Home latest Ramanagara Rename: ರಾಮನಗರ ಇನ್ಮುಂದೆ ‘ಬೆಂಗಳೂರು ದಕ್ಷಿಣ’ – ಹೆಸರು ಬದಲಾವಣೆ ಸಚಿವ ಸಂಪುಟ ಒಪ್ಪಿಗೆ...

Ramanagara Rename: ರಾಮನಗರ ಇನ್ಮುಂದೆ ‘ಬೆಂಗಳೂರು ದಕ್ಷಿಣ’ – ಹೆಸರು ಬದಲಾವಣೆ ಸಚಿವ ಸಂಪುಟ ಒಪ್ಪಿಗೆ !!

Hindu neighbor gifts plot of land

Hindu neighbour gifts land to Muslim journalist

Ramanagara Rename: ಪರ-ವಿರೋದಗಳ ನಡುವೆ, ವಿವಾದಗಳ ನಡುವೆ ಅಂತೂ ರಾಜ್ಯ ಸರ್ಕಾರ ರಾಮನಗರ ಹೆಸರು ಬದಲಾವಣೆಗೆ ಎಲ್ಲಾ ಸಿದ್ಧತೆ ಮಾಡಿದೆ. ಹೌದು, ರಾಮನಗರ ಜಿಲ್ಲೆಗೆ ‘ಬೆಂಗಳೂರು ದಕ್ಷಿಣ’ ಎಂದು ಮರುನಾಮಕರಣ(Ramanagara Rename) ಮಾಡುವ ನಿರ್ಧಾರಕ್ಕೆ ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಮುಂದಿನ ದಿನಗಳಲ್ಲಿ ಅಗತ್ಯ ಕಾನೂನು ಮಾರ್ಪಾಡುಗಳನ್ನು ಮಾಡಿ ಅಧಿಕೃತವಾಗಿ ಹೆಸರು ಬದಲಾವಣೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಶುಕ್ರವಾರ ಸಿಎಂ ಸಿದ್ದರಾಮಯ್ಯ(CM Siddaramaiah) ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ(Cabinet Meeting) ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು ರಾಮನಗರ(Ramanagara) ಜಿಲ್ಲೆಯನ್ನು ಇನ್ಮುಂದೆ ‘ಬೆಂಗಳೂರು ದಕ್ಷಿಣ’ (Bengaluru South)ಎಂದು ನಾಮಕರಣ ಮಾಡಲು ಸಂಪುಟ ಅಸ್ತು ಎಂದಿದೆ. ಅಂದಹಾಗೆ ರಾಮನಗರ ಜಿಲ್ಲೆಯ ಹೆಸರು ಬದಲಾವಣೆಗೆ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ವಿರೋಧ ಇತ್ತು. ಅಲ್ಲದೆ, ಬಿಜೆಪಿ ನಾಯಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಪಟ್ಟು ಹಿಡಿದು ಸಂಪುಟದಲ್ಲಿ ಇದನ್ನು ಇಟ್ಟು ಒಪ್ಪಿಗೆ ಪಡೆದುಕೊಳ್ಳುವಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಯಶಸ್ವಿಯಾಗಿದ್ದಾರೆ.

ಸಭೆ ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸಚಿವ ಹೆಚ್.ಕೆ. ಪಾಟೀಲ್ (H.K.Patil) ರಾಮನಗರ ಜಿಲ್ಲೆಯ ಹೆಸರು ಬೆಂಗಳೂರು ದಕ್ಷಿಣ ಜಿಲ್ಲೆ ಅಂತ ಮರು ನಾಮಕರಣ ಮಾಡಲು ಕ್ಯಾಬಿನೆಟ್ ಒಪ್ಪಿಗೆ ನೀಡಿದೆ. ಜನರ ಬೇಡಿಕೆ ಮೇಲೆ ಈ ನಿರ್ಣಯ ಮಾಡಲಾಗಿದ್ದು, ಬ್ರ್ಯಾಂಡ್ ಬೆಂಗಳೂರು ಮಾಡುವ ನಿಟ್ಟಿನಲ್ಲಿ ಈ ನಿರ್ಧಾರ‌ ಮಾಡಲಾಗಿದೆ ಅಂತ ತಿಳಿಸಿದರು.