Home latest ಕೋವಿಡ್ ಎನ್ನುವುದು ಸುಳ್ಳು-ವಾಕ್ಸಿನ್ ಪಡೆದುಕೊಳ್ಳುವುದು ವ್ಯರ್ಥ!! ಹೀಗೆಂದು ಚರ್ಬಿ ಮೆರೆದ ಗಾಯಕಿಗೆ ಪಾಸಿಟಿವ್

ಕೋವಿಡ್ ಎನ್ನುವುದು ಸುಳ್ಳು-ವಾಕ್ಸಿನ್ ಪಡೆದುಕೊಳ್ಳುವುದು ವ್ಯರ್ಥ!! ಹೀಗೆಂದು ಚರ್ಬಿ ಮೆರೆದ ಗಾಯಕಿಗೆ ಪಾಸಿಟಿವ್

Hindu neighbor gifts plot of land

Hindu neighbour gifts land to Muslim journalist

ಕೋವಿಡ್ ಸೋಂಕು ಎಂಬುವುದು ಸುಳ್ಳು, ಇದಕ್ಕಾಗಿ ವ್ಯಾಕ್ಸಿನ್ ಪಡೆದುಕೊಳ್ಳುವುದು ವ್ಯರ್ಥ ಎಂದು ವಾದಿಸಿ, ತಾನಾಗಿಯೇ ಸೋಂಕು ಹರಡಿಸಿಕೊಂಡು ಪೌರುಷ ಮೆರೆದ ಮಹಿಳಾ ಗಾಯಕಿಯೊಬ್ಬರು ಇಹಲೋಕವನ್ನೇ ತ್ಯಜಿಸಿದ್ದಾರೆ.

ಇಂತಹದೊಂದು ಘಟನೆ ನಡೆದಿದ್ದು ಪಾಕಿಸ್ತಾನದ ಝೆಕ್ ಗಣರಾಜ್ಯದಲ್ಲಿ. ಇಲ್ಲಿನ ಖ್ಯಾತ ಗಾಯಕಿಯಾದ ಹನಾ ಹೊಕ್ರಾ(57) ಎಂಬ ಮಹಿಳೆಯೇ ಕೋವಿಡ್ ಸೋಂಕಿಗೆ ತುತ್ತಾಗಿ ಮೃತಪಟ್ಟ ದುರ್ದೈವಿ.ಪ್ರಾರಂಭದಿಂದಲೂ ಕೋವಿಡ್ ವಾಕ್ಸಿನ್ ವಿರೋಧಿಸಿದ ಈ ಮಹಿಳೆ ತನ್ನ ಗಂಡ ಹಾಗೂ ಮನೆಯವರಿಗೆ ಸೋಂಕು ತಗುಲಿ ಕ್ವಾರಂಟೀನ್ ಆಗಿದ್ದ ಸಂದರ್ಭದಲ್ಲಿಯೂ ಯಾವುದನ್ನೂ ಲೆಕ್ಕಿಸದೇ ಅವರೊಂದಿಗೆ ಎಲ್ಲಾ ಚಟುವಟಿಕೆಗಳಲ್ಲೂ ಭಾಗವಹಿಸಿದ್ದರು.

ಈ ನಡುವೆ ಡಬಲ್ ಡೋಸ್ ಪಡೆಯದೇ ಇದ್ದರೆ ಫೈನ್ ಬೀಳಲಾರಂಭಿಸಿದ್ದು,ಆದರೂ ಈ ಮಹಿಳೆ ವಾಕ್ಸಿನ್ ಪಡೆಯದೇ ಹಲವು ಬಾರಿ ಫೈನ್ ಕಟ್ಟಿ ತನ್ನ ತಿರುಗಾಟವನ್ನು ಮುಂದುವರಿಸಿದ್ದರು. ಆದರೆ ಆಕೆಯ ಹಠದಂತೆ ಕೋವಿಡ್ ಸೋಂಕಿಗೆ ತುತ್ತಾಗಿ ಇಹಲೋಕವನ್ನೇ ತ್ಯಜಿಸಿದ್ದಾಳೆ.