Home Crime Chennai: ಬಾಡಿಗೆದಾರರ ಮನೆಯಲ್ಲಿ ಸ್ಪೈ ಕ್ಯಾಮೆರಾ ಇಟ್ಟು ಮಹಿಳೆಯ ಖಾಸಗಿ ದೃಶ್ಯ ಸೆರೆ ಹಿಡಿದ ಮಾಲೀಕನ...

Chennai: ಬಾಡಿಗೆದಾರರ ಮನೆಯಲ್ಲಿ ಸ್ಪೈ ಕ್ಯಾಮೆರಾ ಇಟ್ಟು ಮಹಿಳೆಯ ಖಾಸಗಿ ದೃಶ್ಯ ಸೆರೆ ಹಿಡಿದ ಮಾಲೀಕನ ಮಗ; ಅರೆಸ್ಟ್‌ ಮಾಡಿದ ಪೊಲೀಸರು!

Chennai

Hindu neighbor gifts plot of land

Hindu neighbour gifts land to Muslim journalist

Chennai: ದಂತ ವೈದ್ಯಕೀಯ ವಿದ್ಯಾರ್ಥಿಯನ್ನು ಮಹಿಳೆಯೊಬ್ಬರ ಮನೆಯಲ್ಲಿ ಸ್ಪೈ ಕ್ಯಾಮೆರಾ ಇಟ್ಟು ರಹಸ್ಯವಾಗಿ ಚಿತ್ರೀಕರಿಸಿದ ಆರೋಪದ ಮೇಲೆ ಬಂಧಿಸಿರುವ ಘಟನೆಯೊಂದು ಚೆನ್ನೈನಲ್ಲಿ ನಡೆದಿದೆ. ಕಟ್ಟಡದ ಮಾಲೀಕನ ಮಗನೇ ಈ ಕೃತ್ಯ ಎಸಗಿರುವುದಾಗಿ ವರದಿಯಾಗಿದೆ. ಮಹಿಳೆ ಈ ಕಟ್ಟಡದಲ್ಲಿ ಹಲವು ವರ್ಷಗಳಿಂದ ಬಾಡಿಗೆಯಲ್ಲಿ ಇರುವುದಾಗಿ ವರದಿ ತಿಳಿಸಿದೆ.

ಇದನ್ನೂ ಓದಿ: Rakshith Shetty: ರಕ್ಷಿತ್‌ ಶೆಟ್ಟಿ ʼರಿಚರ್ಡ್‌ ಆಂಟನಿʼ ನಿರ್ಮಾಣದಿಂದ ಹಿಂದೆ ಸರಿದ ಹೊಂಬಾಳೆ?

ಜ.30 (ಮಂಗಳವಾರ) ಮಹಿಳೆಯೊಬ್ಬರು ತಮ್ಮ ಕೋಣೆ ಸ್ವಚ್ಛಗೊಳಿಸುವ ವೇಳೆ ಸ್ಪೈ ಕ್ಯಾಮೆರಾ ಇಟ್ಟಿರುವ ಕುರಿತು ಘಟನೆ ಬೆಳಕಿಗೆ ಬಂದಿದೆ. ಇದರಿಂದ ಹೆದರಿದ ಮಹಿಳೆ ಪತಿಯ ಬಳಿ ಇದನ್ನು ಹೇಳಿದ್ದಾರೆ. ಪೆನ್‌ವೊಂದರಲ್ಲಿ ಕೆಂಪು ಬೆಳಕು ಬರುತ್ತಿರುವುದನ್ನು ನೋಡಿ ಈ ವಿಚಾರವನ್ನು ಪತಿಗೆ ತಿಳಿಸಿದ್ದಾರೆ. ಈ ಪೆನನ್ನು ಪರಿಶೀಲಿಸಿದ್ದಾರೆ. ಕೆಲಸದಿಂದ ಮನೆಗೆ ಮರಳಿದ ಪತಿ ಅನುಮಾನಸ್ಪದ ʼಪೆನ್‌ʼ ನನ್ನು ಪರೀಕ್ಷಿಸಿದ್ದು ಅದು ರಹಸ್ಯವಾದ ರೆಕಾರ್ಡಿಂಗ್‌ ಸಾಧನ ಎಂದು ಗೊತ್ತಾಗಿದೆ.

ನಂತರ ದಂಪತಿಗಳು ಆ ಸ್ಪೈ ಕ್ಯಾಮೆರಾದಲ್ಲಿ ಏನಿದೆ ಎಂದು ಪರಿಶೀಲನೆ ಮಾಡಿದ್ದು, ಇದರಲ್ಲಿ ಮಹಿಳೆ ಬಟ್ಟೆ ಬದಲಾಯಿಸುವ ಹಾಗೆನೇ ಬೇರೆ ಕೆಲ ಸನ್ನಿವೇಶಗಳ ವೀಡಿಯೋ ರೆಕಾರ್ಡ್‌ ಆಗಿರುವುದನ್ನು ನೋಡಿದ್ದಾರೆ.

ದಂಪತಿಗಳು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ಕಟ್ಟಡದ ಮಾಲೀಕನ ಮಗ ಇಬ್ರಾಹಿಂ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.