Home latest Arecanut Price : ಅಡಿಕೆ ಬೆಲೆ ಕುಸಿತ ನಿವಾರಣೆಗೆ, ವಿದೇಶದಿಂದ ಆಮದಾಗುವ ಅಡಿಕೆ ಕನಿಷ್ಟ ಬೆಲೆ...

Arecanut Price : ಅಡಿಕೆ ಬೆಲೆ ಕುಸಿತ ನಿವಾರಣೆಗೆ, ವಿದೇಶದಿಂದ ಆಮದಾಗುವ ಅಡಿಕೆ ಕನಿಷ್ಟ ಬೆಲೆ ಹೆಚ್ಚಳ !

Hindu neighbor gifts plot of land

Hindu neighbour gifts land to Muslim journalist

Arecanut Price : ದೇಶದ ಮಾರುಕಟ್ಟೆಯಲ್ಲಿ ಬೆಲೆ ಕುಸಿತವನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಅಡಿಕೆಯ ಕನಿಷ್ಠ ಆಮದು ಬೆಲೆಯನ್ನು ಕೆಜಿಗೆ 251 ರೂ.ನಿಂದ 351 ರೂ.ಗೆ ಹೆಚ್ಚಳ ಮಾಡಿದೆ‌. ಅಡಿಕೆ ದರ (Arecanut Price) ಹೆಚ್ಚಳದಿಂದ  ರೈತರು ನಿಟ್ಟುಸಿರು ಬಿಡುವಂತಾಗಿದೆ. ದೇಶದ ಬೆನ್ನೆಲುಬಿಗೆ ಭಾರಿ ಗುಡ್ ನ್ಯೂಸ್ ಸಿಕ್ಕಂತಾಗಿದೆ.

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಧೀನದಲ್ಲಿರುವ ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯ(DGFT) ವಾಣಿಜ್ಯ ಇಲಾಖೆಯು ಆಮದು ನೀತಿಯನ್ನು ತಿದ್ದುಪಡಿ ಮಾಡಿದ್ದು, ಆಮದು ಸುಂಕದ ಕನಿಷ್ಠ ಬೆಲೆಯನ್ನು  ಕೆಜಿಗೆ 251 ರೂ.ನಿಂದ 351 ರೂ.ಗೆ ಪರಿಷ್ಕರಿಸಲಾಗಿದೆ. ಈ ಮೊದಲು ಅಡಿಕೆ ಬೆಳೆಗಾರರು ದೇಶೀಯ ಬೆಳೆಗಾರರನ್ನು ರಕ್ಷಿಸಲು ಕನಿಷ್ಟ ಆಮದು ಬೆಲೆಯನ್ನು ಸರ್ಕಾರಕ್ಕೆ ಒತ್ತಾಯಿಸಿದ್ದರು. ಸದ್ಯ ಇದೀಗ ವಿದೇಶದಿಂದ ಆಮದಾಗುವ ಅಡಿಕೆ ಕನಿಷ್ಟ ಬೆಲೆ(arecanut price) ಹೆಚ್ಚಳವಾಗಿದೆ.

ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಕಡಿಮೆ ಬೆಲೆಯಲ್ಲಿ ಅಡಿಕೆ ಖರೀದಿಸೋದು ಅಸಾಧ್ಯ. ಅಲ್ಲದೆ, ದೇಶಿಯ ಮಾರುಕಟ್ಟೆಯಲ್ಲಿ ಅಡಿಕೆ ಖರೀದಿಯಲ್ಲಿ ಸುಧಾರಣೆಯಾಗುವ ಸಾಧ್ಯತೆ ಇದ್ದು, ದೇಶೀಯ ಮಾರುಕಟ್ಟೆ ಸ್ಥಿರತೆಯನ್ನು ಕಾಯ್ದುಕೊಳ್ಳಲು ಸಹಾಯ ಮಾಡಲಿದೆ.

ದೇಶದಲ್ಲಿ ಕಳೆದ ಹಣಕಾಸು ವರ್ಷಕ್ಕಿಂತ ಈ ಹಣಕಾಸು ವರ್ಷದಲ್ಲಿ ಅಡಿಕೆ(arecanut) ಆಮದು ಹೆಚ್ಚಾಗಿದೆ. ಅಲ್ಲದೆ, 2022-23 ರ ಆರ್ಥಿಕ ವರ್ಷದ ನವೆಂಬರ್ ಕೊನೆಯವರೆಗೆ ಒಟ್ಟು 61,450 ಟನ್ ಅಡಿಕೆಯನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ  ಸಂಸತ್ತಿಗೆ ತಿಳಿಸಿದೆ.

ಹಾಗೇ ಯಾವೆಲ್ಲಾ ದೇಶದಿಂದ ಆಮದು ಮಾಡಿಕೊಂಡಿದೆ ಎಂಬುದನ್ನೂ ತಿಳಿಸಿದ್ದು, ಕೆನಡಾ, ಇಂಡೋನೇಷ್ಯಾ, ಮಾಲೀವ್ ಮ್ಯಾನ್ಮಾರ್, ಸಿಂಗಾಪುರ, ಶ್ರೀಲಂಕಾ, ತಾಂಜಾನಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ವಿಯೆಟ್ನಾಂ ಮತ್ತು ನೇಪಾಳದಿಂದ (Nepal) ಅಡಿಕೆಯನ್ನು ಆಮದು ಮಾಡಿಕೊಳ್ಳಲಾಗಿದೆ ಎಂದು ಕೇಂದ್ರ ವಾಣಿಜ್ಯ ಖಾತೆ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್ ಅವರು ತಿಳಿಸಿದರು.