Home Karnataka State Politics Updates ರಾಜ್ಯ ಬಿಜೆಪಿಯಲ್ಲಿ ಮೇಜರ್ ಆಪರೇಷನ್ !! | ರಾಜ್ಯಾಧ್ಯಕ್ಷರಿಂದ ವಿವಿಧ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರ ನೇಮಿಸಿ ಆದೇಶ

ರಾಜ್ಯ ಬಿಜೆಪಿಯಲ್ಲಿ ಮೇಜರ್ ಆಪರೇಷನ್ !! | ರಾಜ್ಯಾಧ್ಯಕ್ಷರಿಂದ ವಿವಿಧ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರ ನೇಮಿಸಿ ಆದೇಶ

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು:ಮುಂಬರುವ ಚುನಾವಣಾ ಹಿನ್ನಲೆಯಲ್ಲಿ ರಾಜ್ಯ ಬಿಜೆಪಿ ಪಕ್ಷದಲ್ಲಿ ಹೊಸ ನೇಮಕಾತಿಯ ಆದೇಶವನ್ನು ಬಿಜೆಪಿ ರಾಜ್ಯಾಧ್ಯಕ್ಷರು ನಳೀನ್ ಕುಮಾರ್ ಕಟೀಲ್ ಹೊರಡಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷರು ವಿವಿಧ ಪದಾಧಿಕಾರಿಗಳನ್ನು ಹಾಗೂ ಪ್ರಕೋಷ್ಠಾಧಿಕಾರಿಗಳನ್ನು ನೇಮಕ ಮಾಡಿದ್ದು,ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ಲಕ್ಷ್ಮಣ್ ಸವದಿ, ನಯನಾ ಗಣೇಶ್ ಅವರನ್ನು ನೇಮಕ ಮಾಡಿ ಆದೇಶಿಸಿದ್ದಾರೆ.

ಇನ್ನೂ ಅನಿವಾಸಿ ಭಾರತೀಯ ವಿಭಾಗದ ರಾಜ್ಯ ಸಂಚಾರಲಕರಾಗಿ ಕ್ಯಾ.ಗಣೇಶ್ ಕಾರ್ಣಿಕ್, ಪ್ರಕೋಷ್ಠಗಳ ರಾಜ್ಯ ಸಹ-ಸಂಯೋಜಕರಾಗಿ ಹುಬ್ಬಳ್ಳಿಯ ಜಯತೀರ್ಥ ಕಟ್ಟಿ, ಕಾನೂನು ಪ್ರಕೋಷ್ಠದ ರಾಜ್ಯ ಸಂಚಾರಲಕರಾಗಿ ಬೆಂಗಳೂರಿನ ಹೆಚ್ ಯೋಗೇಂದ್ರ, ಸಹ ಸಂಚಾಲಕರಾಗಿ ಬೆಳಗಾವಿಯ ವಿನೋದ್ ಪಾಟೀಲ್ ಅವರನ್ನು ನೇಮಕ ಮಾಡಲಾಗಿದೆ.

ರಾಜ್ಯ ಮೀನುಗಾರರ ಪ್ರಕೋಷ್ಠದ ಸಂಚಾಲಕರಾಗಿ ಅಂಕೋಲಾದ ಗೋವಿಂದ ಬಾಂಡೇಕರ, ಸಹ ಸಂಚಾಲಕರಾಗಿ ಮುಧೋಳದ ನಾಗಬ್ಬ ಅಂಬಿ, ಫಲಾನುಭವಿಗಳ ಪ್ರಕೋಷ್ಠದ ರಾಜ್ಯ ಸಂಚಾಲಕರಾಗಿ ಕಲಬುರ್ಗಿಯ ಬಸವರಾಜ ಮತ್ತೀಮೋಡ ಅವರನ್ನು ನೇಮಕ ಮಾಡಲಾಗಿದೆ.

ಮಂಡ್ಯಾ ಜಿಲ್ಲಾ ಪ್ರಭಾರಿಯಾಗಿ ಬೆಂಗಳೂರಿನ ಜಗದೀಶ ಹಿರೇಮನಿ, ಯಾದಗಿರಿ ಜಿಲ್ಲಾ ಪ್ರಭಾರಿಯಾಗಿ ಕಲಬುರ್ಗಿಯ ಅಮರನಾಥ ಪಾಟೀಲ್, ದಾವಣಗೆರೆ ಜಿಲ್ಲಾ ಪ್ರಭಾರಿಯಾಗಿ ಕಾಣೇಬೆನ್ನೂರಿನ ಶಿವಲಿಂಗಪ್ಪ ಕೆ, ಚಿತ್ರದುರ್ಗ ಜಿಲ್ಲಾ ಪ್ರಭಾರಿಯಾಗಿ ಚಿಕ್ಕಮಗಳೂರಿನ ಸಿ.ಆರ್.ಪ್ರೇಮಕುಮಾರ್, ಬೆಂಗಳೂರು ಉತ್ತರ ಜಿಲ್ಲಾ ಪ್ರಭಾರಿಯಾಗಿ ಆನೇಕಲ್ ನ ಕೆ.ವಿ.ಶಿವಪ್ಪ ನೇಮಕ ಮಾಡಲಾಗಿದೆ.

ಇನ್ನೂ ಬಳ್ಳಾರಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಮುರಹರಗೌಡ ಹಾಗೂ ರಾಜ್ಯದ ನೂತನ ಜಿಲ್ಲೆಯಾಗಿ ಅಸ್ಥಿತ್ವಕ್ಕೆ ಬಂದಂತ ವಿಜಯನಗರ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಕೊಡ್ಲಿಗಿಯ ಚನ್ನಬಸವನಗೌಡ ಅವನ್ನು ನೇಮಕ ಮಾಡಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆದೇಶಿಸಿದ್ದಾರೆ.