Home latest ತಂದೆ ಬೈದರೆಂಬ ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ತನ್ನನ್ನು ತಾನೇ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಮಗ

ತಂದೆ ಬೈದರೆಂಬ ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ತನ್ನನ್ನು ತಾನೇ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಮಗ

Hindu neighbor gifts plot of land

Hindu neighbour gifts land to Muslim journalist

ಸಾಮಾನ್ಯವಾಗಿ ಹೆತ್ತವರು ತಮ್ಮ ಮಕ್ಕಳಿಗೆ ಬುದ್ಧಿ ಮಾತು ಹೇಳುವುದು ಸಹಜ. ಆದರೆ ಇಂದಿನ ಕಾಲಘಟ್ಟಕ್ಕೆ ಹೋಲಿಸಿದರೆ ಅದು ದೊಡ್ಡ ತಪ್ಪು ಎಂದೇ ಹೇಳಬಹುದು. ಒಳ್ಳೆಯ ರೀತಿಲಿ ಮಕ್ಕಳು ಬೆಳೆಯಲಿ ಎಂಬ ತಂದೆ-ತಾಯಿಯ ಆಶಯ ಅದೆಷ್ಟೋ ಮಕ್ಕಳಿಗೆ ತೊಂದರೆ ನೀಡಿದ್ದು ಉಂಟು. ಇದೀಗ ಅಂತಹುದೇ ಘಟನೆ ಬೆಂಗಳೂರಿನ ಜೆ.ಜೆ ನಗರದಲ್ಲಿ ನಡೆದಿದೆ.

ಹೌದು. 23 ವರ್ಷದ ಯುವಕ,ಅತಿಯಾಗಿ ಟಿವಿ ನೋಡಬೇಡ ಎಂದು ತಂದೆ ಬುದ್ದಿ ಹೇಳಿದಕ್ಕೆ ದುಡುಕಿನ ನಿರ್ಧಾರ ತೆಗೆದುಕೊಂಡು ಬಾರದ ಲೋಕಕ್ಕೆ ಹೋಗಿದ್ದು,ಪೋಷಕರ ಅಳಲು ಮುಗಿಲು ಮುಟ್ಟಿದೆ.
ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಸೈಯದ್ ಸಾಹಿಲ್ (23) ಎಂದು ಗುರುತಿಸಲಾಗಿದೆ.

ಯಾವಾಗಲೂ ಮನೆಯಲ್ಲೇ ಇರುತ್ತಿದ್ದು, ಯಾವುದೇ ಕೆಲಸಕ್ಕೂ ಹೋಗದೇ ಟಿವಿ ‌ನೋಡುತ್ತಾ ಕಾಲ ಕಳೆಯುತ್ತಿದ್ದ ಎನ್ನಲಾಗಿದೆ. ಇದರಿಂದ ಕೋಪಗೊಂಡ ತಂದೆ ಯಾವಾಗಲೂ ಟಿವಿ ನೋಡ್ತಾ ಇರ್ತೀಯಾ, ಕೆಲಸಕ್ಕೆ ಹೋಗು ಎಂದು ಬೈದಿದ್ದಾರೆ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಸಾಹಿಲ್, ಟಿವಿ ರಿಮೋಟ್ ಎಸೆದು ಅಡುಗೆ ಮನೆಗೆ ತೆರಳಿ ಚಾಕುವಿನಿಂದ ತನ್ನನ್ನು ತಾನೆ ಇರಿದುಕೊಂಡಿದ್ದಾನೆ ಎನ್ನಲಾಗಿದೆ. ತಕ್ಷಣವೇ ಆತನನ್ನು ಪೋಷಕರು ಆಸ್ಪತ್ರೆಗೆ ಕರೆದೊಯ್ದರೂ ಆತ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಭಾನುವಾರ ಜೆಜೆ ನಗರದಲ್ಲಿ ಈ ಘಟನೆ ನಡೆದಿದ್ದು,ಸ್ಥಳಕ್ಕೆ ಪೊಲೀಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಈ ಸಂಬಂಧ ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.