ತೂರಿಗೆ ತೆರಳಿದ್ದು, ಉಳಿದಿಬ್ಬರು ಸಂಜೆ ಬಾಲಕಿಯನ್ನು ಹುಡುಕಾಡುವ ಸಂದರ್ಭದಲ್ಲಿ ತಮಗೇನೂ ಅರಿವಿಲ್ಲದಂತೆ ಹುಡುಕಾಟಕ್ಕೆ ಸಹಕರಿಸಿದ್ದರು. ಸದ್ಯ ಆರೋಪಿಗಳ ಬಂಧನವಾಗಿದ್ದು ಕಠಿಣ ಶಿಕ್ಷೆಯಾಗಲಿ ಎಂಬುವುದೇ ಎಲ್ಲರ ಒಕ್ಕೊರಳ ಆಗ್ರಹವಾಗಿದೆ.