Rakshith Shetty: ರಕ್ಷಿತ್‌ ಶೆಟ್ಟಿ ʼರಿಚರ್ಡ್‌ ಆಂಟನಿʼ ನಿರ್ಮಾಣದಿಂದ ಹಿಂದೆ ಸರಿದ ಹೊಂಬಾಳೆ?

Rakshith Shetty: ಸಪ್ತಸಾಗರದ ಆಚೆ ಎಲ್ಲೋ ಸಿನಿಮಾದ ಯಶಸ್ಸಿನಲ್ಲಿರುವ ರಕ್ಷಿತ್ ಶೆಟ್ಟಿಗೆ ಅವರ ನಿರ್ದೇಶನದ ಮತ್ತೊಂದು ಚಿತ್ರ ವಾದ ಬ್ಯಾಚುಲರ್ ಪಾರ್ಟಿ ಗೂ ಜನರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ.

ಇದನ್ನೂ ಓದಿ: LPG Price: ಬಜೆಟ್‌ ಘೋಷಣೆ ಮುನ್ನವೇ ಜನಸಾಮಾನ್ಯರಿಗೆ ಶಾಕಿಂಗ್‌ ನ್ಯೂಸ್‌; ಹೆಚ್ಚಿದೆ ವಾಣಿಜ್ಯ ಸಿಲಿಂಡರ್‌ ಬೆಲೆ!!!

ರಕ್ಷಿತ್ ಶೆಟ್ಟಿ ಅವರ ಡ್ರೀಮ್ ಪ್ರಾಜೆಕ್ಟ್ ಆಗಿದ್ದ ರಿಚರ್ಡ್ ಆಂಟನಿ ಅನೌನ್ಸ್ ಮಾಡಿದ ದಿನದಿಂದ ಸುದ್ದಿಯಲ್ಲಿದೆ. ಸಿನಿಮಾ ಕುರಿತಂತೆ ಈ ಹಿಂದೆಯೇ ಟೈಟಲ್ ಮತ್ತು ವಿಡಿಯೋ ರಿಲೀಸ್ ಮಾಡಲಾಗಿತ್ತು. ಸುಮಾರು 10 ವರ್ಷದ ಬಳಿಕ ರಕ್ಷಿತ್ ಶೆಟ್ಟಿ ನಿರ್ದೇಶನವನ್ನು ಮಾಡುತ್ತಿರುವ ಈ ಚಿತ್ರವು ಪ್ರೇಕ್ಷಕರಲ್ಲಿ ಮತ್ತಷ್ಟು ಕುತೂಹಲದ ಜೊತೆಗೆ ನಿರೀಕ್ಷೆಯನ್ನು ಹೆಚ್ಚಿಸಿದೆ.

 

ರಿಚರ್ಡ್ ಆಂಟನಿ ಸಿನಿಮಾ ಉಳಿದವರು ಕಂಡಂತೆ ಚಿತ್ರಕ್ಕೆ ಹೋಲಿಕೆ ಆಗುತ್ತದೆ ಎನ್ನಲಾಗಿದೆ. ಈ ಸಿನಿಮಾ ವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡುತ್ತಿದೆ. ಈ ಸಿನಿಮಾ ವು ಹೊಂಬಾಳೆ ಬ್ಯಾನರ್ ನ ಹತ್ತನೇ ಸಿನಿಮಾ ಆಗಲಿದೆ. ಇದರ ಜೊತೆಗೆ ಹೊಂಬಾಳೆ ಪೃಥ್ವಿ ರಾಜನ್ ಸುಕುಮಾರನ್ ರವರು ಟೈಸನ್ ಸುಧಾ ಕೊಂಗರಾ ಅವರೊಂದಿಗೆ ಸಿನಿಮಾ ನಿರ್ಮಾಣ ಮಾಡುವ ಬಗ್ಗೆ ಹೇಳಿದರು .

 

ಆದರೆ ಇದೀಗ ಬಂದಿರುವ ಅಪ್ಡೇಟ್ ನಲ್ಲಿ ರಿಚರ್ಡ್ ಆಂಟನಿ ಸಿನಿಮಾದಿಂದ ಹೊಂಬಾಳೆ ಫಿಲ್ಮ್ಸ್ ದೂರ ಸರಿದಿದೆ ಎಂಬ ಮಾಹಿತಿ ಹೊರಬಿದ್ದಿದೆ ಎನ್ನಲಾಗಿದೆ.

 

ಹೊಂಬಾಳೆ ಫಿಲ್ಮ್ಸ್ ಈ ಹಿಂದೆ ಹೇಳಿದಂತೆ ಮನರಂಜನಾ ಕ್ಷೇತ್ರಕ್ಕೆ 3 ಸಾವಿರ ಕೋಟಿ ಹೂಡಿಕೆ ಮಾಡುವುದಾಗಿ ಹೇಳಿತ್ತು. ಈ ಮಾಹಿತಿಯಿಂದ ಸಿನಿಮಾದ ಬಜೆಟ್ ಗೆ ಸಮಸ್ಯೆಯಾಗಿದೆ, ಹೂಡಿಕೆಯ ಲಾಭದ ವಿಚಾರವೇ ಇದಕ್ಕೆ ಕಾರಣ ಎನ್ನಲಾಗಿದೆ. ಏಕೆಂದರೆ ಹೊಂಬಾಳೆ ಫಿಲ್ಮ್ಸ್ ಈ ಹಿಂದೆ ನಿರ್ಮಾಣ ಮಾಡಿದ ಧೂಮಂ ರಾಘವೇಂದ್ರ ಸ್ಟೋರ್ಸ್ʼ ಬಾಕ್ಸ್ ಆಫೀಸ್‌ನಲ್ಲಿ ಅಷ್ಟಾಗಿ ಬ್ಯುಸಿನೆಸ್‌ ಮಾಡುವಲ್ಲಿ ವಿಫಲವಾಯಿತು.

 

ಇತ್ತೀಚೆಗೆ ತೆರೆಕಂಡ ಸಾಲರ್ ಸಿನಿಮಾ ಕೂಡ ಕೆಜಿಎಫ್ ನಷ್ಟು ಲಾಭ ತಂದುಕೊಡಲಿಲ್ಲ. ಸಲಾರ್ ಆಂಧ್ರ ಮತ್ತು ತೆಲಂಗಾಣದಲ್ಲಿ ಮಾತ್ರ ಸದ್ದು ಮಾಡಿತು. ಉಳಿದ ದಕ್ಷಿಣ ಭಾಗದಲ್ಲಿ ವಿಫಲವಾಯಿತು. ಈ ಕಾರಣದಿಂದ ರಕ್ಷಿತ್ ಶೆಟ್ಟಿಯ ರಿಚರ್ಡ್ ಆಂಟನಿ ಸಿನಿಮಾಗೆ ಹೊಂಬಾಳೆ ಫಿಲ್ಮ್ಸ್ ಹಿಂದೇಟು ಹಾಕುತ್ತಿದ್ದೆ ಎನ್ನಲಾಗಿದೆ .

 

ಈ ಕುರಿತಂತೆ ಟ್ವೀಟ್ ನಲ್ಲಿ ಒಬ್ಬರು ಟ್ವಿಟ್ ಮಾಡಿದ್ದು ರಕ್ಷಿತ್ ಕೂಡ ಇದಕ್ಕೆ ಲೈಕ್ ಕೊಡುವ ಮೂಲಕ ಊಹೆ ನಿಜವಾಗುವುದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.ರಕ್ಷಿತ್‌ ಶೆಟ್ಟಿ ತಮ್ಮ ಪರಂವಃ ಬ್ಯಾನರ್‌ ಅಡಿಯಲ್ಲೇ ʼರಿಚರ್ಡ್‌ ಆಂಟನಿʼ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿದೆ.

 

ರಕ್ಷಿತ್ ಶೆಟ್ಟಿ ಅವರೇ ʼರಿಚರ್ಡ್‌ ಆಂಟನಿʼ ಸಿನಿಮಾವನ್ನು ನಿರ್ಮಿಸುತ್ತರೋ ಅಥವಾ ಬೇರೆ ಪ್ರೊಡಕ್ಷನ್ ಹೌಸ್ ಮುಂದೆ ಬರುತ್ತದೋ ಕೆಲವೆ ದಿನಗಳಲ್ಲಿ ಗೊತ್ತಾಗಲಿದೆ.

1 Comment
Leave A Reply

Your email address will not be published.