Home Interesting ಈ ಟ್ಯೂಷನ್ ಟೀಚರ್ ಗೆ 16ರ ಹುಡುಗನ ಮೇಲೊಂದು ಹುಚ್ಚು ಪ್ರೀತಿ! ಚಿಕ್ಕಮ್ಮನ ಮನೆಗೆ ಹೋಗುತ್ತೇನೆಂದ...

ಈ ಟ್ಯೂಷನ್ ಟೀಚರ್ ಗೆ 16ರ ಹುಡುಗನ ಮೇಲೊಂದು ಹುಚ್ಚು ಪ್ರೀತಿ! ಚಿಕ್ಕಮ್ಮನ ಮನೆಗೆ ಹೋಗುತ್ತೇನೆಂದ ಯುವಕ ಶಿಕ್ಷಕಿಯೊಂದಿಗೆ ಪಲಾಯನ!

Hindu neighbor gifts plot of land

Hindu neighbour gifts land to Muslim journalist

ಪ್ರೀತಿ ಮೋಹಗಳು ಯಾರ ಮೇಲೆ ಬೇಕಾದರೂ ಹುಟ್ಟಬಹುದು. ಆದರೆ ಅವುಗಳಿಗೂ ಅದರದ್ದೇ ಆದ ಮಿತಿಗಳಿವೆ. ಆ ಮಿತಿಗಳನ್ನು ಮೀರಿದವೆಂದರೆ ಅದು ಅತಿಯಾಗಿ ಪರಿಣಮಿಸುತ್ತದೆ. ಪ್ರೀತಿಗೆ ಕಣ್ಣಿಲ್ಲ ಅನ್ನೋದು ಸಿನೆಮಾ ಡೈಲಾಗ್. ಹಾಗಂತ ಅದು ಎಲ್ಲಾ ಸಮಯದಲ್ಲೂ ಕುರುಡಾಗಿದ್ದರೆ ಆಗುವ ಅನಾಹುತಗಳೇ ಬೇರೆ. ಸದ್ಯ ಇಂತಹದೇ ಒಂದು ಪ್ರಕರಣ ಬೆಳಕಿಗೆ ಬಂದಿದ್ದು, ಪ್ರೀತಿ ಕುರುಡೆಂದು ಮತ್ತೊಮ್ಮೆ ಸಾಬೀತಾಗಿದೆ.

ಉತ್ತರ ಪ್ರದೇಶದ ಲಕ್ನೋದಲ್ಲಿ ಶಿಕ್ಷಕಿ ಮತ್ತು ವಿದ್ಯಾರ್ಥಿಯ ವಿಚಿತ್ರ ಪ್ರೇಮಕಥೆಯೊಂದು ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ 16 ವರ್ಷದ ಅಪ್ರಾಪ್ತ ವಿದ್ಯಾರ್ಥಿಯನ್ನು ಹುಚ್ಚಳಂತೆ ಪ್ರೀತಿಸುತ್ತಿದ್ದ ಶಿಕ್ಷಕಿ ಇದೀಗ ಆತನೊಂದಿಗೆ ಓಡಿ ಹೋಗಿದ್ದಾಳೆ.ಇದೀಗ ವಿದ್ಯಾರ್ಥಿಯ ತಂದೆ ಶಿಕ್ಷಕಿಯ ವಿರುದ್ಧ ಸೆಕ್ಟರ್ 113 ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದದ್ದು, ಸದ್ಯ ಪೊಲೀಸರು ಪ್ರಕರಣ ಕುರಿತಂತೆ ತನಿಖೆ ನಡೆಸುತ್ತಿದ್ದಾರೆ.

16 ವರ್ಷದ ಮಗ ಭಾನುವಾರ ಮಧ್ಯಾಹ್ನ 1.30ರ ಸುಮಾರಿಗೆ ಚಿಕ್ಕಮ್ಮನ ಮನೆಗೆ ಹೋಗುವುದಾಗಿ ಹೇಳಿ ಮನೆಯಿಂದ ಹೋಗಿದ್ದು, ರಾತ್ರಿಯಾದರೂ ವಾಪಸ್ ಬಂದಿಲ್ಲ ಎಂದು ಬಾಲಕನ ತಂದೆ ದೂರಿನಲ್ಲಿ ತಿಳಿಸಿದ್ದಾರೆ. ಎದುರುಗಡೆ ಮನೆಯಲ್ಲಿ ವಾಸಿಸುತ್ತಿದ್ದ 22 ವರ್ಷದ ಯುವತಿಯ ಮೋಹಕ್ಕೆ ಸಿಲುಕಿದ್ದಾನೆ ಎಂದು ಅಪ್ರಾಪ್ತ ವಿದ್ಯಾರ್ಥಿಯ ತಂದೆ ಪೊಲೀಸರಿಗೆ ತಿಳಿಸಿದ್ದಾರೆ.

ಸೆಕ್ಟರ್ 123 ರಲ್ಲಿ ವಾಸಿಸುತ್ತಿದ್ದ 22 ವರ್ಷದ ಶಿಕ್ಷಕಿಯೊಬ್ಬಳು ಮನೆಯಲ್ಲಿಯೇ ಮಕ್ಕಳಿಗೆ ಟ್ಯೂಷನ್ (Tution) ಮಾಡುತ್ತಿದ್ದಳು. ಈ ಶಿಕ್ಷಕಿಯ ಮನೆಯ ಎದುರುಗಡೆಯೇ ವಾಸಿಸುತ್ತಿದ್ದ 16 ವರ್ಷದ ಹುಡುಗ ಟ್ಯೂಷನ್​ಗೆಂದು ಈಕೆಯ ಮನೆಗೆ ಬರುತ್ತಿದ್ದನು. ಈ ವೇಳೆ ಇಬ್ಬರ ಪರಸ್ಪರ ಇಷ್ಟಪಡಲು ಆರಂಭಿಸಿದರು. ಬಳಿಕ ಇವರಿಬ್ಬರ ನಡುವೆ ಪ್ರೀತಿ ಚಿಗುರತೊಡಗಿತು. ಆದರೆ ಭಾನುವಾರ ಇವರಿಬ್ಬರೂ ಮನೆಯಿಂದ ಓಡಿ ಹೋಗಿದ್ದಾರೆ ಎನ್ನಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಹೆಚ್ಚುವರಿ ಡಿಸಿಪಿ ಅಶುತೋಷ್ ದ್ವಿವೇದಿ ಅವರು, ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಬಾಲಕಿಯೊಂದಿಗೆ ಹುಡುಗ ಓದಲು ಹೋಗುತ್ತಿದ್ದ ಎಂದು ವರದಿಯಾಗಿದೆ. ಇಬ್ಬರೂ ರಿಲೇಶನ್ ಶಿಪ್ ನಲ್ಲಿರುವುದು ಕೂಡ ಬಹಿರಂಗವಾಗಿದೆ. ಶೀಘ್ರದಲ್ಲೇ ಇಬ್ಬರನ್ನೂ ಪತ್ತೆ ಹಚ್ಚಲಾಗುವುದು ಎಂದು ಹೇಳಿದ್ದಾರೆ.

16 ವರ್ಷದ ಮಗ ಭಾನುವಾರ ಮಧ್ಯಾಹ್ನ 1.30ರ ಸುಮಾರಿಗೆ ಚಿಕ್ಕಮ್ಮನ ಮನೆಗೆ ಹೋಗುವುದಾಗಿ ಹೇಳಿ ಮನೆಯಿಂದ ಹೋಗಿದ್ದು, ರಾತ್ರಿಯಾದರೂ ವಾಪಸ್ ಬಂದಿಲ್ಲ ಎಂದು ಬಾಲಕನ ತಂದೆ ದೂರಿನಲ್ಲಿ ತಿಳಿಸಿದ್ದಾರೆ. ಎದುರುಗಡೆ ಮನೆಯಲ್ಲಿ ವಾಸಿಸುತ್ತಿದ್ದ 22 ವರ್ಷದ ಯುವತಿಯ ಮೋಹಕ್ಕೆ ಸಿಲುಕಿದ್ದಾನೆ ಎಂದು ಅಪ್ರಾಪ್ತ ವಿದ್ಯಾರ್ಥಿಯ ತಂದೆ ಪೊಲೀಸರಿಗೆ ತಿಳಿಸಿದ್ದಾರೆ. ಇದೀಗ ಹುಡುಗನ ತಂದೆ ನೀಡಿದ ದೂರಿನ ಮೇರೆಗೆ ಶಿಕ್ಷಕಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.