Home Entertainment ಪ್ರಿಯಾಮಣಿ – ಮುಸ್ತಾಫಾ ರಾಜ್ ಸಂಬಂಧದಲ್ಲಿ ಬಿರುಕು!!! ಬಹುಭಾಷಾ ನಟಿ ವಿಚ್ಛೇದನ ಪಡೆಯುತ್ತಾರಾ?

ಪ್ರಿಯಾಮಣಿ – ಮುಸ್ತಾಫಾ ರಾಜ್ ಸಂಬಂಧದಲ್ಲಿ ಬಿರುಕು!!! ಬಹುಭಾಷಾ ನಟಿ ವಿಚ್ಛೇದನ ಪಡೆಯುತ್ತಾರಾ?

Hindu neighbor gifts plot of land

Hindu neighbour gifts land to Muslim journalist

ಖ್ಯಾತ ಬಹುಭಾಷಾ ನಟಿ ಪ್ರಿಯಾಮಣಿ ಮದುವೆಯ ಬಳಿಕ ಈಗ ಸುದ್ದಿಯಲ್ಲಿದ್ದಾರೆ‌. ತನ್ನ ನೈಜ ನಟನೆಯಿಂದ ಎಲ್ಲಾ ಅಭಿಮಾನಿಗಳ ಮನಸ್ಸನ್ನು ಸೂರೆಗೊಂಡ ನಟಿ ಈಕೆ. ಆದರೆ ಮದುವೆಯಾದಾಗಿನಿಂದ ಅವರ ದಾಂಪತ್ಯ ಜೀವನದ ಸುದ್ದಿಯೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಮೊದಲ ಚಿತ್ರದಲ್ಲೇ ರಾಷ್ಟ್ರಮಟ್ಟದ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿರುವ ಪ್ರಿಯಾಮಣಿ ಮೊದಲ ಸಿನಿಮಾ ಪರುತ್ತಿವೀರನ್. ಎಲ್ಲ ರೀತಿಯ ಪಾತ್ರಗಳನ್ನು ನಿರ್ವಹಿಸಿರುವ ಪ್ರಿಯಾಮಣಿ ನಂತರ ಗ್ಲಾಮರ್ ಪಾತ್ರಗಳನ್ನೂ ನಿರ್ವಹಿಸಿದ್ದರು. ನಟನೆ ಮತ್ತು ಸೌಂದರ್ಯದಿಂದ ತಮ್ಮದೇ ಅಭಿಮಾನಿ ಬಳಗ ಹೊಂದಿರುವ ಪ್ರಿಯಾಮಣಿ ಮದುವೆ ಜೀವನದ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ.

ಸಿನಿಮಾ ಅವಕಾಶಗಳು ಕಡಿಮೆಯಾಗುತ್ತಿರುವಾಗ ಪ್ರಿಯಾಮಣಿ ಅವರು ಮುಸ್ತಫಾ ರಾಜ್ ಅವರನ್ನು ಮದುವೆಯಾದರು. ಆದರೆ ನಿಮಗೆ ಗೊತ್ತಿರಬಹುದು, ಏನೆಂದರೆ ಮುಸ್ತಫಾರಾಜ್ ರನ್ನು ಪ್ರೀತಿಸಿ ಮದುವೆಯಾದ ಪ್ರಿಯಾಮಣಿ ಅವರು ಎರಡನೇ ಪತ್ನಿ ಎಂದು. ಮದುವೆಯಾದ ನಂತರವೂ ಮುಸ್ತಫಾ ಮೊದಲ ಪತ್ನಿ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಆಗಲೂ ಪ್ರಿಯಾಮಣಿ ನಮ್ಮಿಬ್ಬರ ಮಧ್ಯೆ ಎಲ್ಲವೂ ಸರಿಯಾಗಿದೆ ಎಂದಿದ್ದಾರೆ. ಆದರೆ ಇದೀಗ ಪ್ರಿಯಾಮಣಿಯ ಒಂದು ವಿಷಯ ಸಾಮಾಜಿಕ ಜಾಲತಾಣದಲ್ಲಿ ಹಾಟ್ ಟಾಪಿಕ್ ಆಗಿದೆ. ಸದ್ಯದಲ್ಲೇ ಪತಿಯೊಂದಿಗೆ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲಿದ್ದಾರೆ ಎಂಬ ವರದಿಗಳು ಬಂದಿವೆ. ದಂಪತಿಗೆ ಮದುವೆಯಾಗಿ ಬಹಳ ವರ್ಷಗಳಾದರೂ ಮಕ್ಕಳಿಲ್ಲ. ಮಕ್ಕಳ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿರುವ ಬಗ್ಗೆ ಗಾಸಿಪ್ ಶುರುವಾಗಿದೆ. ಗಂಡ ಹೆಂಡತಿ ಇಬ್ಬರೂ ಜಗಳವಾಡಿಕೊಂಡು ಬೇರೆಯಾಗಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

ಕಳೆದ ಕೆಲವು ತಿಂಗಳುಗಳಿಂದ ನಟಿ ಪ್ರಿಯಾಮಣಿ ವಿಚ್ಛೇದನದ ಬಗ್ಗೆ ಹಲವು ವದಂತಿಗಳು ಕೇಳಿಬರುತ್ತಿವೆ. ಪ್ರಿಯಾಮಣಿ ತನ್ನ ಪತಿ ಮುಸ್ತಫಾ ರಾಜ್‌ನಿಂದ ವಿಚ್ಛೇದನ ಪಡೆಯುತ್ತಿದ್ದಾರೆ ಎಂಬ ವದಂತಿಗಳು ಎಲ್ಲೆಡೆ ಹರಿದಾಡುತ್ತಿವೆ. ಸಿನಿಮಾ ಇಂಡಸ್ಟ್ರಿ ವಲಯದಲ್ಲಿ ಈ ರೀತಿಯ ವದಂತಿಗಳು ಹರಿದಾಡುತ್ತಿರುವುದು ಇದೇ ಮೊದಲಲ್ಲ. ಸ್ವಲ್ಪ ಸಮಯದ ಹಿಂದೆಯೂ ಪ್ರಿಯಾಮಣಿ ಮತ್ತು ಮುಸ್ತಫಾ ರಾಜ್ ಬೇರೆಯಾಗುತ್ತಾರೆ ಎಂಬ ವದಂತಿ ಹಬ್ಬಿತ್ತು. ಆದಾಗ್ಯೂ, ಪ್ರಿಯಾಮಣಿ ಈ ವದಂತಿಗಳನ್ನು ಪದೇ ಪದೇ ‘ಆಧಾರರಹಿತ’ ಎಂದು ಹೇಳಿದ್ದಾರೆ. ಆದರೆ ಇದೀಗ ಮತ್ತೆ ಈ ಸುದ್ದಿ ಟಾಲಿವುಡ್ ವಲಯದಲ್ಲಿ ಹರಿದಾಡುತ್ತಿದೆ.