Home latest ಬೆಳ್ತಂಗಡಿ: ಗೋವಿಂದೂರು ಶಾಲೆ ಬಳಿ ತಡರಾತ್ರಿ ಎರಡು ಗುಂಪುಗಳ ಮಧ್ಯೆ ಹೊಡೆದಾಟ, ಇಬ್ಬರ ಕೊಲೆ ಯತ್ನ

ಬೆಳ್ತಂಗಡಿ: ಗೋವಿಂದೂರು ಶಾಲೆ ಬಳಿ ತಡರಾತ್ರಿ ಎರಡು ಗುಂಪುಗಳ ಮಧ್ಯೆ ಹೊಡೆದಾಟ, ಇಬ್ಬರ ಕೊಲೆ ಯತ್ನ

Hindu neighbor gifts plot of land

Hindu neighbour gifts land to Muslim journalist

ಬೆಳ್ತಂಗಡಿ: ಕಳಿಯ ಗ್ರಾಮದ ಗೋವಿಂದೂರು ಶಾಲೆಯ ಬಳಿಯಲ್ಲಿ ನಿನ್ನೆ ತಡರಾತ್ರಿ 11 :45 ರ ಹೊತ್ತಿಗೆ ಎರಡು ಗುಂಪುಗಳ ಮಧ್ಯೆ ಜಾಗದ ವಿಚಾರವಾಗಿ ವಾದ-ವಿವಾದಗಳು ನಡೆದು ಹಲ್ಲೆ ನಡೆಸಿ ಕೊಲೆಯತ್ನದವರೆಗೂ ನಡೆದಿದೆ.

ಘಟನೆಯ ಪ್ರಕಾರ,ನೆಲ್ಲಿಗುಡ್ಡೆ ನಿವಾಸಿಯಾದ ಆಟೋ ಚಾಲಕ ಹೈದರ್ ಯಾನೆ ಜಾಕ್ ಹೈದರ್ ಮತ್ತು ಅವರ ಅಣ್ಣನಾದ ರಫೀಕ್ ಎಂಬವರು ತಮ್ಮ ಆಟೋದಲ್ಲಿ ಬಾಡಿಗೆ ಹೋಗಿ ವಾಪಾಸ್ಸು ಮನೆಯ ಕಡೆಗೆ ಹೋಗುತ್ತಿರುವಾಗ, ಸ್ಥಳೀಯ ನಿವಾಸಿ ವಿಶ್ವನಾಥ ಪೂಜಾರಿಯವರ ಮಗನಾದ ಅಶುತೋಷ್ ಮತ್ತು ಇತರ ಮೂರು ಮಂದಿ ಕಾರು ಮತ್ತು ಬೈಕ್ ಗಳೊಂದಿಗೆ ಅಟೋ ರಿಕ್ಷಾವನ್ನು ಅಡ್ಡಕಟ್ಟಿ ಕಣ್ಣಿಗೆ ಮೆಣಸಿನ ಹುಡಿ ಎರಚಿ ಮಾರಕಾಯುಧವಾದ ತಲವಾರು,ಮಚ್ಚು,ಲಾಂಗು, ತ್ರಿಶೂಲಗಳೊಂದಿಗೆ ಇಬ್ಬರಿಗೂ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.

ಇಬ್ಬರಿಗೂ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಹಲ್ಲೆ
ನಡೆಸುವಾಗ ಗಾಯಾಳುಗಳ ಬೊಬ್ಬೆ ಕೇಳಿ ಸ್ಥಳೀಯ
ಪ್ರತ್ಯಕ್ಷದರ್ಶಿಗಳಾದ ನೌಫಲ್, ಸಂತೋಷ್ ಮೊರಾಸ್, ಮತ್ತು ಸ್ಥಳೀಯರನ್ನು ಕಂಡು ಆರೋಪಿಗಳು ಮಾರಾಕಾಯುಧಗಳೊಂದಿಗೆ ನಿಮ್ಮನ್ನು ಮುಂದಕ್ಕೆ ಕೊಲ್ಲದೇ ಬಿಡುವುದಿಲ್ಲ ಎಂದು ಬೆದರಿಕೆ ಒಡ್ಡಿ
ಪರಾರಿಯಾಗಿದ್ದಾರೆ.

ಗಾಯಾಳುಗಳನ್ನು ಸ್ಥಳೀಯರು ಸೇರಿ ಆಟೋ ರಿಕ್ಷಾದಲ್ಲಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.ಹೈದರ್ ಎಂಬ ಗಾಯಾಳು ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ತೀವ್ರ ನಿಗಾ ಘಟಕದಲ್ಲಿದ್ದಾರೆ.ಈ ಘಟನೆಗೆ ಸಂಬಂಧಸಿದಂತೆ ಕೆಲವರನ್ನು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು,ಪೊಲೀಸ್ ತನಿಖೆಯ ನಂತರವಷ್ಟೇ ಖಚಿತ ಮಾಹಿತಿ ಲಭ್ಯವಾಗಲಿದೆ.