Home latest Current Bill: ರಾಜ್ಯ ಸರ್ಕಾರದಿಂದ ವಿದ್ಯುತ್ ಬಿಲ್ ಏರಿಕೆ?

Current Bill: ರಾಜ್ಯ ಸರ್ಕಾರದಿಂದ ವಿದ್ಯುತ್ ಬಿಲ್ ಏರಿಕೆ?

Hindu neighbor gifts plot of land

Hindu neighbour gifts land to Muslim journalist

Current Bill: ಅಭಿವೃದ್ಧಿ ಯೋಜನೆಗಳಿಗೆ ಹಣವನ್ನು ಹೊಂದಿಸಲು ಹೆಣಗಾಡುತ್ತಿರುವ ಸರ್ಕಾರ ದಿನೇದಿನೇ ಬಸ್ ಟಿಕೆಟ್​ ದರ, ಮೆಟ್ರೋ ಪ್ರಯಾಣದ ಟಿಕೆಟ್ ದರ, ಹಾಲು ದರ ಏರಿಕೆಯನ್ನು ಮಾಡುತ್ತಿದೆ. ಅಂತೆಯೇ ಇದೀಗ ವಿದ್ಯುತ್ ಬಿಲ್ ಏರಿಕೆಗೂ ಕೂಡ ಪ್ರಸ್ತಾವನೆಯನ್ನು ಸಲ್ಲಿಸಿ, ರಾಜ್ಯದ ಜನತೆಗೆ ಶಾಕ್ ನೀಡಿದೆ.

 

ಹೌದು, ಉಚಿತ ಕರೆಂಟ್ ನಿಂದ ಕಂಗೆತ್ತಿರುವ ಎಲ್ಲ ಎಸ್ಕಾಂ ಗಳು ರಾಜ್ಯ ಸರ್ಕಾರಕ್ಕೆ ವಿದ್ಯುತ್ ದರವನ್ನು ಏರಿಸಬೇಕೆಂದು ಪ್ರಸ್ತಾವನೆಯನ್ನು ಸಲ್ಲಿಸಿದೆ. ಹೀಗಾಗಿ ಏಪ್ರಿಲ್​ ತಿಂಗಳಿನಿಂದ ಗ್ರಾಹಕರಿಗೆ ವಿದ್ಯುತ್ ದರ ಏರಿಕೆ ಆಘಾತ ಎದುರಾಗಲಿದ್ದು, ಒಂದು ಯುನಿಟ್ ಗೆ ರೂ.1 ರಿಂದ ಒಂದೂವರೆ ರೂಪಾಯಿ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಿಂದ ಏಪ್ರಿಲ್​​​ನಿಂದಲೇ ಹೊಸ ಏರಿಕೆ ದರ ಅನ್ವಯವಾಗುವ ಸಾಧ್ಯತೆ ಇದೆ.

 

ವಿದ್ಯುತ್ ಖರೀದಿ, ಪೂರೈಕೆಗೆ ಅಧಿಕ ವೆಚ್ಚ, ಕಲ್ಲಿದ್ದಲು ಸಂಗ್ರಹಣೆ ವೆಚ್ಚ ಸೇರಿ ಸರ್ಕಾರಕ್ಕೆ ಹೆಚ್ಚುವರಿ ಹಣಕಾಸಿನ ಹೊಡೆತ ಬೀಳುತ್ತಿದೆ. ಹೀಗಾಗಿ ಆರ್ಥಿಕ ಒತ್ತಡ ಸರಿ ದೂಗಿಸಲು ವಿದ್ಯುತ್ ದರ ಹೆಚ್ಚಳಕ್ಕೆ ಎಸ್ಕಾಂಗಳು ಪ್ರಸ್ತಾವನೆ ಸಲ್ಲಿಸಿವೆ ಎಂದು ಹೇಳಲಾಗುತ್ತಿದೆ.