Home latest Gold Detector Machine: ಭೂಮಿಯಲ್ಲಿರೋ ಚಿನ್ನ ಹುಡುಕಲು ಬಂತು ಹೊಸ ಮಷಿನ್ !! ನೀವು ಕೊಳ್ಳೋದಾದ್ರೆ...

Gold Detector Machine: ಭೂಮಿಯಲ್ಲಿರೋ ಚಿನ್ನ ಹುಡುಕಲು ಬಂತು ಹೊಸ ಮಷಿನ್ !! ನೀವು ಕೊಳ್ಳೋದಾದ್ರೆ ಎಷ್ಟಕ್ಕೆ ಸಿಗುತ್ತೆ ?!

Gold Detector Machine

Hindu neighbor gifts plot of land

Hindu neighbour gifts land to Muslim journalist

Gold Detector Machine: ಬೆಲೆಬಾಳುವ ಚಿನ್ನ ಭೂಮಿಯ ಒಳಗಿನಿಂದ ಸಿಗುತ್ತದೆ. ಭೂಮಿಯ ಒಳಗೆ ಚಿನ್ನದ ನಿಕ್ಷೇಪಗಳು ಇರುತ್ತದೆ. ಅದನ್ನು ಹುಡುಕಿ ತೆಗೆದು ಗಣಿಗಾರಿಕೆ ಮಾಡಿ ನಂತರ ಚಿನ್ನ ಪಡೆದುಕೊಳ್ಳಬಹುದು. ಇದೀಗ ಭೂಮಿಯಲ್ಲಿರೋ ಚಿನ್ನ ಹುಡುಕಲು ಹೊಸ ಮಷಿನ್ ಬಂದಿದೆ. ನೀವು ಕೊಳ್ಳೋದಾದ್ರೆ ಮೆಷಿನ್ ಎಷ್ಟಕ್ಕೆ ಸಿಗುತ್ತೆ ಗೊತ್ತಾ?!

ಭೂಮಿಯಲ್ಲಿನ ಚಿನ್ನವನ್ನು ಕಂಡು ಹಿಡಿಯುವಂತಹ ಒಂದು ಯಂತ್ರ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದನ್ನು ಚಿನ್ನದ ಶೋಧಕ ಯಂತ್ರ (Gold Detector Machine) ಎಂದು ಕರೆಯಲಾಗುತ್ತದೆ. ಒಂದು ಯಂತ್ರ ಕೆಲವು ಮೀಟರ್ ಗಳಷ್ಟು ಕೆಳಗೆ ಹುದುಗಿದ್ದರೆ ಆ ಚಿನ್ನದ ಬಗ್ಗೆ ಮಾಹಿತಿ ನೀಡುತ್ತದೆ. ಚಿನ್ನ ಎಷ್ಟು ಅಡಿ ಆಳದಲ್ಲಿ ಇದೆ ಎಂಬುದನ್ನು ಈ ಚಿನ್ನ ಶೋಧಕ ಯಂತ್ರ ತಿಳಿಸುತ್ತದೆ.

ಈ ಚಿನ್ನ ಪತ್ತೆ ಮಾಡುವ ಯಂತ್ರದ ಬೆಲೆ ಸುಮಾರು 70 ಸಾವಿರ ರೂಪಾಯಿಗಳಿಂದ 1.5 ಲಕ್ಷ ರೂಪಾಯಿಗಳವರೆಗೆ ಇದೆ ಎಂದು ಹೇಳಲಾಗಿದೆ. ಚಿನ್ನ ಡಿಟೆಕ್ಟರ್ ಯಂತ್ರ ಎಲೆಕ್ಟ್ರೋ ಮ್ಯಾಗ್ನೆಟಿಕ್ ಮೂಲಕ ಕಾರ್ಯನಿರ್ವಹಿಸುವಂತದ್ದು. ನೆಲದಲ್ಲಿ ಹುದುಗಿರುವ ಚಿನ್ನವನ್ನು ವಿದ್ಯುತ್ ಕಾಂತಿಯ ಸಂಕೇತಗಳ ಮೂಲಕ ಚಿನ್ನ ಇರುವ ಸ್ಥಳವನ್ನು ಪತ್ತೆ ಹಚ್ಚುತ್ತದೆ. ಹಾಗಾಗಿ ಸಾಮಾನ್ಯರು ಕೂಡ ಈ ಯಂತ್ರದ ಮೂಲಕ ಚಿನ್ನ ಎಲ್ಲಿದೆ ಎಂಬುದನ್ನು ಕಂಡುಹಿಡಿಯಬಹುದು.

 

ಇದನ್ನು ಓದಿ: Belthangady: ಕಳೆಂಜ ಮೀಸಲು ಅರಣ್ಯ ಪ್ರದೇಶ ಪ್ರಕರಣ: ಇಂದಿನಿಂದ (ಅ.11) ಸರ್ವೆ ಕಾರ್ಯ ಆರಂಭ